ಬೆಂಗಳೂರು,ಅಕ್ಟೋಬರ್,22,2020(www.justkannada.in) : ಕೇಂದ್ರ ಗೃಹ ಸಚಿವ ಅಮಿತ್ ಶಾ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.
ಅಮಿತ್ ಶಾ ಗುರುವಾರ (ಅ.22) 56ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಭಾರತವನ್ನು ಪ್ರಗತಿಯ ಕಡೆಗೆ ಕೊಂಡೊಯ್ಯಲು ಅಮಿತ್ ಶಾ ಅವರ ಸಮರ್ಪಣೆ ಮತ್ತು ಶ್ರೇಷ್ಠತೆಯನ್ನು ಒಳಗೊಂಡ ಕೊಡುಗೆಗೆ ದೇಶ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ನಲ್ಲಿ ಮೆಚ್ಚುಗೆವ್ಯಕ್ತಪಡಿಸಿದ್ದಾರೆ.
ಬಿಜೆಪಿ ಬಲಪಡಿಸುವ ಅವರ ಪ್ರಯತ್ನಗಳು ಗಮನಾರ್ಹ
ಬಿಜೆಪಿಯನ್ನು ಬಲಪಡಿಸುವ ಅವರ ಪ್ರಯತ್ನಗಳೂ ಗಮನಾರ್ಹವಾಗಿವೆ. ಭಾರತದ ಸೇವೆಗೆ ದೇವರು ಅವರಿಗೆ ಆರೋಗ್ಯಕರ ಜೀವನ ನೀಡಲಿ,’ ಎಂದು ಮೋದಿ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೂ ಶಾ ಜನ್ಮ ದಿನಕ್ಕೆ ಟ್ವಿಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ. ದೇಶಪ್ರೇಮ, ಸಮರ್ಪಣೆ, ಕಠಿಣ ಪರಿಶ್ರಮ, ಸಂಘಟನಾ ಕೌಶಲ ಮತ್ತು ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿಯಾಗಿರುವ ಅಮಿತ್ ಶಾ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಹೇಳಿದ್ದಾರೆ.
ಬಿ.ಎಸ್,ಯಡಿಯೂರಪ್ಪ ಅವರಿಂದ ಶುಭಹಾರೈಕೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆರೋಗ್ಯ, ಧೀರ್ಘಾಯುಷ್ಯ ಮತ್ತು ದೇಶಸೇವೆಯಲ್ಲಿ ಮತ್ತಷ್ಟು ಯಶಸ್ಸನ್ನು ನೀಡಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.
2014ರಿಂದ 2020ರ ವರೆಗೆ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು, ಹಲವು ರಾಜ್ಯಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಫಲರಾಗಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲವು ತಂದುಕೊಡುವಲ್ಲಿ ತೆರೆ ಮರೆಯಲ್ಲೇ ಪ್ರಧಾನ ಪಾತ್ರ ನಿರ್ವಹಿಸಿದ್ದ ಅವರು, 2019ರ ಲೋಕಸಭೆ ಚುನಾವಣೆಯ ಬಹುದೊಡ್ಡ ಗೆಲುವಿಗೂ ಕಾರಣಕರ್ತರಾಗಿದ್ದರು. ಈ ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿ ಮಂತ್ರಿ ಮಂಡಲ ಸೇರಿದ ಅಮಿತ್ ಶಾ ರಾಷ್ಟ್ರದ ಗೃಹ ಸಚಿವರಾದರು.
key words : Union-Home-Minister-Amit Shah’s-Birthday-Good-wishes-elite