ಬೆಂಗಳೂರು, ಸೆ.19,2019(www.justkannada.in): ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಬೆಳಿಗ್ಗೆ ಹಾರಾಟ ನಡೆಸಿದರು.
ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಪೈಲೆಟ್ ಸಮವಸ್ತ್ರ ಧರಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವದೇಶಿ ಲಘು ಯುದ್ಧ ವಿಮಾನ ತೇಜಸ್ ನಲ್ಲಿ ಕುಳಿತು ಹಾರಾಟ ನಡೆಸಿದರು. ಪೈಲೆಟ್ ತಿವಾರಿ ಜತೆ ಕೋ ಪೈಲೆಟ್ ಆಗಿ ರಾಜನಾಥ್ ಸಿಂಗ್ ಅವರು ಸುಮಾರು 28 ನಿಮಿಷಗಳ ಕಾಲ ಹಾರಾಟ ನಡೆಸಿದರು.
ಇನ್ನು ಲಘು ಯುದ್ಧ ವಿಮಾನವೇರಿದ ಮೊದಲ ರಕ್ಷಣಾ ಸಚಿವರು ಎಂಬ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಭಾಜನರಾದರು. ತೇಜಸ್ ಯುದ್ಧ ವಿಮಾನವು ಪ್ರತಿ ಗಂಟೆಗೆ 1,350 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.
ವಿಮಾನದಲ್ಲಿ ಹಾರಾಟ ಬಳಿಕ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ತೇಜಸ್ ವಿಮಾನ ಹಾರಾಟ ವಿಶೇಷ ಅನುಭವ ನೀಡಿದೆ. ಡಿ ಆರ್ ಡಿ ಓ ಹಾಗೂ ಹೆಚ್ಎ ಎಲ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
Key words: Union Defense Minister- Rajnath Singh -flew -Tejas – aircraft