ಮೈಸೂರು, ಏ.೨೫,೨೦೨೫: ಮೈಸೂರು-ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ಉಂಡಭತ್ತಿ ಕೆರೆಗೆ ಟೆಂಪೋ ಉರುಳಿ ೩೧ ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ೨೦೧೦ ಡಿಸೆಂಬರ್ ೧೪ ರಂದು ಘಟನೆ ನಡೆದಿತ್ತು.
ಉಂಡಭತ್ತಿ ಕೆರೆ ಏರಿಯ ಮೇಲೆ ಆರೋಪಿಯು ಕೆಎ-09-4622 ನಂಬರಿನ ಪ್ಯಾಸೆಂಜರ್ ಟೆಂಪೋದಲ್ಲಿ ನಿಗದಿತ ಪ್ರಯಾಣಿಕರಿಗಿಂತ ಹೆಚ್ಚು ಅಂದರೆ 40 ಜನರನ್ನು ಕೊರಿಸಿಕೊಂಡು ನಂಜನಗೂಡು ಕಡೆಯಿಂದ ಮೈಸೂರು ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಎಡಬದಿಯ ಕೆರೆಗೆ ಟೆಂಪೋವನ್ನು ಮೊಗಚಿಸಿದ. ೨೦೧೦ ಡಿಸೆಂಬರ್ ೧೪ ರಂದು ಘಟನೆ ನಡೆದಿತ್ತು.
ಈ ಪರಿಣಾಮ ಟೆಂಪೋ ಕೆರೆಯ ನೀರಿನಲ್ಲಿ ಮುಳುಗಿ, ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಪೈಕಿ 31 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಹಾಗೂ ಸ್ವಲ್ಪ ಜನರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿದ್ದು, ನಂತರ ಅಪಾದಿತ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸದೆ ಟೆಂಪೋವನ್ನು ಬಿಟ್ಟು ಪರಾರಿಯಾಗಿದ್ದ.
ಆರೋಪಿಯು ಸದರಿ ವಾಹನದ ಪರ್ಮಿಟ್‌ನ ಷರತ್ತನ್ನು ಪದೇ ಪದೇ ಉಲ್ಲಂಘನೆ ಮಾಡಿದ್ದ. ಜತೆಗೆ ಆಪಾದಿತ-2 ವಾಹನದ ಮಾಲೀಕ. ವಾಹನದ ಪರ್ಮಿಟ್‌ನ ಷರತ್ತುಗಳನ್ನು ಉಲ್ಲಂಘನೆ ಮಾಡಿ ತಮ್ಮ ವಾಹನದಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಕಳುಹಿಸಿಕೊಟ್ಟಿರುವುದು ತನಿಖೆಯಿಂದ ದೃಢಪಟ್ಟಿರುವುದರಿಂದ ಆಪಾದಿತ-1 (ಚಾಲಕ) ಮೇಲೆ ಕಲಂ: 279, 337, 304(2) 2 m 2/2. : 187, 177 ಹಾಗೂ ಅಪಾದಿತ-2 (ವಾಹನದ ಮಾಲೀಕ) ಮೇಲೆ ಕಲಂ 192(ಎ), ಐಎಂ.ವಿ ಆಕ್ಟ್ ರೀತ್ಯಾ ತನಿಖೆ ಕೈಗೊಳ್ಳಲಾಗಿತ್ತು.

ಡಿ.ವೈ.ಎಸ್.ಪಿ ಸಿ.ಡಿ ಜಗದೀಶ್ ರವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಜತೆಗೆ ನ್ಯಾಯಾಲಯದ ಪೊಲೀಸ್ ಸಿಬ್ಬಂದಿ ಮಹದೇವಸ್ವಾಮಿ ಈ ಪ್ರಕರಣದಲ್ಲಿ ಸಾಕ್ಷಿದಾರರನ್ನು ಕರೆತರುವಲ್ಲಿ ಸಹಕರಿಸಿದ್ದರು.
ಆಪಾದಿತರ ವಿರುದ್ಧದ ಆಪಾದನೆ ರುಜುವಾತುಪಡಿಸುವ ಸಲುವಾಗಿ ಅಭಿಯೋಜನೆಯು 27 ಜನ ಸಾಕ್ಷಿಗಳನ್ನು ಹಾಗೂ 83 ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿತ್ತು. ಜತೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಹೆಸರಿಸಿ ವಾದ ಮಂಡಿಸಿದ್ದರಿಂದ ಮೈಸೂರು ನಗರದ 11ನೇ ಅಧಿಕ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ನ್ಯಾಯಾಧೀಶರಾದ ಸಂಜಯ್ ಎಂ ಮಲ್ಲಿಕಾರ್ಜುನಯ್ಯ ರವರು ವಿಚಾರಣೆ ನಡೆಸಿ ಆಪಾದಿತರ ವಿರುದ್ಧ ಆಪಾದಿಸಲಾದ ಆಪಾದನೆಯು ಸಾಭೀತಾಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದರು.
ಐಎಂವಿ ಆಕ್ಟ್ ರಡಿಯಲ್ಲಿ ಮೊದಲ ಆರೋಪಿಗೆ ಒಟ್ಟಾರೆ 3 ವರ್ಷ 6 ತಿಂಗಳು ಜೈಲು ಶಿಕ್ಷೆ ಮತ್ತು ಒಟ್ಟಾರೆ- 12,600/-ದಂಡ ಮತ್ತು ಎರಡನೇ ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 10,000/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ರಾಜ್ಯದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಸೌಮ್ಯ.ಎಂ.ಎನ್ ವಿಚಾರಣೆ ನಡೆಸಿ ಸಮರ್ಥವಾಗಿ ವಾದ ಮಂಡಸಿದ್ದರು.
KEY WORDS: Mysore court, convicted,31 people were killed, tempo fell, Undabhatti Lake , Mysuru-Nanjangud Main Road.
SUMMARY:
Those accused of causing the death of 31 people in an accident were punished. The court convicted the accused in connection with the incident in which 31 people were killed when a tempo fell into Undabhatti Lake on Mysuru-Nanjangud Main Road.