ಮೈಸೂರು,ಸೆಪ್ಟಂಬರ್,19,2022(www.justkannada.in): ಈ ಆಷಾಢ ಭೂತಿತನದ ರಾಜಕಾರಣಿಗಳನ್ನು ದೂರವಿಟ್ಟು ಬಡವರ ಪರವಾಗಿ ಮೋದಿಯವರು ಕೆಲಸ ಮಾಡುತ್ತಿದ್ದಾರೆ. 8 ವರ್ಷದ ಸುಶಾಸನ 800 ವರ್ಷ ಆಳ್ವಿಕೆ ಮಾಡಿದ ಬ್ರಿಟಿಷರನ್ನು ನಾವು ಹಿಂದಕ್ಕೆ ಹಾಕಿ ಭಾರತ ಇಂದು ಐದನೇ ಸ್ಥಾನಕ್ಕೆ ಬಂದಿದ್ದೇವೆ ಎಂದು ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ನಗರದ ವಿದ್ಯಾರಣ್ಯಪುರಂ ರಾಮಲಿಂಗೇಶ್ವರ ಉದ್ಯಾನವನದಲ್ಲಿ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ನಡೆಯುತ್ತಿರುವ `ಮೋದಿ ಯುಗ ಉತ್ಸವ್’ ಮೂರನೇ ದಿನದ ಕಾರ್ಯಕ್ರಮದಲ್ಲಿ ಖೇಲೋ ಇಂಡಿಯಾ ಯೋಜನೆಯಡಿಯ ಆರು ಕೋಟಿ ವೆಚ್ವದಲ್ಲಿ ಕೃಷ್ಣರಾಜ ಕ್ಷೇತ್ರದ ಆರು ಕ್ರೀಡಾಂಗಣ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಅಭಿವೃದ್ಧಿಯತ್ತ ಸಾಗಿದ ರಾಷ್ಟ್ರಗಳ ಪೈಕಿ ಇಂಗ್ಲೆಂಡ್ ಹಿಂದಕ್ಕೆ ಹಾಕಿದ್ದೇವೆ. ಮುಂದಿನ ದಿನಗಳಲ್ಲಿ ಎರಡು ಅಥವಾ ಮೂರನೇ ಸ್ಥಾನಕ್ಕೆ ಬರಲಿದ್ದೇವೆ ಎಂದರು.
ರಾಜ್ಯ ಕಂಡ ಅತ್ಯಂತ ಕ್ರಿಯಾಶೀಲ ಶಾಸಕ ಎಸ್.ಎ.ರಾಮದಾಸ್ ಅವರಾಗಿದ್ದಾರೆ. ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಮೈಸೂರು ನಗರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ದೇಶದಾದ್ಯಂತ ರಾಷ್ಟ್ರೀಯ ಅಧ್ಯಕ್ಷರು ಒಂದು ಕರೆ ನೀಡಿದ್ದರೂ ಕಟೌಟ್ ಗೆ ಹಾಲು ಸುರಿಯೋದು, ಕೇಕ್ ಕಟ್ ಮಾಡುವುದರಿಂದ ಜನರಿಗೆ ಯಾವುದೇ ಅನೂಕೂಲ ಆಗುವುದಿಲ್ಲ. ಹೀಗಾಗಿ ಮೋದಿಯವರ ಜನ್ಮ ದಿನದಿಂದ ದೀನ ದಯಾಳ್ ಜನ್ಮ ದಿನದೊಟ್ಟಿಗೆ ಅ.೨ರವರೆಗಿನ ಮಹಾತ್ಮ ಗಾಂಧಿಜಯಂತಿವರೆಗೆ `ಸೇವಾ ಪಾಕ್ಷಿಕ’ ಕಾರ್ಯಕ್ರಮ ಕರೆ ನೀಡಿದ್ದರು. ಅದರ ಭಾಗವಾಗಿ ಸೆ.17ರಂದು ದೇಶದಾದ್ಯಂತ ನಡೆದ ರಕ್ತದಾನ ಶಿಬಿರ ರಕ್ತದಾನ ಸಂಗ್ರಹಣೆಯಲ್ಲಿ ಗಿನ್ನಿಸ್ ದಾಖಲೆಯಾಗುವ ರೀತಿಯಲ್ಲಿ ಜನಸ್ಪಂದೆ ದೊರೆತಿದೆ. ಅನೇಕರು ಭಾರತೀಯ ಜನತಾಪಾರ್ಟಿಯ ಕಾರ್ಯಕರ್ತರಲ್ಲದವರು ಕಾರ್ಯಕ್ರಮ ಮಾಡಿದ್ದರು. ಧಾರವಾಡದ ನಗರದಾದ್ಯಂತ ಶಾಲಾ ಕಾಲೇಜಿನ ಮಕ್ಕಳಿಗೆ ಮೋದಿ ಜನ್ಮ ನಿಮಿತ್ತದ ಆಟದ ಮೂಲಕ ಗಣಿತ ಕಲಿಸುವ ಕಾರ್ಯಕ್ರಮ ಮಾಡಿ ಮೋದಿ ವಿಷನ್ ಗೆ ದನಿಯಾಗಿದ್ದು ಕಂಡು ಬಂದಿತು. ಜನರ ಭಾವನೆ ಮೋದಿಯವರ ಕುರಿತು ನನಗೆ ಅರಿವಿಗೆ ಬಂತು ಎಂದರು.
