UPSC ಫಲಿತಾಂಶ ಪ್ರಕಟ: ಶಕ್ತಿ ದುಬೆ ದೇಶಕ್ಕೆ ನಂ.1

ನವದೆಹಲಿ,ಏಪ್ರಿಲ್,22,2025 (www.justkannada.in):  ಕೇಂದ್ರ ಲೋಕಸೇವಾ ಆಯೋಗ (UPSC) 2024 ರ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಿದ್ದು, ಪ್ರಯಾಗ್ ರಾಜ್ ನಿವಾಸಿ  ಶಕ್ತಿ ದುಬೆ ಎಂಬುವವರು ದೇಶಕ್ಕೆ ನಂ.1 ಸ್ಥಾನ ಪಡೆದಿದ್ದಾರೆ.

ಶಕ್ತಿ ದುಬೆ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ ದೇಶದಲ್ಲೇ ಅಗ್ರಸ್ಥಾನ ಪಡೆದಿದ್ದಾರೆ.. ಸಂದರ್ಶನ ಮತ್ತು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಫಲಿತಾಂಶವನ್ನು ಘೋಷಿಸಲಾಗಿದೆ.

ಅಭ್ಯರ್ಥಿಗಳು UPSC ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡುವ ಮೂಲಕ ರೋಲ್ ನಂಬರ್​​ ಮತ್ತು ಹೆಸರಿನ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು

ಆಯೋಗವು ಒಟ್ಟು 1009 ಅಭ್ಯರ್ಥಿಗಳನ್ನು ಶಿಫಾರಸು ಮಾಡಿದೆ, ಇದರಲ್ಲಿ ಸಾಮಾನ್ಯ ವರ್ಗದಿಂದ 335, ಇಡಬ್ಲ್ಯೂಎಸ್ ನಿಂದ 109, ಒಬಿಸಿಯಿಂದ 318, ಎಸ್‌ಸಿಯಿಂದ 160 ಮತ್ತು ಎಸ್‌ಸಿ ವರ್ಗದಿಂದ 87 ಅಭ್ಯರ್ಥಿಗಳು ಸೇರಿದ್ದಾರೆ.

2024ರ ಯುಪಿಎಸ್ ಸಿ ಪರೀಕ್ಷೆಯಲ್ಲಿ 10 ಟಾಪರ್ ​ಗಳ  ಪಟ್ಟಿ ಇಲ್ಲಿದೆ ನೋಡಿ

ಶಕ್ತಿ ದುಬೆ

ಹರ್ಷಿತಾ ಗೋಯೆಲ್

ಡೋಂಗ್ರೆ ಅರ್ಚಿತ್ ಪರಾಗ್

ಶಾ ಮಾರ್ಗಿ ಚಿರಾಗ್

ಆಕಾಶ್ ಗರ್ಗ್

ಕೊಮ್ಮಲ್ ಪುನಿಯಾ

ಆಯುಷಿ ಬನ್ಸಾಲ್

ರಾಜ್ ಕೃಷ್ಣ ಝಾ

ಆದಿತ್ಯ ವಿಕ್ರಮ್ ಅಗರ್ವಾಲ್

ಮಾಯಾಂಕ್ ತ್ರಿಪಾಠಿ

2024ರ ಸೆಪ್ಟೆಂಬರ್ ನಲ್ಲಿ ಮುಖ್ಯ ಪರೀಕ್ಷೆಯನ್ನು ನಡೆಸಲಾಗಿತ್ತು. ಬಳಿಕ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆಯಲಾಯಿತು. ಸಂದರ್ಶನದಲ್ಲಿ ಒಟ್ಟು 2845 ಅಭ್ಯರ್ಥಿಗಳು ಭಾಗವಹಿಸಿದ್ದರು.

key words: UPSC, results , declared