ಕೀವ್,ಮಾರ್ಚ್,9,2022(www.justkannada.in): ಯುದ್ಧ ಪೀಡಿತ ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆಸಿರುವ ಹಿನ್ನೆಲೆ ಉಕ್ರೇನ್ ನಲ್ಲಿರುವ ಭಾರತೀಯರನ್ನ ಅಪರೇಷನ್ ಗಂಗಾ ಮೂಲಕ ಭಾರತಕ್ಕೆ ವಾಪಸ್ ಕರೆಸಿಕೊಳ್ಳಲಾಗುತ್ತಿದೆ.
ಈ ಮಧ್ಯೆ ರಷ್ಯಾ ದಾಳಿಗೆ ಕೀವ್ನಲ್ಲಿದ್ದ ಪಾಕಿಸ್ತಾನಿ ಹುಡುಗಿ ಆಸ್ಮಾ ಶಫೀಕ್ ಎಂಬಾಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರ, ರಾಯಭಾರಿ ಕಚೇರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹೌದು ಈಕೆಯನ್ನು ಭಾರತೀಯ ರಾಯಭಾರಿ ಕಚೇರಿಯೇ ಕೀವ್ನಿಂದ ಸ್ಥಳಾಂತರ ಮಾಡಿದ್ದು, ಈ ಉಪಕಾರವನ್ನು ಎಂದಿಗೀ ಮರೆಯೋದಿಲ್ಲ ಎಂದು ಹೇಳಿದ್ದಾಳೆ. ನಾನು ಸೇರಿ ಹಲವರು ತುಂಬ ಸಂಕಷ್ಟದ ಸಮಯದಲ್ಲಿ ಇದ್ದೆವು. ನಮ್ಮೆಲ್ಲರನ್ನೂ ಭಾರತೀಯ ರಾಯಭಾರಿ ಕಚೇರಿಯೇ ಸುರಕ್ಷಿತವಾಗಿ ಕೀವ್ನಿಂದ ಸ್ಥಳಾಂತರ ಮಾಡಿದೆ ಎಂದು ಆಸ್ಮಾ ತಿಳಿಸಿದ್ದು, ನಮ್ಮನ್ನು ಯುದ್ಧ ನೆಲದಿಂದ ಪಾರು ಮಾಡಿದ್ದಕ್ಕೆ ಭಾರತೀಯ ರಾಯಭಾರಿ ಕಚೇರಿಗೆ ಧನ್ಯವಾದಗಳು. ಹಾಗೇ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಖಂಡಿತ ಇನ್ನು ನಾವು ನಮ್ಮ ದೇಶವನ್ನು ಸುರಕ್ಷಿತವಾಗಿ ಸೇರಿಕೊಳ್ಳುತ್ತೇವೆ ಎಂಬ ಆಶಯವಿದೆ ಎಂದು ಹೇಳಿದ್ದಾಳೆ. ಈ ವಿಡಿಯೋ ಕೂಡ ವೈರಲ್ ಆಗಿದೆ. ಭಾರತ ತನ್ನ ದೇಶದ ಪ್ರಜೆಗಳನ್ನಲ್ಲೇ ನೆರೆ ದೇಶದ ಬಾಂಗ್ಲಾ, ಟಿನೇಷಿಯಾ ನೇಪಾಳ ಸೇರಿ 4 ದೇಶಗಳ ವಿದ್ಯಾರ್ಥಿಗಳಿಗೂ ಉಕ್ರೇನ್ ನಿಂದ ಸ್ಥಳಾಂತರವಾಗಲು ಸಹಾಯ ಮಾಡಿದೆ ಎನ್ನಲಾಗಿದೆ.
ಈ ಮಧ್ಯೆ ಬಾಂಗ್ಲಾದೇಶದ 9 ವಿದ್ಯಾರ್ಥಿಗಳನ್ನ ಭಾರತ ಸಂರಕ್ಷಣೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಬಾಂಗ್ಲಾ ಪ್ರಧಾನಿ ಷೇಕ್ ಹಸೀನಾ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ಧನ್ಯವಾದ ತಿಳಿಸಿದ್ದಾರೆ ಎನ್ನಲಾಗಿದೆ.
Key words: Ukraine-russia-war-india