ಮಂಗಳೂರು,ಏಪ್ರಿಲ್,24,2023(www.justkannada.in): ಉಳ್ಳಾಲದಲ್ಲಿ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಅವರು ತಮ್ಮ ನಾಮಪತ್ರವನ್ನು ವಾಪಾಸ್ ಪಡೆದಿದ್ದು ಇದಕ್ಕೆ ಕಾಂಗ್ರೆಸ್ ಒತ್ತಡವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಉಳ್ಳಾಲ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಈಗಾಗಲೇ ನಾಮಪತ್ರ ವಾಪಸ್ ಪಡೆದಿದ್ದು ಕಾಂಗ್ರೆಸ್ ಬೆದರಿಕೆ ಹಾಕಿದ್ದರು ಎಂದು ದೂರಿದ್ದಾರೆ.
ಈ ಕುರಿತು ಮಾತನಾಡಿರುವ ಅಲ್ತಾಫ್ ಕುಂಪಲ, ನಾನು ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಶುಕ್ರವಾರ ನಾನು ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ವಾಪಸ್ ಬರುತ್ತಿದ್ದೆ . ಈ ವೇಳೆ ಕಾಂಗ್ರೆಸ್ನ ಉಸ್ಮಾನ್ ಕಲ್ಲಾಪು ಸೇರಿ ಹಲವರು ನನ್ನನ್ನ ಕರೆದುಕೊಂಡು ಹೋಗಿ ಬೆದರಿಕೆ ಹಾಗೂ ಧಮ್ಕಿ ಹಾಕಿ ನಾಮಪತ್ರ ವಾಪಸ್ ತೆಗೆಯಲು ಸಹಿ ಹಾಕಿಸಿದ್ದಾರೆ.
ನಾನು ಯಾವುದೇ ಆಮಿಷಗಳಿಗೆ ಒಳಗಾಗಿಲ್ಲ,ಒತ್ತಡದಿಂದ ವಾಪಾಸ್ ತೆಗೆದಿದ್ದೇನೆ. ಈ ಬಗ್ಗೆ ಕ್ರಮಕ್ಕೆ ನಾನು ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
Key words: Ullala –JDS- candidate- nomination – returned