ಕಲೆ, ಸಂಸ್ಕೃತಿ ಸೊಬಗನ್ನು ಬಿಂಬಿಸುವ “ಗೋಡೆ ಬೆಂಗಳೂರು’’ ಚಟುವಟಿಕೆ ಘೋಷಿಸಿದ ಅನ್‌ ಬಾಕ್ಸಿಂಗ್‌ ಬೆಂಗಳೂರು

ಬೆಂಗಳೂರು,ಅಕ್ಟೋಬರ್,18,2024 (www.justkannada.in):  ಸಿಲಿಕಾನ್‌ ಸಿಟಿ ಬೆಂಗಳೂರಿನ ಗೋಡೆಗಳನ್ನು ಚಿತ್ರಗಳಿಂದ ಕಂಗೊಳಿಸುವಂತೆ ಮಾಡುವ ಉದ್ದೇಶದಿಂದ ಅನ್‌ ಬಾಕ್ಸಿಂಗ್‌ ಬೆಂಗಳೂರು ಫೌಂಡೇಷನ್‌, ಬಿಎಂಆರ್‌ಸಿಎಲ್‌ ಸಹಯೋಗದೊಂದಿಗೆ “ಗೋಡೆ ಬೆಂಗಳೂರು” ಶೀರ್ಷಿಕೆಯಡಿ ಗೋಡೆಗಳ ಮೇಲೆ ಚಿತ್ರ ಬಿಡುಸುವ ಉಪಕ್ರಮವನ್ನು ಘೋಷಿಸಿದೆ.

ಬೆಂಗಳೂರಿನಾದ್ಯಂತ ಇರುವ ಗೋಡೆಗಳ ಮೇಲೆ ನಮ್ಮ ಕಲೆ, ಸಂಸ್ಕೃತಿ, ಆಚರಣೆ ಇತ್ಯಾದಿ ಸೊಬಗನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸುವ ಚಟುವಟಿಕೆ ನಡೆಸುತ್ತಿದೆ. ಸರ್ಕಾರದ ಸಹಭಾಗಿತ್ವದಲ್ಲಿ ಇದೇ ನವೆಂಬರ್ 30 ರಿಂದ  ಡಿಸೆಂಬರ್ 15ರ ವರೆಗೆ  “ಬೆಂಗಳೂರು ಹಬ್ಬ”ವನ್ನು ಅದ್ಧೂರಿಯಿಂದ ಅನ್‌ಬಾಕ್ಸಿಂಗ್‌ ಫೌಂಡೇಷನ್‌ ಆಚರಿಸಲು ಸಿದ್ಧತೆ ನಡೆಸುತ್ತಿದೆ. ಇದರ ಭಾಗವಾಗಿ “ಗೋಡೆ ಬೆಂಗಳೂರು” ಚಟುವಟಿಕೆಯನ್ನು ಪ್ರಾರಂಭಿಸಲಾಗುತ್ತಿದೆ.

ಬಿಎಂಆರ್‌ಸಿಎಲ್‌ನ ಸಹಯೋಗದಿಂದಿಗೆ “ಗೋಡೆ ಬೆಂಗಳೂರು” ಚಟುವಟಿಕೆ ನಡೆಯಲಿದ್ದು, ನಮ್ಮ ಸಂಸ್ಕೃತಿ ಹಾಗೂ ಕ್ರಿಯಾತ್ಮಕ ಮನೋಭಾವದ ಚಿತ್ರಗಳನ್ನು ಗೋಡೆಗಳ ಮೇಲೆ ಚಿತ್ರಿಸಿ ನಮ್ಮ ನಗರವನ್ನು ಸುಂದವಾಗಿಸಲು ಪ್ರಯತ್ನಿಸಲಾಗುತ್ತಿದೆ. ಈ ಉಪಕ್ರಮವು ಮೆಟ್ರೋ ನಿಲ್ದಾಣಗಳು, ನಗರದ ಪ್ರಮುಖ ಗೋಡೆಗಳ ಮೇಲೆ ಚಿತ್ರಿಸಲಾಗುತ್ತದೆ. ಬೆಂಗಳೂರಿನ ನಿವಾಸಿಗಳು ಹಾಗೂ ಬೆಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರು ಈ ಸುಂದರ ಕಲೆಗಳ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಈಗಾಗಲೇ ಆಗಸ್ಟ್ ತಿಂಗಳಲ್ಲೇ “ ಗೋಡೆ ಬೆಂಗಳೂರು” ಚಟುವಟಿಕೆಗೆ ಕಲಾವಿದರಿಂದ ಅರ್ಜಿ ಆಹ್ವಾನಿಸಿ, ಹತ್ತು ಪ್ರತಿಭಾವಂತ ಕಲಾವಿದರನ್ನು ಆಯ್ಕೆ ಮಾಡಲಾಗಿದೆ.