ನಿನ್ನೆ ತಂದೆ ಕಾರ್ಯ ಆದ್ದರಿಂದ ಊರಲ್ಲಿ ಇದ್ದೆ, ಇಂದು ಬರಲು ಸ್ವಲ್ಪ ಗೊಂದಲ್ಲದಲ್ಲಿದೆ. ದೆಹಲಿಗೆ ಹೋಗಬೇಕಿತ್ತು, ಇಲ್ಲಿಗೆ ಬರಬೇಕಾಯಿತು. ಆದರೆ, ಇಲ್ಲಿಗೆ ಬಂದೂ ರಾಮದಾಸ್ ಅವರ ಮೋದಿ ಯುಗ ಉತ್ಸವ ಕಾರ್ಯಕ್ರಮ ನೋಡಿದ ನಂತರ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಕರೆಕೊಟ್ಟದಂಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ರಾಮದಾಸ್ ಅವರು ಕಾರ್ಯಕ್ರಮ ಮಾಡುತ್ತಿದ್ದಾರೆ. ಅದಕ್ಕೆ ನಾನು ಹೇಳಿದ್ದು, ರಾಮದಾಸ್ ಅವರು ರಾಜ್ಯದ ಅತ್ಯಂತ ಕ್ರಿಯಾಶೀಲ ಶಾಸಕರು ಎಂದಿದ್ದರು ಎಂದರು.
2014ರಲ್ಲಿ ಕೇಂದ್ರ ಸರ್ಕಾರ ಬಂದಂತಹ ಸಂದರ್ಭದಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರಮೋದಿಯವರು ಮೊದಲ ಬಾರಿಗೆ `ನನ್ನ ಈ ಸರ್ಕಾರ ಬಡವರಿಗೆ ಸಮರ್ಪಿತ ಸರ್ಕಾರ’ ಎಂಬ ಮಾತು ಇಂದು ಅಕ್ಷರಶಃ ಸತ್ಯ ಮಾಡುತ್ತಿದ್ದೇವೆ. ಹದಿನೈದು ದಿನಕ್ಕೊಮ್ಮೆ ಹೊಸ ಯೋಜನೆ ಘೋಷಣೆ ಮಾಡುತ್ತಾ ಬಂದಿದ್ದೇವೆ. ಈ ದೇಶದ ಬಡವರನ್ನು ಸಶಕ್ತಿಕರಣಗೊಳಿಸಲಿಕ್ಕೆ, ಈ ದೇಶದ ಅನೇಕರು ಮಾಡಿದರು ಗರಿಬ್ ಹಠಾವೋ ಹೇಳಿದರು. ಯುಪಿಎ ಸರ್ಕಾರ ಇದ್ದಾಗ ದೇಶದಲ್ಲಿ ಶೇ.೪೫ಕ್ಕಿಂತಲೂ ಹೆಚ್ವಿನ ಮಂದಿ ಕಡುಬಡವರಿದ್ದಾರೆಂದು ಒಪ್ಪಿಕೊಂಡಿದ್ದರು. ಎರಡನೇ ಮಾತನ್ನು ಹೇಳಿದ್ದರೂ ದೇಶಕ್ಕೆ ರಕ್ಷಣೆ ಕೊಡುತ್ತೇವೆಂದಿದ್ದರು. ಈ ಎರಡು ಕೆಲಸವನ್ನು ಅಕ್ಷರಶಃ ಪಾಲನೆ ಮಾಡಿ ಜನರ ಮುಂದೆ ನಾವು ವಿಶ್ವಾಸದಿಂದ ಕೆಲಸವನ್ನು ಮಾಡಿ ತಲೆ ಎತ್ತಿ ನಮ್ಮ ಕಾರ್ಯಕರ್ತರು ನಡೆದು ಹೋಗುವಂತೆ ಮಾಡಿದ್ದರೆ ಅದು ನರೇಂದ್ರಮೋದಿ ನೇತೃತ್ವದ ಬಿಜೆಪಿ ಸಾಧನೆಯಾಗಿದೆ ಎಂದು ಬಣ್ಣಿಸಿದರು.
