10 th , 12 th  ಫೇಲ್‌ : ಈಗ UPSC ತೇರ್ಗಡೆ..!

The achievement of Sub-Inspector Shantappa Kurubara, the proud son of Kalyana Karnataka, has made the entire Karnataka proud.

 

ಬೆಂಗಳೂರ. ಏ.17, 2024  : (www.justkannada.in news )  ಇತ್ತೀಚೆಗೆ ಒಟಿಟಿಯಲ್ಲಿ ತೆರೆಕಂಡು ಸದ್ದು ಮಾಡಿದ ʼ 12 th ಫೇಲ್‌ ʼ ಸಿನಿಮಾದ ಕಥೆಯನ್ನೇ ಹೋಲುವಂತಿದೆ ಕಲ್ಯಾಣ ಕರ್ನಾಟಕದ ಸಬ್‌ ಇನ್ಸ್‌ ಪೆಕ್ಟರ್‌ ಒಬ್ಬರ ಯಶೋಗಾಥೆ.

ಎಸ್ ಎಸ್‌ ಎಲ್‌ ಸಿ ಹಾಗೂ ದ್ವಿತೀಯ ಪಿ.ಯು.ಸಿ ಎರಡು ಪರೀಕ್ಷೆಗಳಲ್ಲೂ  ಫೇಲಾಗಿದ್ದ ಈ ಯುವಕ ಬಳಿಕ ಛಲ ಬಿಡದೆ ತೇರ್ಗಡೆ ಹೊಂದಿ ಸಬ್‌ ಇನ್ಸ್‌ ಪೆಕ್ಟರ್‌ ಹುದ್ದೆಗೆ ಸೇರ್ಪಡೆ. ಆದರೆ ಅಷ್ಟಕ್ಕೆ ಸುಮ್ಮನಾಗದೇ, ಸಿವಿಲ್‌ ಸರ್ವೀಸ್‌ ಪರೀಕ್ಷೆಗೆ ಸಿದ್ಧತೆ ನಡೆಸಿ ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಅವರೆ ಶಾಂತಪ್ಪ ಕುರುಬರ.

ಬಿಸಿಲು ನಾಡು ಕಲ್ಯಾಣ ಕರ್ನಾಟಕದ ಹೆಮ್ಮೆಯ ಪುತ್ರ ಸಬ್ ಇನ್ಸ್ಪೆಕ್ಟರ್ ಶಾಂತಪ್ಪ ಕುರುಬರ ಅವರ ಸಾಧನೆ ಇಡೀ ಕನ್ನಡ ನಾಡಿಗೆ ಹೆಮ್ಮೆ ತಂದಿದೆ. ಸಭಾಪತಿ ಬಸವರಾಜ್ ಹೊರಟ್ಟಿ ಅವರು ಬೆಂಗಳೂರಿನ ಕಾರ್ಯಾಲಯದಲ್ಲಿ ಕನ್ನಡದಲ್ಲಿ ಯು.ಪಿ. ಎಸ್ .ಸಿ ಪರೀಕ್ಷೆ ಬರೆದು ಪಾಸಾದ ಶಾಂತಪ್ಪ ಕುರುಬರ ಅವರನ್ನ ಸನ್ಮಾನಿಸಿದರು.

 

ಕೆಎಸ್ ಒಯುನಲ್ಲಿ ಈ ಬಾರಿ 17,808  ಅಡ್ಮಿಷನ್: ಪ್ರವೇಶಾತಿ ಹೆಚ್ಚಿಸಲು ಕ್ರಮ- ಕುಲಪತಿ ಶರಣಪ್ಪ ವಿ. ಹಲಸೆ.

 

ಬಳಿಕ ಮಾತನಾಡಿದ ಅವರು,  ಶಾಂತಪ್ಪ ಅವರು ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡು ಎಸ್. ಎಸ್. ಎಲ್. ಸಿ ಹಾಗೂ ಪಿ.ಯು.ಸಿಯಲ್ಲಿ ಫೇಲಾದರೂ  ನಿರಂತರ ಪರಿಶ್ರಮದಿಂದ ಅತ್ಯುನ್ನತ ಮಟ್ಟದ ಪರೀಕ್ಷೆಯಾದ ಯು. ಪಿ. ಎಸ್. ಸಿ ಪರೀಕ್ಷೆಯನ್ನು ಛಲ ಬಿಡದೆ ಬರೆದು ಪಾಸಾಗುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದುಳಿದ ಕಲ್ಯಾಣ ಕರ್ನಾಟಕದಿಂದ ಬಂದ ಶಾಂತಪ್ಪ ಕುರುಬರವರು ಆ ಭಾಗದ ಹೆಮ್ಮೆಯ ಪುತ್ರರಾಗದೆ ಇಡೀ ಕರ್ನಾಟಕದ ಕೀರ್ತಿ ಹೆಚ್ಚಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭರವಸೆ ಕಳೆದುಕೊಂಡ, ಕಳೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಶಾಂತಪ್ಪ ಕುರುಬರವರ ಸಾಧನೆಯ ಹಾದಿ ಅವರ ಜೀವನ  ವಿದ್ಯಾರ್ಥಿಗಳಿಗೆ ಅತ್ಯುನ್ನತ ಪಾಠ ಹಾಗೂ ಮಾದರಿ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ, ಯುವಕರಿಗೆ ಕಿವಿ ಮಾತನ್ನು ಹೇಳಿದ ಹೊರಟ್ಟಿ ,  ತಮ್ಮ ತಮ್ಮ ಜೀವನದ ಭರವಸೆಗಳು ಬತ್ತದಂತೆ ನೋಡಿಕೊಳ್ಳಿ,  ಕನಸು ಕಾಣಲು ದುಡ್ಡು ಖರ್ಚು ಮಾಡಬೇಕಾಗಿಲ್ಲ ಒಂದಿಷ್ಟು ಶ್ರಮ ಹಾಕಿದ್ರೆ ಸಾಕು. ನಿರಂತರ ಪ್ರಯತ್ನ  ಇಡೀ ತಮ್ಮ ಬದುಕನ್ನ ಹಸನಗೊಳಿಸುತ್ತದೆ.  ಆ ನಿಟ್ಟಿನತ್ತ ಪ್ರತಿಯೊಬ್ಬ ಯುವಕರು ಸಾಗಲಿ ನಿಮಗೂ ಕೂಡ ಶಾಂತಪ್ಪ ಕುರುಬರಂತೆ ಯಶಸ್ಸು ಖಂಡಿತವಾಗಿ ಸಿಗುತ್ತದೆ ಎಂದರು.

key words: UPSC, Shanthappa kurubara, Kalyana Karnataka

summary :

The achievement of Sub-Inspector Shantappa Kurubara, the proud son of Bisilu Nadu Kalyana Karnataka, has made the entire Karnataka proud.

The youth, who had failed in both SSLC and II PUC exams, later passed the exam and joined the post of sub-inspector. However, he did not give up and prepared for the civil services examination. They are Shantappa Kurubara.