ಬೆಂಗಳೂರು,ಜನವರಿ,13,2021(www.justkannada.in): ಇದೇ 16 ಮತ್ತು 17ರಂದು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗಾವಿಯಲ್ಲಿ 4 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಜ.16ರಂದು ಬೆಳಗ್ಗೆ 9 ಗಂಟೆಗೆ ನವದೆಹಲಿಯಿಂದ ಹೊರಡುವ ಅಮಿತ್ ಶಾ 11.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಭದ್ರಾವತಿಗೆ ಆಗಮಿಸಿ ಅಲ್ಲಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಸೆಂಟರ್ ಗೆ ಶಂಕುಸ್ಥಾಪನೆ ನೆರವೇರಿಸಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಅಲ್ಲಿಂದ ಬೆಂಗಳೂರಿಗೆ ಆಗಮಿಸಿ ವಿಧಾನಸೌಧದಲ್ಲಿ ಇಆರ್ ಎಸ್ ಎಸ್ ವಾಹನಗಳಿಗೆ ಹಸಿರು ನಿಶಾನೆ ತೋರುವರು. 5 ಗಂಟೆಗೆ ವಿಧಾನಸೌಧದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು 6 ಗಂಟೆಗೆ ಮುಖ್ಯಮಂತ್ರಿಗಳ ಚೆಂಬರ್ ಗೆ ಭೇಟಿ ನೀಡುವರು. ನಂತರ ವಿಧಾನಸೌಧದ ಕಾನ್ಫರೆನ್ಸ್ ಹಾಲ್ ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವರು.
ರಾತ್ರಿ ಬೆಂಗಳೂರಿನ ಹೊಟೆಲ್ ವಿಂಡ್ಸನ್ ಮೆನರ್ ನಲ್ಲಿ ವಾಸ್ತವ್ಯ ಹೂಡುವ ಅಮಿತ್ ಶಾ, ಜ. 17ರಂದು ಬೆಳಗ್ಗೆ 9.30ಕ್ಕೆ ವಿಶೇಷ ವಿಮಾನದ ಮೂಲಕ ಹೊರಟು 10.30ಕ್ಕೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು.
ಬೆಳಗಾವಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಬಾಗಲಕೋಟೆಗೆ ತೆರಳಿ ಅಲ್ಲಿ ಮುರುಗೇಶ ನಿರಾಣಿ (ಎಂಆರ್ ಎನ್ ಲಿಮಿಟೆಡ್) ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಪ್ರೊಜೆಕ್ಟ್ ಸಮರ್ಪಣೆ ಮಾಡುವರು.
ಅಲ್ಲಿಂದ ಹೆಲಿಕಾಪ್ಟರ್ ಮೂಲಕ 1.15ಕ್ಕೆ ಬೆಳಗಾವಿಗೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದು 3 ಗಂಟೆಗೆ ಕೆಎಲ್ ಇ ಆಸ್ಪತ್ರೆಗೆ ಭೇಟಿ ನೀಡುವರು. ಕೆಎಲ್ಇ ಆಸ್ಪತ್ರೆಯಲ್ಲಿ ಒಂದು ಗಂಟೆ ಕಳೆಯುವ ಅವರು ನಂತರ 4.10ರಿಂದ 5.30ರ ವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜನಪ್ರತಿನಿಧಿಗಳ ಸಮಾವೇಶದಲ್ಲಿ ಪಾಲ್ಗೊಳ್ಳುವರು.
ಅಲ್ಲಿಂದ 5.40ಕ್ಕೆ, ಈಚೆಗೆ ನಿಧನರಾಗಿರುವ ಕೇಂದ್ರದ ಸಚಿವರಾಗಿದ್ದ ಸುರೇಶ ಅಂಗಡಿ ನಿವಾಸಕ್ಕೆ ತೆರಳಿ 6 ಗಂಟೆಯವರೆಗೆ ಇದ್ದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಅಲ್ಲಿಂದ ಸಂಕಮ್ ಹೊಟೆಲ್ ಗೆ ತೆರಳಲಿರುವ ಅಮಿತ್ ಶಾ ಅಲ್ಲಿ 6.10ರಿಂದ 7.20ರ ವರೆಗೆ ಪಕ್ಷದ ಪದಾಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ. ರಾತ್ರಿ 7.30ಕ್ಕೆ ಬೆಳಗಾವಿಯಿಂದ ನವದೆಹಲಿಗೆ ತೆರಳುವರು.
ENGLISH SUMMARY…
Central Home Minister Amit Shah Karnataka tour details
Bengaluru, Jan. 13, 2021 (www.justkannada.in): Sri Amit Shah, Home Minister, Government of India, has undertaken a two-day tour of Karnataka. He will also take part in four programmes conducted in Belagavi.
The Central Home Minister will depart from New Delhi at 9.00 am on January 16, and arrive at the Bengaluru International Airport at 11.30 am. From there he will depart to Bhadravathi through helicopter, where he will inaugurate the Rapid Action Force Centre and participate in the public programmes. He will also participate in several other programmes organised in Bengaluru and other parts of the state and return to New Delhi.
Keywords: Amit Shah/ Central Home Minister/ two-day Karnataka tour
Key words: Union Home Minister- Amit Shah – state tour- schedule- programs