ಸದ್ಯದಲ್ಲೇ ವಿವಿ ಕಾಯ್ದೆಗೆ ತಿದ್ದುಪಡಿ, ಕುಲಪತಿಗಳ ನೇಮಕದಲ್ಲಿ ಪಾರದರ್ಶಕತೆ ; ಡಿಸಿಎಂ ಡಾ. ಅಶ್ವತ್ಥನಾರಾಯಣ

 

ಶಿವಮೊಗ್ಗ, ಫೆ.14, 2020 : (www.justkannada.in news ) ಕುಲಪತಿಗಳ ನೇಮಕದಲ್ಲಿ ಪಾರದರ್ಶಕತೆ ತರಲು ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಯಲ್ಲಿ ಬದಲಾವಣೆ ತರಲಾಗುವುದು,”ಎಂದು ಉನ್ನತ ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಅಶ್ವತ್ಥನಾರಾಯಣ ಮಾತನಾಡಿದರು.

“ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ವಿಚಾರದಲ್ಲಿ ಸಾಕಷ್ಟು ಗೊಂದಲ ಇದ್ದು, ಕುಲಪತಿಗಳ ಆಯ್ಕೆಗೆ ಪ್ರತಿ ಬಾರಿಯೂ ಶೋಧನಾ ಸಮಿತಿ ರಚಿಸಲಾಗುತ್ತಿದೆ. ಇದರಿಂದ ಕುಲಪತಿಗಳ ನೇಮಕ ವಿಳಂಬವಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕುಲಪತಿಗಳ ನೇಮಕ ಸಂಬಧ ವಿವಿ ಕಾಯ್ದೆಯಲ್ಲಿನ ಅಂಶವನ್ನು ಹಿಂಪಡೆದು, ಹೊಸ ಕಾನೂನು ರೂಪಿಸಲಾಗುತ್ತದೆ. ಅದರಂತೆ, ಎಲ್ಲ ಅರ್ಹ ಪ್ರೊಫೆಸರ್‌ಗಳ ಪಟ್ಟಿ ಸಿದ್ಧಪಡಿಸಲು ಸಮಿತಿ ರಚಿಸಲಾಗುತ್ತಿದೆ. ಈ ಮೂಲಕ ಸರಳ, ಪಾರದರ್ಶಕ ಹಾಗೂ ಗೌರವಾನ್ವಿತವಾಗಿ ಕುಲಪತಿಗಳ ಆಯ್ಕೆ ಸಾಧ್ಯವಾಗಲಿದೆ. ಇದರಿಂದ ವಿಶ್ವವಿದ್ಯಾಲಯ ಸೇರಿದಂತೆ ನಮ್ಮೆಲ್ಲರ ಗೌರವ ಹೆಚ್ಚುವುದು,” ಎಂದು ಸಚಿವರು ತಿಳಿಸಿದರು.

 university-vice.chancelor-oppointment-act-change-dcm-ashwathnarayan

“ಶಿಕ್ಷಣ ವ್ಯವಸ್ಥೆ ಭ್ರಷ್ಟ ಮುಕ್ತವಾಗಬೇಕು. ಉಪನ್ಯಾಸಕರ ನೇಮಕಕ್ಕೆ ಪಾರದರ್ಶಕ ವ್ಯವಸ್ಥೆ ತರಲಾಗಿದ್ದು, ಕುಲಪತಿಗಳ ನೇಮಕದಲ್ಲೂ ಪಾರದರ್ಶಕ ವ್ಯವಸ್ಥೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಗುತ್ತಿದೆ. ವಿಶ್ವವಿದ್ಯಾಲಯಗಳು ಭ್ರಷ್ಟ ಮುಕ್ತವಾದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ಕಾಣಲು ಸಾಧ್ಯ,”ಎಂದು ಅವರು ಪ್ರತಿಪಾದಿಸಿದರು.

key words : university-vice.chancelor-oppointment-act-change-dcm-ashwathnarayan