ಬೆಂಗಳೂರು, ಜನವರಿ,11,2024(www.justkannada.in): ಅಲ್ಪಸಂಖ್ಯಾತರ ವೋಟ್ ಕೈತಪ್ಪುವ ಆತಂಕದಿಂದ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದ ಆಹ್ವಾನವನ್ನ ಕಾಂಗ್ರೆಸ್ ತಿರಸ್ಕಾರ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಅಯೋಧ್ಯೆಯಲ್ಲಿ ರಾಜಕೀಯ ಮಾಡಲು, ಅಲ್ಲಿ ನಡೆಯುತ್ತಿರುವುದು 140 ಕೋಟಿ ಭಾರತೀಯರ ಅಸ್ಮಿತೆ ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹೊರತು ವಿದೇಶಿ ವ್ಯಕ್ತಿಯೊಬ್ಬ ಸ್ಥಾಪಿಸಿದ ಕಾಂಗ್ರೆಸ್ ಪಕ್ಷದ ಚುನಾವಣಾ ರ್ಯಾಲಿ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಶ್ರೀರಾಮನ ಮೇಲೆ ನಂಬಿಕೆ ಭಕ್ತಿ ಶ್ರದ್ಧೆ ಇದ್ದವರು ಖಂಡಿತವಾಗಿಯೂ ಯಾವುದೇ ರಾಜಕೀಯ ಮಾಡದೆ ಮಂದಿರಕ್ಕೆ ಭೇಟಿ ನೀಡುತ್ತಾರೆ. ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ನೀವು ನಿಮ್ಮ ಆಡಳಿತ ವೈಫಲ್ಯವನ್ನು ಮರೆಮಾಚಲು ಇಂತಹ ವಿಚಾರ ಮುನ್ನಲೆಗೆ ತರುವ ಪ್ರಯತ್ನ ಬೇಡ, ರಾಜ್ಯ ಮಾತ್ರವಲ್ಲ ಇಡೀ ದೇಶದ ಜನತೆಗೆ ಅರ್ಥವಾಗಿದೆ ಕರ್ನಾಟಕದಲ್ಲಿ ನಿಮ್ಮ ‘ಸುಳ್ಳಿನ ಸರಕಾರ ಎತ್ತ ಸಾಗುತ್ತಿದೆ’ ಎಂದು ಕಿಡಿಕಾರಿದ್ದಾರೆ.
Key words: Union Minister- Prahlad Joshi – Congress – rama mandir-innuagration-refuse