ಇಬ್ಬರ ಜಗಳವನ್ನು ಬಿಜೆಪಿ ನಾಯಕರೇ ಬಗೆಹರಿಸಬೇಕು- ಕೇಂದ್ರ ಸಚಿವ ಹೆಚ್ ಡಿಕೆ

ಮೈಸೂರು,ಜನವರಿ,24,2025 (www.justkannada.in):  ಬಿಜೆಪಿಯಲ್ಲಿ ಬಿವೈ ವಿಜಯೇಂದ್ರ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಬಣ ಸಮರ ಸಾರುತ್ತಿರುವ ನಡುವೆಯೇ ಇದೀಗ ಆಪ್ತರಂತಿದ್ದ ಶಾಸಕ ಜನಾರ್ಧನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ನಡುವೆ ಒಡಕು ಉಂಟಾಗಿದ್ದು ಪರಸ್ಪರ ಕೆಂಡಕಾರುತ್ತಿದ್ದಾರೆ. ಈ ಮಧ್ಯೆ ಶ್ರೀರಾಮುಲು ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ ಎಂಬ ಕುತೂಹಲ ಮೂಡಿಸಿದೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಇಬ್ಬರ ಜಗಳವನ್ನ ಬಿಜೆಪಿ ನಾಯಕರೇ ಬಗೆಹರಿಸಬೇಕು. ಶ್ರೀರಾಮುಲು ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗಲ್ಲ .  ಇಬ್ಬರನ್ನುಒಂದು ಮಾಡುವಂತೆ ಬಿಜೆಪಿ ನಾಯಕರಿಗೆ ಹೇಳುತ್ತೇನೆ.  ಒಂದು ಕಾಲದಲ್ಲಿ ಇಬ್ಬರು ಆಪ್ತರು ಸ್ನೇಹಿತರಂತೆ ಇದ್ದರು ಎಂದು ತಿಳಿಸಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ದ ಕಿಡಿಕಾರಿದ ಹೆಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ನಿಂದ ವಿಪಕ್ಷಗಳನ್ನ ಅಸ್ಥಿರಗೊಳಿಸಲು ಯತ್ನ ನಡೆಯುತ್ತಿದೆ.  ಕಾಂಗ್ರೆಸ್ ನಿಂದ ಕರ್ನಾಟಕದ ಹೆಸರಿಗೆ ಧಕ್ಕೆಯಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Key words: Shriramulu, Janaradhana reddy, Union Minister , HDK