ಬಿಜೆಪಿ ವಿರುದ್ದ ಗರಂ: ಪಾದಯಾತ್ರೆಗೆ ಬೆಂಬಲ ಕೊಡಲ್ಲ ಎಂದ ಕೇಂದ್ರ ಸಚಿವ ಹೆಚ್.ಡಿಕೆ

ನವದೆಹಲಿ,ಜುಲೈ,31,2024 (www.justkannada.in):  ಮುಡಾ ಹಗರಣ ಖಂಡಿಸಿ ಬಿಜೆಪಿ ಕೈಗೊಂಡಿರುವ ಪಾದಯಾತ್ರೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ನಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಪಾದಯಾತ್ರೆಗೆ ಬೆಂಬಲ ಕೊಡಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ  ಸಚಿವ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ಪಾದಯಾತ್ರೆಗೆ ನಮ್ಮ ನೈತಿಕ ಬೆಂಬಲವೂ ಇಲ್ಲ.  ಬಿಜೆಪಿ ನಿರ್ಧಾರ ನನ್ನ ಮನಸ್ಸಿಗೆ ನೋವು ತಂದಿದೆ. ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ವಿಶ್ವಾಸಕ್ಕೆ ತೆಗೆದುಕೊಳ್ಳದವರಿಗೆ ಬೆಂಬಲ ಯಾಕೆ?  ಬೆಂಗಳೂರಿನಿಂದ ಮೈಸೂರಿನವರೆಗೆ ಜೆಡಿಎಸ್ ಪ್ರಾಬಲ್ಯವಿದೆ.  ಪಾದಯಾತ್ರೆಯಿಂದ ಯಾವುದೇ ಸಾಧನೆ ಮಾಡಲಾಗದು. ನನ್ನನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದ ಹಿನ್ನೆಲೆ ಬೆಂಬಲ ಕೊಡಲ್ಲ. ನಿನ್ನೆ ಕೋರ್ ಕಮಿಟಿ ಅಧ್ಯಕ್ಷರು ತೀರ್ಮಾನ ಮಾಡಿದ್ದಾರೆ ಎಂದರು.

ಮಾಜಿ ಶಾಸಕ ಪ್ರೀತಂಗೌಡ ಮುಂದಾಳತ್ವದಲ್ಲಿ ಪಾದಯಾತ್ರೆಗೆ ಗರಂ ಆದ ಹೆಚ್.ಡಿ ಕುಮಾರಸ್ವಾಮಿ, ಪಾದಯಾತ್ರೆ ನೇತೃತ್ವ ವಹಿಸಲು ಪ್ರೀತಂಗೌಡ ಯಾರು ದೇವೇಗೌಡರ ಕುಟುಂಬ ಸರ್ವನಾಶಕ್ಕೆ ಬಂದಿದ್ರು. ಅಂತವರನ್ನ ಬಿಜೆಪಿಯವರು ಕೂರಿಸಿಕೊಂಡಿದ್ದಾರೆ.   ಪೆನ್ ಡ್ರೈವ್ ಹಂಚಿದವನ ಪಕ್ಕ ನಾನು ಕೂರಬೇಕಾ..?  ನನ್ನ ಸಹನೆಗೂ ಒಂದು ಮಿತಿ ಇದೆ ಎಂದು ಕಿಡಿಕಾರಿದ್ದಾರೆ.

Key words: Union Minister, HDK, not support, BJP, padayatre