ಮಡಿಕೇರಿ,ಫೆಬ್ರವರಿ,4,2021(www.justkannada.in): ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿದ್ದು ಈ ನಡುವೆ ಪೆಟ್ರೋಲ್ ,ಡಿಸೇಲ್ ಮೇಲಿನ ಸೆಸ್ ಏರಿಕೆ ಮಾಡಿದ್ದು ಬೆಲೆ ಏರಿಕೆಯಾಗಿದೆ.
ಇನ್ನು ಪೆಟ್ರೋಲ್ ,ಡಿಸೇಲ್ ಮೇಲಿನ ಸೆಸ್ ಏರಿಕೆಯನ್ನ ಕೇಂದ್ರ ರಸಗೊಬ್ಬರ ಸಚಿವ ಡಿ.ವಿ ಸದಾನಂದಗೌಡ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಮಡಿಕೇರಿಯಲ್ಲಿ ಮಾತನಾಡಿದ ಅವರು, ತೆರಿಗೆ, ಸೆಸ್ ಮಧ್ಯೆ ವ್ಯತ್ಯಾಸವಿದೆ. ಅದನ್ನ ತಿಳಿದುಕೊಳ್ಳಬೇಕು. ಸೆಸ್ಅನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗುವುದೋ ಆ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆ. ಆದರೆ ಟ್ಯಾಕ್ಸ್ ಅನ್ನ ಯಾವುದಕ್ಕೆ ಬೇಕಾದರೂ ಬಳಸಬಹುದು. ಈ ರೀತಿಯ ವ್ಯವಸ್ಥೆಗಳಿಂದಲೇ ಇಂದು 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲು ಸಾಧ್ಯವಾಗಿದೆ. 8 ಕೋಟಿ ಮಹಿಳೆಯರಿಗೆ ಉಚಿತ್ ಗ್ಯಾಸ್ ನೀಡುತ್ತಿರುವುದು ಸೆಸ್ ಹಣದಿಂದ ಎಂದು ಹೇಳಿದರು.
ಹಾಗೆಯೇ ಸರ್ಕಾರವನ್ನ ಡಕೋಟಾ ಎಕ್ಸ್ ಪ್ರೆಸ್ ಎಂದು ಟೀಕಿಸಿದ್ದ ಸಿದ್ಧರಾಮಯ್ಯಗೆ ಟಾಂಗ್ ನೀಡಿದ ಡಿ.ವಿ ಸದಾನಂದಗೌಡ, ಅವರಿಗೆ ಶಬ್ದ ಪ್ರಯೋಗ ಗೊತ್ತಿಲ್ಲ. 5 ವರ್ಷ ಸಿಎಂ ಆಗಿದ್ದವರು. ಬಜೆಟ್ ಮಂಡಿಸಿದವರು. ಅವರ ಹೇಳಿಕೆಗೆ ನಾನು ಉತ್ತರಿಸಲ್ಲ ಎಂದರು.
Key words: Union minister -DV Sadananda Gowda –defending- cess hike -petrol and diesel