ಬಹಳಷ್ಟು ಮಂದಿ ಮಾತನಾಡಿದಾಗ ಕೇಂದ್ರದ ಯೋಜನೆ ಹೇಳಿ ಎಂದರೆ ಬಹಳಷ್ಟು ಮಂದಿ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆ ಎನ್ನುತ್ತಾರೆ. ಅದು ಬಹಳ ಅತ್ಯುತ್ತಮ ಯೋಜನೆಯಾಗಿದೆ. ೧೩ ಕೋಟಿ ಜನರಿಗೆ ನೇರವಾಗಿ ತಲುಪಿಸುತ್ತಿದ್ದೇವೆ. ಆದರೆ ಇದನ್ನು ಹೊರತು ಪಡಿಸಿ ಅತ್ಯಂತ ಸಣ್ಣ ಸಣ್ಣ ಯೋಜನೆಗಳನ್ನು ರಾಮದಾಸ್ ಅವರು ಗುರುತಿಸಿ ಕೊಡುತ್ತಿದ್ದಾರೆ. ಇ-ಶ್ರಮ್ ಯೋಜನೆಯ ಸಂಪೂರ್ಣ ಮಾಹಿತಿ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಅದರ ಮೂಲಕ `ಒನ್ ಕಾರ್ಡ್ ಒನ್ ರೇಷನ್’ ಎಂಬ ಯೋಜನೆ ಜಾರಿ ಮಾಡಿದ್ದೇವೆ. ಮೊದಲು ಮೈಸೂರಿನ ವ್ಯಕ್ತಿ ಬೆಂಗಳೂರಿನಲ್ಲಿ ಪಡಿತರ ಪಡೆಯಲು ಅಲ್ಲಿಯ ದಾಖಲೆ ನೀಡಬೇಕಿತ್ತು. ಆದರೆ ಈಗ ಯಾವುದೇ ಸ್ಥಳದಲ್ಲಿ ಆ ವ್ಯಕ್ತಿ ರೇಷನ್ ಪಡೆಯುವ ವ್ಯವಸ್ಥೆ ಜಾರಿಗೆ ತರಲಾಗಿದೆ.
ಅನೇಕರು ಜನರನ್ನು ಕತ್ತಲೆಯಲ್ಲಿ ಇಟ್ಟು ಉಚಿತ ವಿದ್ಯುತ್ ಕೊಡಿ ಎನ್ನುವವರು ಇದ್ದಾರೆ. ಜನರು ಕತ್ತಲೆಯಲ್ಲಿ ಇದ್ದರೂ ಪರವಾಗಿಲ್ಲ. ವಿದ್ಯುತ್ ಸರಬರಾಜು ಮಾಡುವ ಸಂಸ್ಥೆಗಳು ದುರ್ಬಲ ಆದರೂ ಪರವಾಗಿಲ್ಲ. ಆದರೆ, ಮಾನಸಿಕತೆ ಹೇಗಾಗಿದೆ ಎಂದರೆ ಚಿಲ್ಲರೆ ಓಟ್ ಬ್ಯಾಂಕ್ ರಾಜಕಾರಣಕ್ಕೆ ಉಚಿತ ವಿದ್ಯುತ್ ಕೂಗನ್ನು ಕೂಗುತ್ತಾರೆ. ಆದರೆ ಜನರನ್ನು ಸಶಕ್ತಿರಣಗೊಳಿಸುವ ಕಾರ್ಯಕ್ಕೆ ನಾವು ಹೋಗುತ್ತಿದ್ದೇವೆ. ಇವತ್ತು ವಿದ್ಯುತ್ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಯನ್ನು ಮಾಡಿದ್ದೇವೆ. ೨೦೧೨ರ ಜುಲೈ ಇಡೀ ಉತ್ತರ ಭಾರತ ಸಂಪೂರ್ಣ ಕತ್ತಲೆಯಲ್ಲಿ ಮೂರು ದಿನ ಮುಳುಗಿತ್ತು. ವಿದ್ಯುತ್ ಅಭಾವ ಉಂಟಾಗಿ ಹೆಚ್ಚಿನ ಬಳಕೆದಾರರ ಬೇಡಿಕೆ ಹೆಚ್ಚಾಗಿತ್ತು. ಇಡೀ ವಿದ್ಯುತ್ ಘಟಕ ಸ್ಪೋಟವಾಗಿತ್ತು. ನಾಲ್ಕನೇ ವರ್ಷದ ಅವಧಿಯಲ್ಲಿ ದೇಶದಲ್ಲಿ ವಿದ್ಯುತ್ ಹೆಚ್ಚಾಗಿ ಬೇರೆ ದೇಶಕ್ಕೂ ವಿದ್ಯುತ್ ಪೂರೈಸುವ ಹಂತಕ್ಕೆ ಬೆಳೆಯಿತು. ಇದರಿಂದ ಜನರ ಜೀವನ ಮಟ್ಟ ಹೆಚ್ಚಾಯಿತು. ವಿದ್ಯುತ್ ಕೊಟ್ಟಿದ್ದರಿಂದ ದೇಶದ ಆರ್ಥಿಕತೆ ಬೆಳೆಯಿತು ಎಂದು ವಿವರಿಸಿದರು.
