ಬೆಂಗಳೂರು,ಜ,18,2020(www.justkannada.in): ಶಿಕ್ಷಣ ಕ್ಷೇತ್ರಕ್ಕೆ ವೇದಾಂತ ಭಾರತಿ ಸಂಸ್ಥೆ ಅಪಾರ ಕೊಡುಗೆ ನೀಡಿದೆ. ಅಲ್ಪಾವಧಿಯಲ್ಲಿ ಧಾರ್ಮಿಕ ಜಗತ್ತಿಗೆ ಶಂಕರಾಚಾರ್ಯರ ಕೊಡುಗೆ ಅಪಾರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘನೆ ವ್ಯಕ್ತಪಡಿಸಿದರು.
ವೇದಾಂತ ಭಾರತಿ ಸಂಸ್ಥೆ ವತಿಯಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ವಿವೇಕ ದೀಪಿನಿ ಮಹಾ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ವೇದಾಂತ ಭಾರತಿ ಸಂಸ್ಥೆಯಲ್ಲಿ ಲಕ್ಷಾಂತರ ಮಕ್ಕಳು ಶಿಕ್ಷಣ ಪಡೆದಿದ್ದಾರೆ. ಗುಜರಾತ್ ನಿಂದ ಬಂದ ಮಕ್ಕಳೂ ಸಹ ಇಲ್ಲಿ ಇದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ವೇದಾಂತ ಭಾರತಿ ಸಂಸ್ಥೆ ಕೊಡುಗೆ ಅಪಾರ. ಈ ಸಂಸ್ಥೆ ಮೌಲ್ಯಯುತ ಶಿಕ್ಷಣ ನೀಡುತ್ತಿದೆ ಎಂದು ಗುಣಗಾನ ಮಾಡಿದರು.
ಹಾಗೆಯೇ ಶಂಕರಾಚಾರ್ಯರು ದೇಶದ 4 ಕಡೆಗಳಲ್ಲಿ ಮಠಗಳನ್ನ ಸ್ಥಾಪಿಸಿದ್ದಾರೆ. ಈ ಮೂಲಕ ಅವರು ಎಲ್ಲರನ್ನ ಒಟ್ಟಿಗೂಡಿಸುವಲ್ಲಿ ಶ್ರಮ ವಹಿಸಿದ್ದಾರೆ. ಶಂಕರಾಚಾರ್ಯರು ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ. ಅಲ್ಪಾವಧಿಯಲ್ಲಿ ಧಾರ್ಮಿಕ ಜಗತ್ತಿಗೆ ಅವರ ಕೊಡುಗೆ ಅಪಾರ.
ಶಂಕರಾಚಾರ್ಯರು ಅದ್ವೈತ ಮಾರ್ಗದಿಂದ ಲೋಕ ಕಲ್ಯಾಣವಾಗುತ್ತದೆ ಎಂದು ಹೇಳಿದ್ದರು. ಭಕ್ತಿ, ಕರ್ಮ, ಜ್ಞಾನದ ಬಗ್ಗೆ ಅವರು ನಂಬಿಕೆ ಇಟ್ಟಿದ್ದರು. ಯಾವುದೇ ಮಾರ್ಗದಿಂದಲೂ ಜೀವನ ಕಲ್ಯಾಣವಾಗಬಹುದು ಎಂದು ಅವರು ನಂಬಿದ್ದರು ಎಂದು ಶಂಕರಾಚಾರ್ಯ ಅವರನ್ನ ಅಮಿತ್ ಶಾ ಸ್ಮರಿಸಿದರು.
Key words: Union Home Minister -Amit Shah bangalore- Vedantha Bharti Organization