ಮೈಸೂರು,ಜನವರಿ,4,2025 (www.justkannada.in): ಮೈಸೂರಿನ ಕೆಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ದೇವನೂರು ಬಡಾವಣೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡಲಿ. ಕೆಸರೆ ಗ್ರಾಮಕ್ಕೆ ಸಿದ್ದರಾಮಯ್ಯ ಹೆಸರಿಡಿ ಎಂದು ಲೇವಡಿ ಮಾಡಿದರು.
ರಸ್ತೆಯಲ್ಲಿ ಯಾಕೆ ಪ್ರತಿಭಟನೆ ಮಾಡ್ತಿರಾ ಅಂತ ಬಿಜೆಪಿ ಅವರಿಗೆ ಹೇಳಿದ್ದೇನೆ. ಪ್ರಿನ್ಸೆಸ್ ರಸ್ತೆ ಬದಲಾವಣೆ ಮುನ್ನಲೆಗೆ ಬಂದಾಗಲೂ ಸಿಎಂ ಮೌನವಾಗಿದ್ದಾರೆ. ಸಿಎಂ ರಸ್ತೆ ವಿಷಯದಲ್ಲಿ ಜಾಣ ಮೌನವಾಗಿದ್ದಾರೆ. ಮುಡಾದ ಕೆಸರೆ ಗ್ರಾಮ ಬಂತಲ್ಲ ಅದಕ್ಕೆ ಸಿದ್ದರಾಮಯ್ಯ ಹೆಸರನ್ನು ಇಡಿ. ಅದನ್ನು ಬಿಟ್ಟು ರಾಜಮನೆತನದ ಹೆಸರು ಯಾಕೆ ತೆಗಿತೀರಾ ಎಂದು ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟರು.
ದರ ಹೆಚ್ಚಳ ಜನಕ್ಕೆ ತಾನೇ ಮಂತ್ರಿಗಳಿಗೆ ಅಲ್ವಾಲ್ಲ..?
ಕೆ ಎಸ್ ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ದರ ಹೆಚ್ಚಳ ಜನಕ್ಕೆ ತಾನೇ. ಮಂತ್ರಿಗಳಿಗೆ ಅಲ್ವಾಲ್ಲ. ಅವರಿಗೇನು ? ಜನರ ಜೋಬಿಗೆ ಕೈ ಹಾಕಿ ಲೂಟಿ ಮಾಡುತ್ತಿದ್ದಾರೆ. ಜನರಿಗೆ ಕಷ್ಟ ಕೊಟ್ಟು ಖುಷಿ ಪಡುವ ಸರ್ಕಾರ ಇದು. ಗ್ಯಾರಂಟಿಗಳಿಗೆ ಇಬ್ಬರು ಮಹನೀಯರು ಸಹಿ ಹಾಕಿದರು. ಸಿದ್ದರಾಮಯ್ಯ ಸಹಿ ಹಾಕಿದ್ರು. ಇನ್ನೊಬ್ಬ ಮಹಾನ್ ವ್ಯಕ್ತಿ ಬಗ್ಗೆ ನಾನು ಹೇಳಲ್ಲ. ದೇಶದಲ್ಲಿ ಮನಮೋಹನ್ ಸಿಂಗ್ ಬಳಿಕ ಸಿದ್ದರಾಮಯ್ಯ ದೊಡ್ಡ ಆರ್ಥಿಕ ತಜ್ಞರು ಅವರೇ ಅಲ್ಲವೇ ಸಹಿ ಹಾಕಿರೋದು. ಮಂತ್ರಿಗಳ ಅಭಿವೃದ್ದಿ ಆಗುತ್ತಿದೆ. ಜನಗಳ ಅಭಿವೃದ್ದಿ ಯಾರಿಗೆ ಬೇಕು. ಎಲ್ಲದಕ್ಕೂ ಕೂಡ ಪರ್ಸಂಟೇಜ್ ಕೇಳುತ್ತಾರೆ. ಆಶ್ರಯ ಮನೆಗಳಿಗೂ ವಿಧಾನಸಭೆಯಲ್ಲಿ ವಸೂಲಿ ಶುರು ಆಗಿದೆಯಂತೆ ಎಂದು ಆರೋಪಿಸಿದರು.
ಅಪರೇಷನ್ ಹಸ್ತದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಅದು ನಡೀತಾನೆ ಇದೆ. ನಮ್ಮಲ್ಲಿ 18 ಜನ ಶಾಸಕರಿದ್ದಾರೆ. ಒಟ್ಟಗಿದ್ದಾರೆ ಅದನ್ನೇ ಹರೀಶ್ ಗೌಡ ಹೇಳಿರೋದು. ಒತ್ತಡ ಅಂತೂ ಇರತ್ತೆ ಅದನ್ನೇ ಬೆಳಗಾವಿಯಲ್ಲಿ ಶಾಸಕರು ಕೂತು ಮಾತನಾಡಿದ್ದಾರೆ ಅಷ್ಟೇ. ನಮ್ಮ ಶಾಸಕರು ನಮ್ಮ ಜೊತೆ ಇರುತ್ತಾರೆ ಎಂದರು.
2006-2007 ರಲ್ಲಿ ನಾನು ಮೈಸೂರಿಗೆ ಸಾಕಷ್ಟು ಅನುದಾನ ಕೊಟ್ಟಿದ್ದೇನೆ. ನಾನು ಬಂಬು ಬಜಾರ್ ಅಲ್ಲಿ ಎಷ್ಟು ಮನೆ ಕಟ್ಟಿದ್ದೇನೆ. ರಾಜ ಕಾಲುವೆ ಕೆಲಸ ಮಾಡಿದ್ದೇನೆ. ಅದೆಲ್ಲ ನಾನು ಮಾಡಿದ್ದು ಅಂತ ನನ್ನ ಹೆಸರಿಡಿ ಅಂತ ಹೇಳಿದ್ದೀನಾ. ನಾನು ಜನರ ಹೃದಯದಲ್ಲಿರಬೇಕು ಅಷ್ಟೆ ಎಂದು ಹೆಚ್.ಡಿಕೆ ಹೇಳಿದರು.
ಮನೆ ಎಂದ ಮೇಲೆ ಮುನಿಸು ಇರೋದಿಲ್ಲವೇ?
ಶಾಸಕ ಜಿ.ಟಿ.ದೇವೇಗೌಡರ ನಡುವಿನ ಮುನಿಸು ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ಮನೆ ಎಂದ ಮೇಲೆ ಮುನಿಸು ಇರೋದಿಲ್ಲವೇ? ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ. ನಮ್ಮಲ್ಲಿ ಇರುವ ಭಿನ್ನಾಭಿಪ್ರಾಯ ದೂರ ಆಗುತ್ತವೆ. ಎಲ್ಲವೂ ಕೂಡ ಸರಿ ಹೋಗುತ್ತದೆ. ಸಂಜೆಯ ಜೆಡಿಎಸ್ ಸಭೆಗೆ ಜಿಟಿದೇವೇಗೌಡರು ಬರುತ್ತಾರೆ ಎಂದರು.
Key words: Name, Road, Siddaramaiah, Union Minister, HDK