ಉಚಿತ ವಿದ್ಯುತ್ ಕೊಡುವುದರಿಂದ ಯಾರಿಗೋ ಒಬ್ಬರಿಗೆ ತೆರಿಗೆ ನೀಡಿದಂತಾಗಿ ವಿಶ್ವದ ಮಾರುಕಟ್ಟೆಯಲ್ಲಿ ನಮ್ಮ ದೇಶದ ಉತ್ಪನ್ನಗಳ ದರ ಮಾರಾಟ ಬೀಳಲಿದೆ. ಹೀಗಾಗಿ ಆರ್ಥಿಕ ಸಬಲತೆ ಆಗುವುದಿಲ್ಲ. ಆರ್ಥಿಕತೆ ಸಬಲತೆ ಆಗಬೇಕಿದ್ದರೆ ನಾವು ಕ್ವಾಲಿಟಿ ವಿದ್ಯುತ್ ಅನ್ನು ಎಲ್ಲರಿಗೂ ನೀಡಬೇಕು. ಅದೇ ಕ್ಷಣದಲ್ಲಿ ಬಡವರಿಗೆ ಎಲ್ ಇಡಿ ನೀಡಿ ಉಜ್ವಲ ಎಲ್ ಇಡಿ ಬಲ್ಬ್ ನೀಡಿದ್ದೇವೆ. ೧೦೦ರೂ. ವಿದ್ಯುತ್ ಬರಿತ್ತಿದ್ದವರಿಗೆ ಎಲ್‌ಇಡಿ ಬಳಕೆ ಬಳಿಕ ೫೦ರೂ. ಬರುತ್ತಿದೆ. ಈಗ ಕಡುಬವರ ಕಾಲೋನಿಯಲ್ಲಿ ಕೇಳಿದೆ ನಿಮಗೆ ಉಚಿತ ವಿದ್ಯುತ್ ಬೇಕೋ ಅಥವಾ 24 ತಾಸು ವಿದ್ಯುತ್ ಬೇಕೋ ಎಂದು ಕೇಳಿದೆ ಅದಕ್ಕೆ ಅವರು ನಮಗೆ 24 ತಾಸು ವಿದ್ಯುತ್ ಕೊಡಿ ನಮಗೆ ಉಚಿತ ವಿದ್ಯುತ್ ಬೇಡ ಎಂದರು.
