ಮೈಸೂರು,ಫೆಬ್ರವರಿ,25,2022(www.justkannada.in): ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿರುವ ಹಿನ್ನೆಲೆ ಮಧ್ಯಸ್ಥಿಕೆ ವಹಿಸುವಂತೆ ಭಾರತಕ್ಕೆ ಉಕ್ರೇನ್ ಮನವಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಮಧ್ಯಸ್ಥಿಕೆ ವಹಿಸುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.ಆದರೆ ಮಧ್ಯಸ್ಥಿಕೆ ವಹಿಸುವುದು ಅಷ್ಟು ಸುಲಭವಲ್ಲ. ರಷ್ಯಾ ಅಧ್ಯಕ್ಷರೇ ಖುದ್ದಾಗಿ ಪ್ರಧಾನಿಯವರಿಗೆ ಕರೆ ಮಾಡಿದ್ದಾರೆ. ಅಂತರಾಷ್ಟ್ರೀಯ ವಿಚಾರ ಯಾವ ರೀತಿ ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಗೊತ್ತಿದೆ. ಭಾರತ ಸರ್ಕಾರ ಅಥವಾ ಮೋದಿಯವರಿಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಮೋದಿ ಮತ್ತು ಪುಟಿನ್ ನಡುವೆ ಆತ್ಮೀಯ ಸ್ನೇಹ ಸಂಬಂಧ ಇದೆ. ಅವರು ಏನು ಮಾತನಾಡಿದ್ದಾರೊ ನನಗೆ ಮಾಹಿತಿ ಇಲ್ಲ. ಎಲ್ಲಾ ರಾಷ್ಟ್ರಗಳಿಗೂ ಸ್ವಾರ್ಥವೇ ಮುಖ್ಯ.
ಉಕ್ರೇನ್ ನ ಬಹುತೇಕ ಗ್ಯಾಸ್ ಲೈನ್ ಗಳು ರಷ್ಯಾ ಮೂಲಕ ಹಾದುಹೋಗುವೆ. ಉಕ್ರೇನ್ ಕಂಟ್ರೋಲ್ ತೆಗೆದುಕೊಳ್ಳಲು ರಷ್ಯಾ ಮುಂದಾಗಿದೆ. ಅಮೇರಿಕಾ ಕೂಡ ಸ್ವಾರ್ಥಕ್ಕಾಗಿ ಹಿಂದೆ ಯಾವೆಲ್ಲ ನಿರ್ಧಾರ ತೆಗೆದುಕೊಂಡಿದೆ ಎಂಬುದು ಗೊತ್ತಿದೆ. ಆದ್ದರಿಂದ ಈ ಸಮಸ್ಯೆ ಬಗೆಹರಿಸುವುದು ಅಷ್ಟು ಸುಲಭ ಅಲ್ಲ ಎಂದರು.
ಭಾರತೀಯರ ರಕ್ಷಣೆಗೆ ಕೆಂದ್ರ ಸರ್ಕಾರ ಬದ್ಧ
ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೆಂದ್ರ ಸರ್ಕಾರ ಬದ್ಧವಾಗಿದೆ. ಯುದ್ಧದಿಂದ ಜಗತ್ತಿನಾದ್ಯಂತ ಭಯದ ವಾತಾವರಣ ಸೃಷ್ಟಿ ಆಗಿದೆ. ಭಾರತದ ಸಾಕಷ್ಟು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಭಾರತದ ಸರ್ಕಾರ ಕೂಡ ಈ ಕುರಿತು ತುರ್ತು ಮೀಟಿಂಗ್ ಮಾಡಿದೆ. ಭಾರತ ಮೊದಲ ಹಂತದಲ್ಲಿ ಒಂದು ವಿಮಾನದ ಮೂಲಕ ಭಾರತೀಯರ ರಕ್ಷಣೆಗೆ ಮುಂದಾಗಿದೆ. ರಷ್ಯಾ ಅಧ್ಯಕ್ಷರ ಜೊತೆ ಕೂಡ ಮಾತಾನಾಡಿದ್ದಾರೆ. ಈ ಎಲ್ಲಾ ವಿಚಾರ ಚರ್ಚೆ ಮಾಡಿರುತ್ತಾರೆ
ಭಾರತೀಯರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಪ್ರಧಾನಿಗಳು ಮಾತುಕತೆ ನಡೆಸುತ್ತಿದ್ದಾರೆ. ಯಾವುದೇ ಭಯ ಬೇಡ. ಮೋದಿ ಮೇಲೆ ನಂಬಿಕೆ ಇಡಿ. ಸುರಕ್ಷಿತವಾಗಿ ಭಾರತೀಯರನ್ನು ಕರೆತರುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.
Key words: Ukraine – Russia-war-MP-Pratap Simha
ENGLISH SUMMARY…
Ukraine-Russia war: It is not so easy to intervene – MP Pratap Simha
Mysuru, February 25, 2022 (www.justkannada.in): Responding to the question on Ukraine’s appeal to the Govt. of India to intervene in the war between Russia and Ukraine, Mysuru-Kodagu MP Pratap Simha today said it is not so easy.
Speaking in Mysuru today, he said, “Expectations of the international community from India has raised. But it is not so easy to intervene. The Russian President himself has called Prime Minister Narendra Modi and spoke to him. International affairs are very sensitive, taking any decisions is very difficult. I am not a big person to give suggestions to the Govt. of India or Prime Minister Modi. But there is a cordial relationship between Modi and Putin. I don’t know the result of their telephonic discussion. Self-interest will be important to all the countries,” he said.
In his reply to the question of protecting the Indians who are stranded in Ukraine, MP Pratap Simha informed that the Government of India is committed to protecting all Indians. “Fear has gripped the entire world. Many students from India are stranded in Ukraine. The Government of India has held a meeting in this regard with the Ukrainian government. The government of India is also all set to send a flight to bring back the Indians stranded there. Our PM has spoken regarding this with the Russian President Vladimir Putin,” he added.
Keywords: Mysuru-Kodagu MP/ Pratap Simha/ Government of India/ Russia-Ukraine war/ Indians