ಕತಾರ್, ಸೆಪ್ಟೆಂಬರ್ 09, 2019 (www.justkannada.in): ಕತಾರ್ ಆತಿಥ್ಯದಲ್ಲಿ 2022ರಲ್ಲಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್ ಕೂಟದ ಲಾಂಛನ ಅನಾವರಣಗೊಂಡಿದೆ.
ಲಾಂಛನದ ಬೃಹತ್ ಪ್ರತಿಕೃತಿಯನ್ನು ಸಾರ್ವಜನಿಕ ವೀಕ್ಷಣೆಗಾಗಿ ಇಡಲಾಗಿದೆ. ಅಂತೆಯೇ ಜಗತ್ತಿನ ಇನ್ನೂ ಕೆಲವು ನಗರಗಳಲ್ಲಿ ಲಾಂಛನವನ್ನು ಪ್ರದರ್ಶಿಸಲಾಗಿದೆ.
ಕತಾರ್ನ ಶೆರಿಬ್ ಜಿಲ್ಲೆಯಲ್ಲಿರುವ ನ್ಯಾಶನಲ್ ಆರ್ಕಿವ್ಸ್ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಲಾಂಛನ ಅನಾವರಣಗೊಂಡಿತು. ಈ ಸಂದರ್ಭದಲ್ಲಿ ಅಶ್ವದಳದ ಆಕರ್ಷಕ ಮೆರವಣಿಗೆ ನಡೆಯಿತು.