ಕೇಂದ್ರ ಬಜೆಟ್: ಯಾವ ಯಾವ ವಸ್ತುಗಳ ಬೆಲೆ ಇಳಿಕೆ..?

ನವದೆಹಲಿ,ಫೆಬ್ರವರಿ,1,2025 (www.justkannada.in): ಇಂದು ಕೇಂದ್ರ ಬಜೆಟ್ ಮಂಡಿಸಲಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಬಂಪರ್‌ ಕೊಡುಗೆಗಳನ್ನು ನೀಡಲಾಗಿದೆ.

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ ನಲ್ಲಿ ಹಲವು ವಸ್ತುಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಕಾರು, ಮೊಬೈಲ್ ಮತ್ತು ಟಿವಿಯಂತಹ ಅನೇಕ ಉತ್ಪನ್ನಗಳ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ . ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ 36 ಜೀವರಕ್ಷಕ ಔಷಧಿಗಳ ಮೂಲ ಸುಂಕವನ್ನು ಹಣಕಾಸು ಸಚಿವರು ಕಡಿತಗೊಳಿಸಿದ್ದಾರೆ.

ಯಾವೆಲ್ಲ ವಸ್ತುಗಳ ಬೆಲೆ ಇಳಿಕೆ:

ಈ ಬಾರಿಯ ಬಜೆಟ್‌ ನಲ್ಲಿ ಸ್ವದೇಶಿ ಬಟ್ಟೆಗಳು, ಎಲೆಕ್ಟ್ರಿಕ್‌ ಕಾರುಗಳು, ಚರ್ಮದ ಉತ್ಪನ್ನಗಳು, ಎಲ್‌ಇಡಿ ಟಿವಿ ಬೆಲೆ, ಕ್ಯಾನ್ಸರ್‌ ಔಷಧಿ, ಮೊಬೈಲ್‌ ಹಾಗೂ ಮೊಬೈಲ್‌ ಬಿಡಿಭಾಗಗಳ ಬೆಲೆ ಇಳಿಕೆ ಮಾಡಲಾಗಿದೆ.

ಮೊಬೈಲ್ ಫೋನ್‌ಗಳು, ಮೊಬೈಲ್ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿ (ಪಿಸಿಬಿಎ) ಮತ್ತು ಮೊಬೈಲ್ ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು (ಬಿಸಿಡಿ) 20% ರಿಂದ 15% ಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಎಲ್‌ಸಿಡಿ ಮತ್ತು ಎಲ್‌ಇಡಿ ಟಿವಿ ಮಾರಾಟದ ಮೇಲಿನ ಕಸ್ಟಮ್ ಸುಂಕವು 2.5% ಕ್ಕೆ ಇಳಿಕೆಯಾಗಲಿದೆ. ಲಿಥಿಯಂ ಐಯಾನ್ ಬ್ಯಾಟರಿಗಳ ದೇಶೀಯ ಉತ್ಪಾದನೆಗೆ ಉತ್ತೇಜನ ಸಿಗಲಿದೆ. ಈ ಕಾರಣದಿಂದಾಗಿ, ಎಲ್‌ಸಿಡಿ ಮತ್ತು ಎಲ್‌ಇಡಿ ಬೆಲೆಯಲ್ಲಿ ಇಳಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.

Key words: Union Budget, items, reduction, price