ಈ ಅರ್ಜಿಗಳನ್ನು 1ಶಾಂತಿರೋಡ್ ಸ್ಟುಡಿಯೋ/ಗ್ಯಾಲರಿಯ ಸಂಸ್ಥಾಪಕ, ದೃಶ್ಯ ಕಲಾವಿದ, ಕಲಾ ಇತಿಹಾಸಕಾರ ಮತ್ತು ಮೇಲ್ವಿಚಾರಕರಾದ ಸುರೇಶ್ ಜಯರಾಮ್,  ಕಲಾವಿದೆ ಅರ್ಚನಾ ಹಂಡೆ, ಬಹುಶಿಸ್ತೀಯ ಕಲಾವಿದ ಮತ್ತು ಚಿತ್ರಕಲೆ, ಶಿಲ್ಪಕಲೆ ಕಲಾವಿದರಾದ ರವಿಕುಮಾರ್ ಕಾಶಿ ಈ ತೀರ್ಪುಗಾರರನ್ನು ಒಳಗೊಂಡ ಸ್ವತಂತ್ರ ಸಮಿತಿಯು ಪರಿಶೀಲನೆ ನಡೆಸಿ ಕಲಾವಿದರನ್ನು ಆಯ್ಕೆ ಮಾಡಿದೆ.

ಆಯ್ಕೆಯಾಗಿರುವ ಹತ್ತು ಪ್ರತಿಭಾವಂತ ಕಲಾವಿದರು ಬೆಂಗಳೂರಿನ ಗೋಡೆಗಳ ಮೇಲೆ ಸುಂದರ ಕಲಾಕೃತಿಗಳನ್ನು ರಚಿಸಲಿದ್ದಾರೆ. ಈ ಕಲಾವಿದರು ‘ಬೆಂಗಳೂರು ವರ್ಣಗಳು’ ಎಂಬ ವಿಷಯದ ಸುತ್ತ ಚಿತ್ರಗಳನ್ನು ರಚಿಸಲಿದ್ದಾರೆ. ಇದು ನಗರದ ಸಾರವನ್ನು ಸೆರೆಹಿಡಿಯುವ ಪ್ರಯತ್ನವಾಗಿದೆ. ನಮ್ಮ ನಗರದ ಇತಿಹಾಸ, ಸಂಸ್ಕೃತಿ, ಹಬ್ಬಗಳು, ಸಸ್ಯ ಮತ್ತು ಪ್ರಾಣಿಗಳು ಮತ್ತು ಬೆಂಗಳೂರನ್ನು ಅನನ್ಯವಾಗಿಸುವ ದೈನಂದಿನ ಮೋಡಿ ಸೇರಿದಂತೆ ಹಲವು ಪ್ರಮುಖ ಆಕರ್ಷಣೆಗಳು ಒಳಗೊಂಡರಲಿದೆ.

ಗೋಡೆ ಬೆಂಗಳೂರಿನ ಮುಖ್ಯ ಕ್ಯುರೇಟರ್, ಕಾಮಿನಿ ಸಾಹ್ನಿ ಮಾತನಾಡಿ, ಈ ವಿನೂತನ ಉಪಕ್ರಮವು ನಮ್ಮ ಹೆಮ್ಮೆಯ ಕಲೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಎತ್ತಿ ತೋರಿಸಲಿದೆ. “ಗೋಡೆ ಬೆಂಗಳೂರು” ಶೀರ್ಷಿಕೆಯಲ್ಲಿ ಮೂಡಿ ಬರುವ ಗೋಡೆ ಚಿತ್ರಗಳು  ಬೆಂಗಳೂರಿನ ಜನರ ಮನಸ್ಸಿನಲ್ಲಿ ಅವಿನಾಭಾವ ಸೆಳೆತ ಸೃಷ್ಟಿಸುವ ಪ್ರಯತ್ನ ಮಾಡಲಿದೆ ಎಂದಿದ್ದಾರೆ.

ಈ ಗೋಡೆ ಚಿತ್ರಗಳು ನಮ್ಮ ಸಮುದಾಯ ಎತ್ತ ಸಾಗುತ್ತಿದೆ, ಸಂಸ್ಕೃತಿಯ ಮಹತ್ವ ಇತ್ಯಾದಿ ಅಂಶಗಳನ್ನು ಜನರ ನಡುವೆ ಸಂಭಾಷಣಾ ಕ್ಯಾನ್ವಾಸ್ ಆಗಿ ಕಾರ್ಯನಿರ್ವಹಿಸಬೇಕೆಂದು ನಾವು ಬಯಸುತ್ತೇವೆ. ಪ್ರತಿಯೊಂದು ಕಲೆಯು ಒಂದೊಂದು ವಿಶಿಷ್ಟವಾದ ಕಥೆಯನ್ನು ಹೇಳುತ್ತವೆ, ಈ ಉಪಕ್ರಮವು ಅನುಭವಿ ಮತ್ತು ಉದಯೋನ್ಮುಖ ಕಲಾವಿದರಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಛಾಪು ಮೂಡಿಸಲು ಅನುವು ಮಾಡಿಕೊಡುತ್ತದೆ.