ಕಾಂಗ್ರೆಸ್ ಅವಧಿಯ ಉಜಾಲ ಬಲ್ಬ್ ಯೋಜನೆಯಲ್ಲಿ ಒಂದು ಬಲ್ಬ ಖರೀದಿಗೆ ೩೬೦ರೂ. ನಿಗಧಿ ಮಾಡಿದ್ದರು. ಆದರೆ, ಮೋದಿ ನೇತೃತ್ವದ ಸರ್ಕಾರ ೬೦ರೂ.ಗೆ ಒಂದು ಬಲ್ಬ್ ನೀಡಿದೆ. ಹೀಗಾದರೆ ಉಳಿದ ೩೦೦ ರೂ. ಎಲ್ಲಿ ಹೋಗುತ್ತಿತ್ತು. ರಾಜೀವ್ ಗಾಂಧಿಯವರು ದೆಹಲಿಯಲ್ಲಿ ಹೇಳಿದ್ದರೂ ನಾವು ಇಲ್ಲಿ ೧೦೦ ಹಾಕಿದರೆ ಅದು ಮೈಸೂರಿಗೆ ಬರುವಷ್ಟರಲ್ಲಿ ೧೫ರೂ ಆಗುತ್ತದೆ ಎಂದಿದ್ದರು. ಯಾರು ಇಂದು ಮೋದಿಗೆ ಬೈಯುತ್ತಿದ್ದಾರಲ್ಲ ಜನ ಅವರ ಕಿಸೆಗೆ ಆ ೩೦೦ರೂ ಹೋಗುತ್ತಿತ್ತು. ಅದು ಬಂದ್ ಆಗಿರುವ ಮಧ್ಯವರ್ತಿಗಳು ಮೋದಿಗೆ ಬೈಯುತ್ತಿದ್ದಾರೆಂದು ನೆನಪಿನಲ್ಲಿ ಇಟ್ಟುಕೊಳ್ಳಿ. ನಾವಿಂದೂ ಇ-ಶ್ರಮ್, ಶ್ರಮಿಕರ ಬಗ್ಗೆ ಮಾತನಾಡುತ್ತಿದ್ದೇವೆ. ಅದರಲ್ಲೂ ಅನೇಕ ತಾಯಂದಿರಿಗೆ ದೇಶದ ಸ್ವಾತಂತ್ರ‍್ಯ ಬಂದೂ ೭೨ನೇ ವರ್ಷದ ಸಂದರ್ಭದಲ್ಲಿ ಉಜಾಲ ಕೊಟ್ಟಂತೆ `ಹರ್ ಗರ್, ನಲ್ ಜಲ್’ ಯೋಜನೆಯಡಿ ಎಲ್ಲಾ ೩ಕೋಟಿ ೬೦ಲಕ್ಷ ಮನೆಗಳ ಸಂಪರ್ಕವನ್ನು ನಾವು ಅಧಿಕಾರಕ್ಕೆ ಬಂದ ಬಳಿಕ ಐದು ವರ್ಷದಲ್ಲಿ ೧೧ಕೋಟಿ ಕುಟುಂಬಗಳಿಗೆ ನಲ್ಲಿ ಮೂಲಕ ನೀರು ನೀಡುತ್ತಿದ್ದೇವೆ ಎಂದು ತಿಳಿಸಿದರು.
ನಿರ್ಣಯಕ ಸರ್ಕಾರ: ದೇಶದಲ್ಲಿ ಶೇ.೯೩ ಪರ್ಸೆಂಟ್ ಅಸಂಘಟಿತ ಕಾರ್ಮಿಕರಿದ್ದಾರೆ. ಇದಕ್ಕಾಗಿ ಕಾರ್ಮಿಕರಿಗೆ ತಿಳಿಯದ ೨೯ ಕಾನೂನುಗಳಿದ್ದವು. ಇದನ್ನು ವಿಂಗಡಿಸಿ ಕಾರ್ಮಿಕ ಸ್ನೇಹಿಯಾಗಿ ಕಾರ್ಮಿಕರ ವೇತನ ಸಮಸ್ಯೆ, ಕಾರ್ಮಿಕರ ಮೇಲಿನ ದಬ್ಬಾಳಿಕೆ ನಿಯಂತ್ರಿಸುವ ಒಂದು ಪ್ರಮುಖ ನಿರ್ಣಯವನ್ನು ಸರ್ಕಾರ ಕೈಗೊಂಡಿದ್ದೆವೆ. ದಿನಕ್ಕೆ ೮ರಿಂದ ೧೦ಕಿ.ಮೀಟರ್ ಹೆದ್ದಾರಿ ಕಾಮಗಾರಿ ಮಾಡುತ್ತಿದ್ದ ವೇಳೆ ಇಂದು ದಿನಕ್ಕೆ ೩೭ಕಿ.ಮೀ ಹೆದ್ದಾರಿ ನಿರ್ಮಾಣ ಮಾಡುತ್ತಿದ್ದೇವೆ. ಈ ರೀತಿ ಪ್ರತಿ ಕ್ಷೇತ್ರದಲ್ಲಿ ಅಭಿವೃದ್ಧಿ, ಬಡವರ ಸಶಕ್ತಿಕರಣ ಹಾಗೂ ಸುಶಾನ ನೀಡುತ್ತಿದ್ದೇವೆ. ೩೫ ವರ್ಷದ ನಂತರ ಯಾವುದೇ ಸರ್ಕಾರ ಯಾವುದೇ ನಿರ್ಣಯ ಕೈಗೊಳ್ಳುತ್ತಿರಲಿಲ್ಲ. ಈಗ ದೇಶದಲ್ಲಿ ನಿರ್ಣಯ ಕೈಗೊಳ್ಳುವ ಸರ್ಕಾರ ಬಂದಿದೆ ಎಂದರು.
