ಮೈಸೂರು,ಮಾರ್ಚ್,2,2022(www.justkannada.in): ಉಕ್ರೇನ್ ನಲ್ಲಿ ಮೈಸೂರಿನ 27 ವಿದ್ಯಾರ್ಥಿಗಳಿದ್ದಾರೆ. ಓರ್ವ ದೇಶಕ್ಕೆ ವಾಪಸ್ ಆಗಿದ್ದು ಉಳಿದವರನ್ನ ರಕ್ಷಿಸಬೇಕಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಡಿಸಿ ಬಗಾದಿ ಗೌತಮ್, ತಹಶೀಲ್ದಾರ್ ಗಳನ್ನ ವಿದ್ಯಾರ್ಥಿಗಳ ಮನೆಗೆ ಕಳಿಸಿದ್ದೇವೆ. ಮಾಹಿತಿ ಕಲೆ ಹಾಕುತ್ತಿದ್ದೇವೆ. ನಮಗೆ ಸಿಗುವ ಮಾಹಿತಿ ಸರ್ಕಾರಕ್ಕೆ ಕಳಿಸುತ್ತೇವೆ. ಬಹುತೇಕ ವಿದ್ಯಾರ್ಥಿಗಳು ಕೀವ್ ಕಾರ್ಖಿವ್ ನಲ್ಲಿದ್ದಾರೆ. ಕೆಲವರು ಸಂಪರ್ಕದಲ್ಲಿದ್ದಾರೆ. ಕೆಲವರು ಸಂಪರ್ಕದಲ್ಲಿಲ್ಲ. ಒಬ್ಬರು ಸಂಪರ್ಕಕ್ಕೆ ಸಿಕ್ಕರೇ 7 ರಿಂದ 8 ಮಂದಿಯ ಮಾಹಿತಿ ಸಿಗುತ್ತೆ ಎಂದರು.
ಇನ್ನು ಹಾಸನದ 6 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಹಾಸನ ಡಿಸಿ ಆರ್.ಗಿರೀಶ್, ಈಗಾಗಲೇ ಹಾಸನದ 7 ಜನ ಭಾರತಕ್ಕೆ ವಾಪಸ್ ಆಗಿದ್ದಾರೆ. 6 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದು, ಈ ಪೈಕಿ 3 ಮಂದಿ ಕಾರ್ಖಿವ್ ನಲ್ಲಿದ್ದಾರೆ. ಇಬ್ಬರು ಸುಮಿ ಪ್ರದೇಶದಲ್ಲಿ ಸಿಲುಕಿದ್ದಾರೆ. ಒಬ್ಬರ ಬಗ್ಗೆ ಮಾಹಿತಿ ಇಲ್ಲ. ಸಂಬಂಧಪಟ್ಟವರ ಜತೆ ಚರ್ಚಿಸಿ ಏರ್ ಲಿಫ್ಟ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
Key words: Ukraine-27 students – Mysore
ENGLISH SUMMARY…
27 from Mysuru and 6 students from Hassan are stranded in Ukraine
Mysuru, March 2, 2022 (www.justkannada.in): “About 27 students from Mysuru have been stranded in Ukraine. However, one among them has returned, and the remaining are yet to be rescued,” informed Mysuru District Deputy Commissioner Bagadi Gowtham.
Speaking in Mysuru today, the Deputy Commissioner informed that the district administration has asked the tahsildars to meet the families of all those students in the district. “We are compiling information regarding those who are stranded in Ukraine. Whatever information we get, we will forward it to the government. The majority of these students are in Kyiv and Kharkiv, and a few of them are in touch, and others are not. If we establish contact with at least one, we can collect information of at least 7-8 others,” he said.
He also informed that there are also six students from Hassan who are stranded in Ukraine. “The Deputy Commissioner of Hassan R. Girish has informed that seven people have returned and six more are stranded. Out of the three of them are in Kharkiv, one in the Sumi region. Information of one person is yet to be ascertained. We will discuss with the officials concerned and make efforts to airlift all of them,” he said.
Keywords: Mysuru/ Deputy Commissioner/ Bagadi Gowtham/ Ukraine/ Mysuru-Hassan students/ stranded