ಬೆಂಗಳೂರು ಹಬ್ಬ ಮುಖ್ಯ ಸಂಚಾಲಕ ರವಿಚಂದರ್ ವಿ ಅವರು, ಈ ಉಪಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿದರು, “ಗೋಡೆ ಬೆಂಗಳೂರು” ಕೇವಲ ಕಲೆಯನ್ನು ಚಿತ್ರಿಸುವುದಷ್ಟೇ ಅಲ್ಲದೆ, ಇದು ಬೆಂಗಳೂರಿನ ಜನರ ನಡುವೆ ಅವಿನಾಭಾವ ಸಂಬಂಧ ಬೆಸೆಯಲಿದೆ.ಈ ಉಪಕ್ರಮದ ಮೂಲಕ, ನಾವು ನಗರದ ಚೈತನ್ಯ, ವೈವಿಧ್ಯತೆ ಮತ್ತು ಅದನ್ನು ವ್ಯಾಖ್ಯಾನಿಸುವ ನಾವೀನ್ಯತೆಯ ಮನೋಭಾವವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದ್ದೇವೆ. ಕಲೆಯು ಜನರನ್ನು ಒಟ್ಟುಗೂಡಿಸುವ ಮತ್ತು ಸಂಭಾಷಣೆಗಳನ್ನು ಪ್ರೇರೇಪಿಸುವ ಶಕ್ತಿಯನ್ನು ಹೊಂದಿದ್ದು, ಇದನ್ನು ಗೋಡೆ ಬೆಂಗಳೂರಿನ ಮೂಲಕ ಸಾಕಾರಗೊಳಿಸಲಿದ್ದೇವೆ ಎಂದರು.

ಅನ್‌ ಬಾಕ್ಸಿಂಗ್ ಬೆಂಗಳೂರು ವತಿಯಿಂದ ಇದೇ ನವೆಂಬರ್‌ ತಿಂಗಳಲ್ಲಿ ಆಚರಿಸಲಾಗುತ್ತಿರುವ “ಬೆಂಗಳೂರು ಹಬ್ಬ”ದ ಮುನ್ನ ವಾರದಲ್ಲಿ “ಗೋಡೆ ಬೆಂಗಳೂರು” ಮೂಲಕ ಗೋಡೆಗಳ ಮೇಲೆ ಕಲಾಕೃತಿಗಳು ಲೈವ್‌ ಇನ್‌ಸ್ಟಾಲ್‌ ಆಗಲಿವೆ. ಈ ಅದ್ಭುತ ಕಲಾಕೃತಿಗಳನ್ನು ಬೆಂಗಳೂರಿಗರು ಕಣ್ತುಂಬಿಕೊಳ್ಳಬಹುದು.

 ಬೆಂಗಳೂರು ಹಬ್ಬ 2024” ರ ಕುರಿತು:

ಬೆಂಗಳೂರು ಹಬ್ಬ ಸರ್ಕಾರಿ ಬೆಂಬಲಿತ, ನಾಗರಿಕ-ಆಧಾರಿತ ಉತ್ಸವವಾಗಿದ್ದು, ಬೆಂಗಳೂರಿಗರಿಗಾಗಿ ಆಚರಿಸುತ್ತದೆ. ಉತ್ಸವದ ಎರಡನೇ ಆವೃತ್ತಿಯು ನವೆಂಬರ್ 30 ರಿಂದ ಡಿಸೆಂಬರ್ 15, 2024 ರವರೆಗೆ ನಡೆಯಲಿದೆ. ಬೆಂಗಳೂರು ಹಬ್ಬಾವನ್ನು ಅನ್‌ಬಾಕ್ಸಿಂಗ್‌ ಬಿಎಲ್‌ಆರ್ ಫೌಂಡೇಶನ್ ಆಯೋಜಿಸುತ್ತಿದೆ, ಇದು ಲಾಭೋದ್ದೇಶವಿಲ್ಲದ ವೇದಿಕೆ ಆಗಿದ್ದು, ಜನಸಾಮ್ಯರನ್ನು ಸಕ್ರಿಯಗೊಳಿಸುವ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಬೆಂಗಳೂರಿನ ಪ್ರಯಾಣವನ್ನು ಜಾಗತಿಕ ಟೆಕ್ ಹಬ್ ಮತ್ತು ಸಾಂಸ್ಕೃತಿಕ ನಗರಿಯನ್ನಾಗಿ ಆಚರಿಸುತ್ತದೆ. ಬೆಂಗಳೂರು ಹಬ್ಬಾ ಬೆರಗುಗೊಳಿಸುವ ಪ್ರದರ್ಶನಗಳು ಮತ್ತು ಕಲಾತ್ಮಕ ಪ್ರದರ್ಶನಗಳು ಮತ್ತು ತಲ್ಲೀನಗೊಳಿಸುವ ಅನುಭವಗಳಿಂದ ನಗರದ ರೋಮಾಂಚಕ ಸಂಸ್ಕೃತಿಯನ್ನು ಆಚರಿಸುತ್ತದೆ.

Key words: Unboxing Bangalore, activity, Gode Bangalore