ದೇಶ ವಿರೋಧಿಸುವುದೆಷ್ಟು ಸರಿ: ಇಂತಹ ಸಂದರ್ಭದಲ್ಲಿ ಬಹಳಷ್ಟು ಮಂದಿ `ಭಾರತ್ ಜೋಡೋ’ ಮಾಡುತ್ತಿದ್ದಾರೆ. `ಭಾರತ ಜೋಡೋ’ ಮಾಡುವವರು ಪ್ರಥಮವಾಗಿ ಭೇಟಿ ಮಾಡಿರುವುದೇ ಯಾವ ವ್ಯಕ್ತಿ ಭಾರತ ಮಾತೆಗೆ ಅಪಮಾನ ಮಾಡಿದ ಪಾದ್ರಿಯನ್ನು ಭೇಟಿ ಮಾಡಿ ದೇಶಕ್ಕೆ ಅಪಮಾನ ಮಾಡುವ ಕೆಲಸ ಮಾಡುತ್ತಿರುವ ಇವರಿಗೆ ನಾಚಿಕೆ ಆಗಬೇಕಲ್ಲವೇ? ಪ್ರಜಾಪ್ರಭುತ್ವದಲ್ಲಿ ವಿರೋಧ ಮಾಡುವವರಿಗೆ ನಾವು ತಡೆಯುವುದಿಲ್ಲ. ಮೋದಿಯನ್ನು ವಿರೋಧಿಸುವ ಭರದಲ್ಲಿ ಮೋದಿಯನ್ನು ವಿರೋಧಿಸಬೇಕೆಂಬ ಏಕೈಕ ಕಾರಣದಿಂದ ದೇಶವನ್ನೇ ವಿರೋಧ ಮಾಡುವುದು ಎಷ್ಟು ಸರಿ? ನಾಳೆ ಕರ್ನಾಟಕ ಹಾಗೂ ಉತ್ತರ ಪ್ರದೇಶದಲ್ಲಿ ರಾಜಕೀಯ ಬಂದಾಗ ಜನಿವಾರ, ಶಿವಲಿಂಗ ಹಿಡಿದು ಕೂರತ್ತಾರೆ ಎಂದು ಟೀಕಿಸಿದರು
ಮುಖ್ಯ ಅತಿಥಿಯಾದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ ಮಾತನಾಡಿ, ಕೃಷ್ಣರಾಜ ಕ್ಷೇತ್ರದಲ್ಲಿ ದೇಶದ ಯುಗ ಪುರುಷರ ಜನ್ಮ ದಿನದ ಅಂಗವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ ತಲುಪಿಸುತ್ತಿರುವುದು ಶ್ಲಾಘನೀಯ. ೨೦೧೪ರಲ್ಲಿ ದೇಶವನ್ನು ಮತ್ತೊಮ್ಮೆ ಗತ ವೈಭಕ್ಕೆ ಕೊಂಡೊಯ್ಯುವ ಮಹಾನಾಯಕನನ್ನು ಆಯ್ಕೆ ಮಾಡಲಾಯಿತು.
ಪದವಿ ಮುಗಿಸಿದವರಿಗೆ ಸ್ಪರ್ಧಾತ್ಮಕ ಪರೀಕ್ಷೆ ಯೋಜನೆ ರೂಪಿಸಲಾಗಿದೆ. ಈ ಸಾಲಿನಲ್ಲಿ ೧೬೦ಮಂದಿಗೆ ಈ ಉಚಿತ ತರಬೇತಿ ನೀಡಿದ್ದೇವೆ. ಸಂದ್ಯಾವAದನೆಯ ತರಬೇತಿ ಸಹ ನೀಡುತ್ತಿದ್ದೇವೆ. ಸ್ವಯಂ ಉದ್ಯೋಗ ಮಾಡುವುದಕ್ಕೆ ೧ಲಕ್ಷ ರೂ. ಸಾಲ ನೀಡಿ, ಶೇ.೨೦ ರಷ್ಟು ಸಬ್ಸಿಡಿ ನೀಡಿದ್ದೇವೆ. ೨೦೦ಮಹಿಳಾ ಸಂಘಗಳಿಗೆ ೧ಲಕ್ಷವನ್ನು ನೀಡಲು ಯೋಜನೆ ಜಾರಿಗೆ ತಂದಿದ್ದೇವೆ. ೮ ಲಕ್ಷಕ್ಕಿಂತ ಆದಾಯ ಕಡಿಮೆ ಇರುವ ಎಲ್ಲರಿಗೂ ಈ ಯೋಜನೆ ತಲುಪಲಿವೆ. ೨೦೧೯ರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.೧೦ರಷ್ಟು ಮೀಸಲಾತಿ ತಂದಿದ್ದಾರೆ. ಆದರೆ ರಾಜ್ಯದ ಬ್ರಾಹ್ಮಣ, ಜೈನ, ವೈಷ್ಯ ಸಮುದಾಯಗಳಿಗೂ ರಾಜ್ಯದಲ್ಲಿ ಶಿಕ್ಷಣ, ನೌಕರಿಯಲ್ಲಿ ಶೇ.೧೦ರಷ್ಟು ಮೀಸಲಾತಿ ತರಬೇಕು ಎಂದು ಒತ್ತಾಯಿಸುತ್ತೇನೆಂದರು.
