ಮೈಸೂರು,ಜೂ,27,2020(www.justkannada.in): ಪಿಎಸ್ಎಸ್ಕೆ ಕಾರ್ಖಾನೆಯನ್ನ ಮಾದರಿ ಕಾರ್ಖಾನೆಯಾಗಿ ರೂಪಿಸುವೆ. ಕಾರ್ಖಾನೆಯನ್ನ ಮೇಲ್ದರ್ಜೆಗೆರಿಸಿ ಕಬ್ಬು ಅರೆಯಲಾಗುವುದು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಮೈಸೂರಿನ ಪತ್ರಿಕಾ ಭವನದಲ್ಲಿ ಪತ್ರಕರ್ತರೊಂದಿಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಆಗಸ್ಟ್1 ರಿಂದ ಪಾಂಡವಪುರ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವಿಕೆ ಆರಂಭವಾಗಲಿದೆ. ನಾನು ಕೃಷಿ ಕುಟುಂಬದಿಂದ ಬಂದ ವ್ಯಕ್ತಿ. ಉತ್ತರ ಕರ್ನಾಟಕ ರೈತರ ಬವಣೆ ನೀಗಿಸಲು ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿದ್ದೇನೆ ಪಿಎಸ್ಎಸ್ಕೆ ಕಾರ್ಖಾನೆಯನ್ನ ಮಾದರಿ ಕಾರ್ಖಾನೆಯಾಗಿ ರೂಪಿಸುವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ನನಗೆ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದರು.
ಮೊದಲು ನಾನು ಫ್ಯಾಕ್ಟರಿ ಆರಂಭಿಸಿದಾಗ ಮನೆಯವರು ಕಷ್ಟ ಅಂದ್ರು ಆದರೂ ಇಂಜಿನಿಯರ್ ಪದವಿ ಪಡೆದಿದ್ದ ನಾನು ಧೈರ್ಯದಿಂದಲೇ ಆರಂಭಿಸಿದೆ. ಈಗ ಉತ್ತಮವಾಗಿ ಫ್ಯಾಕ್ಟರಿ ನಡೆಯುತ್ತಿದೆ. ಇದು ರೈತರಿಗೆ ಸಹಕಾರಿಯಾಗಿದೆ. ರೈತ ಕುಟುಂಬದ ಹಿನ್ನಲೆ ಇರುವ ನಾನು ಮೈಸೂರು ಭಾಗದ ಕಾರ್ಖಾನೆ ಅಭಿವೃದ್ಧಿಗೂ ಶ್ರಮಿಸುತ್ತೇನೆ ಎಂದು ಮುರುಗೇಶ್ ನಿರಾಣಿ ಹೇಳಿದರು.
ಪಿಎಸೆಸ್ಕೆ ಕಾರ್ಖಾನೆಯನ್ನ ಮೇಲ್ದರ್ಜೆಗೆರಿಸಿ ಕಬ್ಬು ಅರೆಯಲಾಗುವುದು. ನಿರಾಣಿ ಶುಗರ್ ಲಿಮಿಟೆಡ್ ಸಕ್ಕರೆ ಉತ್ಪಾದನೆಯೊಂದಿಗೆ ವಿದ್ಯುತ್, ಇಥನಾಲ್, ರೆಕ್ಟಿಪೈಡ್ ಸ್ಫಿರಿಟ್, ಸಿಒ2, ಸಿಎನ್ಜಿ, ಸ್ಯಾನಿಟೈಸರ್, ರಸಗೊಬ್ಬರ ಸೇರಿದಂತೆ ಎಕ್ಸ್ಟ್ರ ನ್ಯಾಚುರಲ್ ಅಲ್ಕೋಹಾಲ್ ಉತ್ಪನ್ನಗಳನ್ನ ಉತ್ಪಾದಿಸಲಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.
Key words: Upgrade – PSSK- factory – model- Former minister- Murugesh Nirani.