ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಈಗ ‘ ಫೋರ್ ಸ್ಟಾರ್ ‘ ಯೂನಿವರ್ಸಿಟಿ.

 

ಬೆಂಗಳೂರು, ಸೆ.17, 2019 : (www.justkannada.in news ) ಕರ್ನಾಟಕ ರಾಜ್ಯ ಹೈಯರ್ ಎಜುಕೇಷನ್ ಕೌನ್ಸಿಲ್ ಸಹಭಾಗಿತ್ವದಲ್ಲಿ ನೇಮಕಗೊಂಡಿದ್ದ ‘ ಐಕೇರ್ ರೇಟಿಂಗ್ಸ್ ‘ ಸಂಸ್ಥೆ ನಡೆಸಿದ ಸರ್ವೆ ಪ್ರಕಾರ ಮೈಸೂರು ವಿಶ್ವವಿದ್ಯಾನಿಲಯ FOUR STAR ಮಾನ್ಯತೆ ಪಡೆದಿದೆ.

ನಿಗಧಿ ಪಡಿಸಿದ್ದ ಒಟ್ಟು 1000 ಅಂಕಗಳಿಗೆ 584 ಅಂಕಗಳನ್ನು ಪಡೆದುಕೊಂಡು ಮೈಸೂರು ವಿಶ್ವವಿದ್ಯಾನಿಲಯ ‘ FOUR STAR ‘ ಸ್ಥಾನ ಪಡೆದಿದೆ. ಬೆಂಗಳೂರಿನಲ್ಲಿ ಮಂಗಳವಾರ ನಡೆದ ಹೈಯರ್ ಎಜುಕೇಷನ್ ಕೌನ್ಸಿಲ್ ಸಭೆಯಲ್ಲಿ ಈ ಮಾನ್ಯತೆ ಪ್ರಕಟಿಸಲಾಯಿತು.
ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಅವರಿಂದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ಈ ಪ್ರಮಾಣ ಪತ್ರ ಸ್ವೀಕರಿಸಿದರು.

ಪ್ಯಾರಮೀಟರ್ :

ಸಂಶೋಧನಾ ವಲಯದಲ್ಲಿ 3 ಸ್ಟಾರ್, ಹೊಸತನದಲ್ಲಿ 4 ಸ್ಟಾರ್, ಟೀಚಿಂಗ್ ಎಕ್ಸಲೆನ್ಸಿಗೆ ಸಂಬಂಧಿಸಿದಂತೆ 5 ಸ್ಟಾರ್, ಮೂಲಸೌಕರ್ಯದಲ್ಲಿ 3 ಸ್ಟಾರ್, ಒಳಗೊಳ್ಳುವಿಕೆ ಹಾಗೂ ಸಾಮಾಜಿಕ ಪರಿಣಾಮಕ್ಕೆ ಸಂಬಂಧಿಸಿದಂತೆ 4 ಸ್ಟಾರ್ ಗಳ ಮಾನ್ಯತೆ ಪಡೆದಿದೆ.

key words : university of mysore- four star-KSURF-ICARE RATINGS