ಪ್ರಾಸ್ತಾವಿಕವಾಗಿ ಮಾಜಿ ಸಚಿವರು ಹಾಗೂ ಶಾಸಕರಾದ ಎಸ್.ಎ.ರಾಮದಾಸ್ ಅವರು ಮಾತನಾಡಿ, ಮೋದಿಯುಗ ಉತ್ಸವದ ಮೂರನೇ ದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ಆಗಮಿಸಿರಯವ ನಮ್ಮೆಲ್ಲರ ನೆಚ್ಚಿನ ರಾಷ್ಟ್ರೀಯ ನಾಯಕರು, ಲೋಕಸಭಾ ಸದಸ್ಯರಾಗಿ ದೇಶವೇ ಮೆಚ್ಚುವ ಕೆಲಸ ಮಾಡುತ್ತಿರುವ ಪ್ರಹ್ಲಾದ್ ಜೋಷಿ ಸ್ವಾಗತಕೋರುತ್ತೇನೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಉದ್ಘಾಟನೆ ನೇರವೇರಿಸಿ ಪ್ರಧಾನಿ ನರೇಂದ್ರ ಮೋದಿ ಯುಗ ಪುರುಷರಾಗಿ ದೊಡ್ಡ ಹೊಸ ಯುಗವನ್ನು ಪ್ರಾರಂಭಿಸಿದ್ದಾರೆ ಎಂದು ಬಣ್ಣಿಸಿದ್ದಾರೆ ಎಂದು ಹೇಳಿದರು.
ಕೃಷ್ಣರಾಜ ವಿದಾನ ಸಭಾ ಕ್ಷೇತ್ರದಲ್ಲಿ ೭೨ಸಾವಿರ ಮನೆಗಳನ್ನು ಸಂಪರ್ಕಿಸಿ, ಅವರ ಆರೋಗ್ಯ ತಪಾಸಣೆ ಮಾಡಲಾಗಿದೆ. ಆರೋಗ್ಯ ಕಾರ್ಡ್, ಆಯುಷ್ಮಾನ್ ಕಾರ್ಡ್ ನೀಡಿ ಅವರಿಗೆ ಆರೋಗ್ಯ ಭದ್ರತೆ ನೀಡಲಾಗಿದೆ. ನಿನ್ನೆ ಪರಿಶಿಷ್ಟ ಜಾತಿ, ಪಂಗಡದ ಸಮುದಾಯವನ್ನು ಗುರುತಿಸುವ ಕೆಲಸ ಮಾಡಲಾಗಿದೆ. ೧೩ಬ್ಯಾಂಕ್‌ಗಳಿAದ ೧೩.೫ ಕೋಟಿ ರೂ. ಹಣವನ್ನು ನೀಡಲಾಗಿದೆ. ಖೇಲೋ ಇಂಡಿಯಾ ಅಡಿಯಲ್ಲಿ ಕ್ರೀಡಾಂಗಣ ಅಭಿವೃದ್ಧಿ ಕೆಲಸ ಟೆಂಡರ್ ಆಗಿದ್ದು, ನಾಳೆಯಿಂದಲೇ ಕೆಲಸ ಪ್ರಾರಂಭ ಆಗಲಿದೆ ಎಂದರು.
