ಮೈಸೂರು,ಡಿಸೆಂಬರ್,24,2020(www.justkannada.in) : ಯುಕೆ ಇಂದ ಮೈಸೂರಿಗೆ ಬಂದಿದ್ದು 7ಮಂದಿ ಅಲ್ಲ, 137 ಮಂದಿ. 17 ಜನರ ಕೊರೊನಾ ಪರೀಕ್ಷೆ ವರದಿ ಮುಕ್ತಾಯ. 14 ಜನರಿಗೆ ನೆಗೆಟಿವ್. ಇನ್ನೂ ಮೂವರು ಪ್ರಯಾಣಿಕರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.
ಉಳಿದ 120 ಮಂದಿಗೆ ಇಂದು ಕೊರೊನಾ ಪರೀಕ್ಷೆ ನಡೆಸುತ್ತಿದ್ದು, ಟೌನ್‌ಹಾಲ್ ಬಳಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆ ವರೆಗೆ ಪರೀಕ್ಷೆ ನಡೆಯಲಿದ್ದು, ಸದ್ಯ ಮೂವರು ಪ್ರಯಾಣಿಕರ ವರದಿ ಮೇಲೆ ಎಲ್ಲರ ಕಣ್ಣಿದೆ.
ಊರಿಗೆ ಮರಳಿದವರು 137, ಆದರೆ ಟೆಸ್ಟ್‌ಗೆ ಬಂದಿರೋದು ಮಾತ್ರ 35 ಮಂದಿ ಮಾತ್ರ
ಯು.ಕೆ ಯಿಂದ ಮರಳಿದವರಿಗೆ ಕರೊನಾ ಟೆಸ್ಟ್. ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಪ್ರಯಾಣಿಕರ ಮೀನಾಮೇಷ ಎಣಿಸುತ್ತಿದ್ದಾರೆ. ಎರಡು ದಿನಗಳಿಂದ ಕೇವಲ 35 ಮಂದಿ ಮಾತ್ರ ಟೆಸ್ಟ್‌ನಲ್ಲಿ ಭಾಗಿಯಾಗಿದ್ದಾರೆ.
ನಿನ್ನೆ 9, ಇಂದು 26 ಮಂದಿಗೆ ಟೆಸ್ಟ್. ಮಧ್ಯಾಹ್ನದ ವೇಳೆಗೆ ಕೇವಲ 26 ಮಂದಿ ಮಾತ್ರ ಭಾಗಿ. ಯು.ಕೆ ಪ್ರಯಾಣಿಕರಿಗೆ ಪ್ರತ್ಯೇಕ ಕೌಂಟರ್ ಸ್ಥಾಪನೆ ಮಾಡಲಾಗಿದೆ. ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಟೆಸ್ಟ್ ಮಾಡಿಕೊಳ್ಳಲು ಸಿಬ್ಬಂದಿಯಿಂದ ಮನವಿ ಮಾಡಲಾಗುತ್ತಿದೆ.
ಯು.ಕೆ ಪ್ರಯಾಣಿಕರು ಹಾಗೂ ಅವರ ಪ್ರಾಥಮಿಕ ಸಂಪರ್ಕಿತರ ಬಗ್ಗೆ ಮಾಹಿತಿ ಸಂಗ್ರಹ. ಎಲ್ಲರಿಗೂ ಟೆಸ್ಟ್ ಮಾಡಿಸಿಕೊಳ್ಳುವಂತೆ ಹೇಳಿದ್ದೇವೆ. ವಾರ್ಡ್ ವಾರು ಸಿಬ್ಬಂದಿಗಳನ್ನು ಕಳುಹಿಸಿ ಮಾಹಿತಿ ನೀಡಲಾಗಿದೆ. ಡಿಸೆಂಬರ್ 1 ರಿಂದ ನಗರಕ್ಕೆ ಬಂದಿರುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ತಿಳಿಸಲಾಗಿದೆ. ಯು.ಕೆ ಯಿಂದ ಮೈಸೂರಿನ ಕುವೆಂಪು ನಗರಕ್ಕೆ 40 ಮಂದಿ ಬಂದಿದ್ದಾರೆ.
ಹಲವರು ಈಗಾಗಲೇ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ಇಟ್ಟುಕೊಂಡಿದ್ದಾರೆ. ಅಂತಹವರಿಗೂ ಟೆಸ್ಟ್ ಗೆ ಬರುವಂತೆ ಹೇಳಿದ್ದೇವೆ. ನೆಗೆಟಿವ್ ವರದಿ ಇರೋ ಕಾರಣಕ್ಕೂ ಹಲವರು ಮತ್ತೆ ಟೆಸ್ಟ್ ಗೆ ಬರಲು ತಡ ಮಾಡುತ್ತಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ನಾಗರಾಜ್ ಈ ಕುರಿತು ಮಾಹಿತಿ ನೀಡಿದ್ದಾರೆ.
English summary….
137 people came from UK to Mysuru, not 7!
Mysuru, Dec.24, 2020 (www.justkannada.in): A total number of 137 people have come to Mysuru from the United Kingdom recently, not 7. Corona tests of 17 people are completed, and 14 of them are negative. The District Administration is waiting for the reports of the remaining three passengers.
Corona tests are being conducted on the remaining 120 people. A separate counter is opened near the Town Hall. Tests will be held till 4 pm. As of now, concerned authorities are anxiously awaiting the test reports of the three persons who have already been tested.
Only 35 passengers out of the total 137 people have come for testing, it is said.
Keywords: United Kingdom/ Corona tests/ Mysuru
key words : UK-To-Mysore-Not 7-137 People…!