ಮೈಸೂರು,ಮೇ,14,2021(www.justkannada.in): ಲಸಿಕೆ ಕೊರತೆ ವಿಚಾರವಾಗಿ ಸರ್ಕಾರವನ್ನ ಹೈಕೋರ್ಟ್ ತರಾಟೆ ತೆಗೆದುಕೊಂಡ ಬೆನ್ನಲ್ಲೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನೀಡಿದ್ದ ಹೇಳಿಕೆ ಬಗ್ಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟೀಕಿಸಿದ್ದಾರೆ.
ನ್ಯಾಯಾಧೀಶರು ಸರ್ವಜ್ಞರಲ್ಲ ಎಂಬ ಮಾಜಿ ಸಚಿವ ಸಿ.ಟಿ ರವಿ ಹೇಳಿಕೆ ಕುರಿತು ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಸುಪ್ರೀಂಕೋರ್ಟ್ ಜಡ್ಜ್ಗಳು ಸರ್ವಜ್ಞರು ಅಂತಾನೆ ಅಂದುಕೊಂಡಿದ್ದೇವೆ. ಅವರ ಆದೇಶವನ್ನ ಪ್ರಶ್ನಿಸಿವುದು ನಿಂದನೆ ಆಗುತ್ತದೆ. ನಾವು ಜಡ್ಜ್ಗಳನ್ನ ಸರ್ವಜ್ಞರು ಅಂತಾನೆ ಭಾವನೆ ಇದೆ ಎಂದು ಹೇಳಿದರು.
ಕೇಂದ್ರಕ್ಕೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಹೈಕೋರ್ಟ್ಗಳೆ ಸೂಚನೆ ಕೊಡ್ತಿವೆ. ಚಾಮರಾಜನಗರ ಘಟನೆಯಲ್ಲಿ ಹೈಕೋರ್ಟ್ ಮಧ್ಯ ಪ್ರವೇಶ ಮಾಡಿದ್ದಕ್ಕೆ ಮೈಸೂರಿಗೆ ಗೌರವ ಬಂತು. ಅಧಿಕಾರಿಗಳೆ ಬಂದಿದ್ರೆ ಸತ್ತವರು ಮೂರೆ ಜನ ಮೈಸೂರು ಕಾರಣ ಅಂತ ವರದಿ ಬರ್ತಿತ್ತು. ಹಾಗಾಗಿ ನ್ಯಾಯಾಂಗಕ್ಕೆ ನನ್ನ ಧನ್ಯವಾದ ಇದೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.
ಸದಾನಂದಗೌಡರು ಕೇಂದ್ರ ಸಚಿವರಾಗಿರುವವರು. ಸಿ.ಟಿ.ರವಿ ಸಚಿವರಾಗಿದ್ದವರು. ಇವರು ಸರ್ಕಾರದ ಭಾಗವಾಗಿದ್ದವರು. ಅಂದ್ರೆ ಇವರೇ ಸರ್ಕಾರದ ರೀತಿ ಅರ್ಥ. ಸದಾನಂದಗೌಡರು ನೇಣು ಹಾಕಿಕೊಳ್ಳಲಾ ಅಂದ್ರೆ ಸರ್ಕಾರವೇ ನೇಣು ಹಾಕಿಕೋಳ್ಳುತ್ತಾ? ಈ ದೇಶದಲ್ಲಿ ಕಾನೂನು ಇದೆ. ವ್ಯವಸ್ಥೆಯನ್ನ ಅಳಿಯುವುದು ಸರಿಯಲ್ಲ ಎಂದು ಸ್ವಪಕ್ಷದವರ ವಿರುದ್ದವೇ ಟೀಕಿಸಿದ ಹೆಚ್.ವಿಶ್ವನಾಥ್ ಕಿಡಿಕಾರಿದರು.
Key words: Union Minister -DV Sadananda Gowda -CT Ravi- statement-criticized – MLC- H Vishwanath