ನವದೆಹಲಿ,ಜೂನ್,8,2022(www.justkannada.in): ಮುಂಗಾರು ಬೆಳೆಗಳ ಕನಿಷ್ಟ ಬೆಂಬಲ ಬೆಲೆ ಏರಿಕೆಗೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಸಂಪುಟ ಸಭೆ ಬಳಿಕ ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಮುಂಗಾರಿನಲ್ಲಿ ಬೆಳೆಯುವ ಬೆಳೆಗಳ ಬೆಂಬಲ ಬೆಲೆ ಏರಿಕೆ ನಿರ್ಧರಿಸಲಾಗಿದೆ. ಕ್ವಿಂಟಾಲ್ ಬೇಳೆ ಬೆಂಬಲ ಬೆಲೆ 480 ರೂ ಹೆಚ್ಚಳ. ಕ್ವಿಂಟಾಲ್ ಎಳ್ಳು 523 ರೂ ಹೆಚ್ಚಳ. ಸೂರ್ಯಕಾಂತಿ ಬೀಜದ ಬೆಂಬಲ ಬೆಲೆ 385 ರೂ. ಹೆಸರುಕಾಳು ಕ್ವಿಂಟಾಲ್ ಗೆ 300 ರೂ ಏರಿಕೆ ಮಾಡಲು ತೀರ್ಮಾನಿಸಲಾಗಿದೆ.
ತೊಗರಿ ಮೇಲಿನ ಬೆಂಬಲೆ ಬೆಲೆ ಕ್ವಿಂಟಾಲ್ ಗೆ 300 ರೂ, ಹೆಸರು ಕಾಳಿಗೆ 300 ರೂ. ರಾಗಿ ಬೆಂಬಲ ಬೆಲೆ 201 ರೂ. ಶೇಂಗಾ 300 ರೂ, ಹತ್ತಿ ಬೆಂಬೆಲ ಬೆಲೆ 354 ರೂ ಹೆಚ್ಚಳ ಮಾಡಲು ಸಂಫುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
Key words: Union Cabinet – raise –minimum- support -price -monsoon crop