ಮೊದಲ ಮೋದಿ ಉತ್ಸವದಲ್ಲಿ ೧೮೪ ಯೋಜನೆಗಳನ್ನು ಪರಿಚಯಿಸುವ ಕಾರ್ಯಕ್ರಮವನ್ನು ಸಾಹಿತಿ ಎಸ್.ಎಲ್.ಬೈರಪ್ಪ ಚಾಲನೆ ನೀಡಿದರು. ಇದನ್ನು ಆನ್‌ಲೈನ್ ದಾಖಲೀಕರಣ ಮಾಡಲು ಮುಂದಾದಾಗ ೯೨ಲಕ್ಷ ಮಂದಿ ಭಾಗವಹಿಸಿದ್ದರು. ವಿಶೇಷವಾಗಿ ೧೦ಮಂದಿ ಮುಖ್ಯಮಂತ್ರಿಗಳು ಕಾರ್ಯಕ್ರಮದ ಬಗ್ಗೆ ಸಲಹೆ ನೀಡಿದ್ದರು. ಅದೆಲ್ಲವನ್ನೂ ಆರು ದಾಖಲೆಗಳನ್ನು ಪ್ರಧಾನಿಗೆ ನೀಡಲು ತಯಾರಿ ಮಾಡಿದ್ದೇವೆ. ೭೦ಸಾವಿರ ಜನಕ್ಕೆ ೨೦ ದಿನಗಳ ಕಾಲ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ ತಲುಪಿಸಲು ಮಾಡಿದ್ದೇವು. ಮುಂದಿನ ೨೫ವರ್ಷಕ್ಕೆ ಮೈಸೂರು ಹೇಗಿರಬೇಕು ಮೋದಿಯವರ ಕಲ್ಪನೆಯಲ್ಲಿ ಎಂಬ ದಾಖಲೆಯನ್ನು ಸಂಗ್ರಹಿಸಲು ಚಾಲನೆ ನೀಡಿದ್ದೇವೆ. ಗಾಳಿ, ನೀರು ಆಹಾರ ಕಲುಷಿತ ಆಗುವುದನ್ನು ತಪ್ಪಿಸಬೇಕಿದೆ. ಹೀಗಾಗಿ ನಾಳೆಯೇ ನಮ್ಮಲ್ಲಿ ಬರುವ ಎಲ್ಲ ಗ್ಯಾರೇಜ್ ಶಿಫ್ಟ್ ಮಾಡಲಾಗಿದೆ. ಕಳೆದ ಬಾರಿ ೩೦ಕೋಟಿ ರೂ. ನೀಡಿದ್ದು, ಈ ಬಾರಿ ೧೦ಕೋಟಿ ರೂ. ಪ್ರಾಥಮಿಕವಾಗಿ ನೀಡುವುದಾಗಿ ಪತ್ರಬಂದಿರುವುದು ಸಂತಸ ತರಿಸಿದೆ. ಕ್ಷೇತ್ರದಲ್ಲಿರುವ ೫೮೦ಬೋರ್ ವೆಲ್ ಸ್ಥಗಿತ ಗೊಳಿಸಿ ಕುಡಿಯುವ ನೀರು ನೀಡಲು ಚಿಂತನೆ ನಡೆಸಿದ್ದೇವೆ ಎಂದರು.
ಕ್ಷೇತ್ರದ 120 ಉದ್ಯಾನವನವನ್ನು ಅಭಿವೃದ್ಧಿ ಮಾಡಲು ೨೬ಕೋಟಿ ರೂ.ಗಳನ್ನು ನೀಡಿದ್ದೇವೆ. ೭೬ಸಾವಿರ ಮನೆಗಳಿಗೂ ಎರಡು ಗಿಡ ನೀಡಲು ಚಿಂತನೆ ನಡೆಸಿದ್ದೇವೆ. ಮೋದಿ ಜಿ @ ಮೈಸೂರು ವಿಚಾರದ ಪುಸ್ತಕವನ್ನು ನೀಡುತ್ತಿರುವುದಾಗಿ ಹೇಳಿದರು. ಪ್ರಸಾದ ಬಾಬು ಪ್ರಾರ್ಥಿಸಿ, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಎಲ್ಲರ ಸ್ವಾಗತಿಸಿದರು.
ಮಹಾಪೌರ ಶಿವಕುಮಾರ್, ಸಂಸದ ಪ್ರತಾಪಸಿಂಹ, ಉಪಮೇಯರ್ ರೂಪ ಯೋಗೇಶ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಯ ನಿರ್ದೇಶಕರಾದ ಸಿ.ವಿ.ಗೋಪಿನಾಥ್, ಜಗದೀಶ್ ಹನಗುಂದ, ಎಂ.ಆರ್.ಬಾಲಕೃಷ್ಣ, ವತ್ಸಲ ನಾಗೇಶ್, ನಗರಾಧ್ಯಕ್ಷ ಶ್ರೀವತ್ಸ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಟಿ.ಕೆ.ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಆರ್.ರೋಹಿತ್ ಗಂಗಾಧರ್, ತಹಸೀಲ್ದಾರ್ ಗಿರೀಶ್ ಇನ್ನಿತರರು ಉಪಸ್ಥಿತರಿದ್ದರು.
Key words: Union Minister -Prahlad Joshi – India – ranked- fifth -developing countries