ಕುತೂಹಲದ ಕಣ್ಣುಗಳಿಗೆ ವಿಶಿಷ್ಟ ಅನುಭವ ಕೊಡಲಿರೋ ಐ-1 ಚಿತ್ರ

ಬೆಂಗಳೂರು,ಡಿ,5,2019(www.justkannada.in): ಮಣ್ಣಿನಾಳದಲ್ಲಿ ಹೂತಿಟ್ಟಿರೋ ಒಂದು ಟಿಟಿ ವ್ಯಾನ್.ಅದರಲ್ಲಿ ಮೂವರು ಪಾತ್ರಗಳು, ಒಂದು ಸಿಸಿಟಿವಿ ಕ್ಯಾಮೆರಾ, ಸ್ಪೀಕರ್ ಮೊಬೈಲ್ ಪೋನ್ ಮತ್ತು ಮೊಬೈಲನ್ನಲ್ಲಿ ಮಾತನಾಡೋ ಕೆಲವು ಪಾತ್ರಗಳು.ಇದನ್ನಷ್ಟೇ ಬಳಸಿಕೊಂಡು‌ ಸಿನಿಮಾ ಮಾಡಬಹುದಾ ಅನ್ನೊದಕ್ಕೆ ನಿರ್ದೇಶಕ ಆರ್ ಎಸ್ ರಾಜ್ ಕುಮಾರ್ ಅವರು ಎಸ್ಪಿ ಫಿಕ್ಚರ್ ನಿರ್ಮಾಣದೊಂದಿಗೆ ಐ-1 ಚಿತ್ರದ ಮೂಲಕ ಉತ್ತರ ಕೊಟ್ಟಿದ್ದಾರೆ.

ಭ್ರಷ್ಟಾಚಾರದಿಂದ ಹಣ ಸಂಪಾದಿಸಿದ ಮೂವರು ಉದ್ಯಮಿಗಳ ಮಕ್ಕಳನ್ನು ಅಪಹರಿಸಿ, ಅವರನ್ನ ೨೦ ಅಡಿ ಆಳದಲ್ಲಿ ವ್ಯಾನನೊಳಗೆ ಒಬ್ಬ ಅಪರಿಚಿತ ಸಾಮಾನ್ಯ ಮನುಷ್ಯ ಕೂಡಿ ಹಾಕಿ,ಶಿಕ್ಷೆ ಕೊಡುತ್ತಿರುತ್ತಾನೆ. ಆ ಮೂರು ಯುವಕರನ್ನು ಯಾಕೆ ಅರೆಸ್ಟ್ ಮಾಡಿದ? ಅವರೇನು ತಪ್ಪು ಮಾಡಿದ್ರು? ಕೊನೆಗೆ ಆ ಯುವಕರು ಏನಾಗ್ತಾರೆ ಅನ್ನೊದು ಚಿತ್ರದ ಹೈಲೈಟ್ಸ್.

ಈ ಚಿತ್ರ ವ್ಯವಸ್ಥೆ ವಿರುದ್ದ ಸಿಡಿದೆದ್ದವರು ಕಾನೂನಿನ ಮೂಲಕ ನ್ಯಾಯ ಸಿಗದೇ ಇದ್ದಾಗ ಅನ್ಯ ಮಾರ್ಗದ ಮೂಲಕ ಸೇಡು ತೀರಿಸಿಕೊಳ್ಳೋ ಕಥಾ ಹಂದರನ್ನು ಹೊಂದಿದೆ. ಆದರೆ ಇದೇ ಕಥೆಯನ್ನು ಇಪ್ಪತ್ತು ಅಡಿ ಆಳದಲ್ಲಿ ಒಂದು ಟಿಟಿ ವ್ಯಾನಿನ ಒಳಗೆ ಕೆಲವೇ ಕೆಲವು ಪಾತ್ರಗಳನಿಟ್ಟುಕೊಂಡು ಪ್ರತಿ ನಿಮಿಷ ಕ್ಕೂ ಹೊಸ ಹೊಸ ಟ್ವಿಸ್ಟ್ ಮೂಲಕ ಕಥೆ ಕಟ್ಟಿಕೊಟ್ಟ ನಿರ್ದೇಶಕನ ಜಾಣ್ಮೆ ಜನರನ್ನ ಸೆಳೆಯುತ್ತೆ.ಹಾಗೇ ಚಿತ್ರದಲ್ಲಿ ಕಿಡ್ನಾಪ್ ಆದ ಯುವಕರಾಗಿ ಕಿಶೋರ್,ಧೀರಜ್,ರಂಜನ್ ಅಭಿನಯಿಸಿದ್ದು ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಾಗೇ ಒಂದು ವ್ಯಾನ್ ಒಳಗೆ ಇಡೀ ಚಿತ್ರವನ್ನು ಸೆರೆಹಿಡಿಯೋದು ಸವಾಲಿನ ಕೆಲಸ ಇದನ್ನು ಛಾಯಾಗ್ರಾಹಕ ಷಿನೂಬ್ ಟಿ ಚಾಕೋ ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಇನ್ನು ಚಿತ್ರದಲ್ಲಿನ ಕೊನೆಯ ಫೈಟಿಂಗ್ ದೃಶ್ಯ ಸ್ಪಲ್ಪ ಡ್ರ್ಯಾಗ್ ಅನಿಸಬಹುದು.ಹಾಗೇ ಕೊನೆಗೂ ಫ್ಲಾಶ್ ಬ್ಲಾಕನ್ನ ಡೈಲಾಗಗಳ ಮೂಲಕ ಹೇಳಿಸಿ ಚಿತ್ರ ವ್ಯಾನ್ ಒಳಗಡೆಯಿಂದ ಹೊರಗೆ ಬರದಿದ್ದದ್ದು , ಸಿನಿ ಪ್ರೇಮಿಗಳಿಗೆ ಕೊಂಚ ನಿರಾಸೆಯಾಗಿಸಬಹುದು..ಆದ್ರೆ ಈ ಐ-1 ಒಂದು ಸಿನಿಮಾ ವಿಶಿಷ್ಟ ಅನುಭವ ಕೊಡೋದ್ರಲ್ಲಿ ಅನುಮಾನವಿಲ್ಲ..

 

ಕೃಪೆ

-ರೂಪೇಶ್ ಬೈಂದೂರು

Key words:  unique- experience – curious eyes-I-1 Movie