ಬೆಂಗಳೂರು ,ಏಪ್ರಿಲ್,12,2025 (www.justkannada.in): ಸಿಎಂ ಕುರ್ಚಿ ಉಳಿಸಿಕೊಳ್ಳಲು ‘ಜಾತಿ ಗಣತಿ’ ಡ್ರಾಮಾ ಶುರು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆಯಾಗಿದ್ದು, ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ಎಂಬ ಡ್ರಾಮಾ ಶುರು ಮಾಡಿದ್ದಾರೆ. ಜಾತಿ ಜಾತಿಯ ಮಧ್ಯ ಸಂಘರ್ಷ ಸೃಷ್ಟಿಸುತ್ತಿದ್ದಾರೆ. ಕಾಂತರಾಜು ವರದಿ ಸಿದ್ದವಾಗಿ 10 ವರ್ಷ ಆಗಿದೆ. ಇದೇ ಸಿಎಂ ಸಿದ್ದರಾಮಯ್ಯ ಇದ್ದರೂ ಸಹ ಯಾಕೆ ವರದಿ ಜಾರಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಕಳೆದ ಎರಡು ವರ್ಷ ಗ್ಯಾರಂಟಿ ಯೋಜನೆಗಳಿಂದ ಬಡವರ ಆರ್ಥಿಕ ಶಕ್ತಿಯನ್ನು ವೃದ್ಧಿ ಮಾಡಿದ್ದೇವೆ ಅಂತ ಹೇಳಳುತ್ತಾರೆ. ಇದೆಲ್ಲ ಕೇವಲ ಜಾತಿ ಜಾತಿ ಮಧ್ಯ ಸಂಘರ್ಷ ಉಂಟು ಮಾಡುವ ಹುನ್ನಾರ. ಜಾತಿ ಸಂಘರ್ಷಕ್ಕೆ ಏನು ವೇದಿಕೆ ಸಿದ್ಧ ಮಾಡಬೇಕು ಅದನ್ನು ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು. Key words:
key words: Caste census, drama, CM, chair, Union Minister, HDK