ಬೆಂಗಳೂರು,ಜೂನ್,14,2021(www.justkannada.in): ಕೊರೋನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಇಂದಿನಿಂದ ಬೆಂಗಳೂರು ಸೇರಿ 19 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲಾಗಿದ್ದು, ಉಳಿದ 11 ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಲಾಕ್ ಡೌನ್ ಮುಂದುವರಿಸಲಾಗಿದೆ.
ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಅನ್ ಲಾಕ್ ಆಗುತ್ತಿದ್ದಂತೆ ವಾಹನ ದಟ್ಟಣೆ ಹೆಚ್ಚಾಗಿದ್ದು ಹಲವು ಕಡೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಸಾವಿರಾರು ವಾಹನಗಳು ಬೆಂಗಳೂರಿಗೆ ಎಂಟ್ರಿಕೊಟ್ಟಿದ್ದು ಈ ಹಿನ್ನಲೆಯಲ್ಲಿ ವಾಹನ ಸಂಚಾರ ಮಿತಿ ಮೀರಿದೆ.
ಈ ಮಧ್ಯೆ ಲಾಕ್ ಡೌನ್ ನಿಂದಾಗಿ ಊರಿಗೆ ತೆರಳಿದ್ದ ಕಾರ್ಮಿಕರು ಇದೀಗ ಬೆಂಗಳೂರು ನಗರಕ್ಕೆ ವಾಪಸ್ ಆಗಿದ್ದು, ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಜನಸಂಚಾರ ಹೆಚ್ಚಾಗಿದೆ. ಇನ್ನು ಹೊಸೂರು ರಸ್ತೆ,ಬೆಂಗಳೂರು-ತುಮಕುರು ರಸ್ತೆ, ಮೈಸೂರು ರಸ್ತೆ ಜಾಲಹಳ್ಳಿ, ಪೀಣ್ಯ,ಆರ್.ಆರ್ ನಗರ ಸೇರಿ ನಗರದ ಹಲವು ಭಾಗಗಳಲ್ಲಿ ವಾಹನ ಸಂಚಾರ ಹೆಚ್ಚಾದ ಹಿನ್ನೆಲೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.
ಅನ್ ಲಾಕ್ ಹಿನ್ನೆಲೆ ಆಟೋ ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ಪ್ಯಾಕ್ಟರಿ, ಗಾರ್ಮೆಂಟ್ಸ್ ಗಳನ್ನ ತೆರಯಲು ಅನುಮತಿ ನೀಡಲಾಗಿದೆ.
ENGLISH SUMMARY…..
Unlock in 19 Districts of the State from today: Traffic jam at several places in Bengaluru
Bengaluru, June 14, 2021 (www.justkannada.in): Following a decrease in the number of Corona cases in the State, the government has started lifting the lockdown in phases. As a result, the first phase of unlocking has been started in 19 districts of the state including Bengaluru. However, the lockdown has been continued till June 21 in the remaining 11 districts.
A sea of vehicles was seen on many roads in the capital city Bengaluru, especially on the toll roads. Traffic jam was reported at several places as thousands of vehicles were seen entering the city today from the early morning.
Thousands of labourers and employees who had vacated Bengaluru following the imposing of lockdown have started returning to the capital city resulting in an increase in movement of vehicles and people in busy areas like majestic, railway station, Yeshwanthpur railway station, etc. Traffic jam was seen on Hosur road, Bengaluru-Tumakuru road, Mysuru road, Jaalahalli, Peenya, R.R. Nagar, etc.
Permission has been given for the movement of autos, cabs, and factories, including garment industries as part of the unlock.
Keywords: State Government/ Unlock/ Bengaluru flooded in vehicles/ Traffic jam
Key words: Unlocked- today -traffic – Bangalore.