ಬೆಂಗಳೂರು,ಜನವರಿ,3,2025 (www.justkannada.in): ಜೆಡಿಎಸ್ ಮುಗಿಸಬೇಕು ಅಂತಾ ಆಪರೇಷನ್ ಹಸ್ತ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಅಪರೇಷನ್ ಹಸ್ತ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಯಾವುದು ವರ್ಕೌಟ್ ಆಗಲ್ಲ ಬಿಡಿ. ಜೆಡಿಎಸ್ ಮುಗಿಸಬೇಕು ಅಂತಾ ಅಪರೇಷನ್ ಹಸ್ತ ಮಾಡುತ್ತಿದ್ದಾರೆ. ಆದರೆ ಯಾವ ಶಾಸಕರು ಸಹ ಹೋಗುವ ಪರಿಸ್ಥಿತಿ ಇಲ್ಲ. ಕಾಂಗ್ರೆಸ್ ನವರು ಏನೇನು ಮಾಡುತ್ತಿದ್ದಾರೆ ಗೊತ್ತಿದೆ. ದೇವರೆ ಅವರಿಗೆ ಶಿಕ್ಷೆ ಕೊಡುತ್ತೆ ಅಂತಾ ಸುಮ್ಮನ್ನಿದ್ದೇವೆ ಎಂದರು.
ಬಸ್ ಪ್ರಯಾಣ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಬೆಲೆ ಏರಿಕೆಗೆ ಸಿದ್ಧರಾಗಿ ಎಂಬ ಬಗ್ಗೆ ಸರ್ಕಾರ ಈಗಾಗಲೇ ಸೂಚನೆ ಕೊಟ್ಟಿದೆ. ಹಲವಾರು ಬಾರಿ ಬೆಲೆ ಏರಿಕೆ ಮಾಡಿದೆ. ಜನರು ಕೂಡ ಅಷ್ಟೇ, ಒಂದೆರಡು ದಿನ ವಿರೋಧ ವ್ಯಕ್ತಪಡಿಸಿ ಮರೆತುಬಿಡುತ್ತಾರೆ. ರಾಜ್ಯದಲ್ಲಿ ಸರ್ಕಾರ ಇದೆ ಎಂಬುದೇ ಅನಿಸುತ್ತಿಲ್ಲ. ಸ್ವೇಚ್ಛಾಚಾರವಾಗಿ ಆಡಳಿತ ನಡೆಯುತ್ತಿದೆ. ಹೇಳೋರು ಕೇಳೋರು ಯಾರು ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.
Key words: Operation Hasta, JDS, Union Minister, HDK