ಜಾಲತಾಣವೇ ಅಲ್ಲ ಯು.ಆರ್.ಎಲ್ ಮತ್ತು ಇ-ಮೇಲ್ ಕೂಡ ಕನ್ನಡದಲ್ಲಿ-ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ…

ಬೆಂಗಳೂರು,ಜು,23,2020(www.justkannada.in): ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಮಾಡಿಕೊಂಡರೆ ಕನ್ನಡದ ಅಸ್ಮಿತೆಯು ವಿಶ್ವಮಟ್ಟದಲ್ಲಿ ಪಸರಿಸಲಿದೆ. ಈ ಕೆಲಸಗಳು ಮೊದಲು ಸರ್ಕಾರಿ ಜಾಲತಾಣಗಳಿಂದ ಪ್ರಾರಂಭಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಅಭಿಪ್ರಾಯ ಪಟ್ಟರು.url-e-mail-kannada-chairman-kannada-development-authority-ts-nagabharana

ಸರ್ಕಾರಿ ಜಾಲತಾಣಗಳಲ್ಲಿ ಯುಆರ್ಎಲ್ ಬಳಸುವ ಸಂಬಂಧ ಭಾಷಾತಜ್ಞರು ಮತ್ತು ತಂತ್ರಜ್ಞರೊಂದಿಗೆ ವಿಧಾನಸೌಧದ ತಮ್ಮ ಕಛೇರಿಯಲ್ಲಿ ಜಾಲ ಸಂಪರ್ಕ ಸಭೆ ನಡೆಸಿದ  ಟಿ.,ಎಸ್ ನಾಗಾಭರಣ,  ಎಲ್ಲರಿಗೂ ಲಭ್ಯವಿರುವ ಕನ್ನಡ ಜಾಲತಾಣವನ್ನು ಸರ್ಕಾರಿ ಇಲಾಖೆಗಳಲ್ಲಿ ಮೊದಲು ಅನುಷ್ಠಾನಗೊಳ್ಳಬೇಕಿದೆ. ಸರ್ಕಾರಿ ಜಾಲತಾಣಗಳಲ್ಲಿ ಯುಆರ್ಎಲ್ ಬಳಸುವ ಸಂಬಂಧ ಶೀಘ್ರದಲ್ಲಿಯೇ ನಿಯೋಗವೊಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಜಾಲತಾಣವೇ ಅಲ್ಲ ಯು.ಆರ್.ಎಲ್ ಮತ್ತು ಇ-ಮೇಲ್ ಕೂಡ ಕನ್ನಡದಲ್ಲಿ ಇರಬೇಕು ಎಂದು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

ಈಗಾಗಲೇ ಡಾಟ್ ಭಾರತ ಎಂಬ ಹೆಸರಿನಲ್ಲಿ ಕನ್ನಡ ಜಾಲತಾಣವನ್ನು ನಿರ್ವಹಿಸಬಹುದಾದ ಅವಕಾಶವಿದ್ದು, ಅದನ್ನು ಡಾಟ್ ಕರ್ನಾಟಕ ಎಂದು ಸಹ ನೋಂದಣಿ ಮಾಡಬಹುದಾದ ಪೂರ್ವ ಸಿದ್ಧತೆಗಳು, ನೀತಿ-ನಿರೂಪಣೆಗಳು ಮತ್ತು ಸಾಧಕ ಬಾಧಕಗಳ ಹಾಗೂ ತಾಂತ್ರಿಕ ದೋಷಗಳ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಿ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಅನುಷ್ಠಾನಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವುದಾಗಿ ಟಿ.ಎಸ್ ನಾಗಾಭರಣ ಹೇಳಿದರು.url-e-mail-kannada-chairman-kannada-development-authority-ts-nagabharana

ತಂತ್ರಜ್ಞಾನ ಬೆಳೆದಂತೆ ಸರ್ಕಾರದ ಆಡಳಿತ ಕೂಡ ಹೆಚ್ಚು ಹೆಚ್ಚು ಅದನ್ನು ಆಗು ಮಾಡಿಕೊಳ್ಳುವ ಮೂಲಕ ಸರಳೀಕರಣದ ಕಡೆಗೆ ಹೊರಳುತ್ತದೆ. ಪ್ರಾದೇಶಿಕ ಭಾಷೆಗಳು ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವಂತಾಗಬೇಕು. ಆಗಲೇ ಜನಾಡಳಿತ ಎಂಬುದು ನಿಜವಾಗಿಯೂ ಜನಭಾಷೆಯಲ್ಲಿ ಅಂದರೆ ಕನ್ನಡದಲ್ಲಿ ನಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.url-e-mail-kannada-chairman-kannada-development-authority-ts-nagabharana

ಮಾನ್ಯ ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ, ಭಾಷಾಂತರ ಇಲಾಖೆ ನಿರ್ದೇಶಕರಾದ ಡಾ.ಡಿ.ಸ್ಮಿತಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಇ-ಆಡಳಿತದ ಯೋಜನಾ ನಿರ್ದೇಶಕರಾದ ಕೆ.ಎಸ್.ಶಿವರಾಮ್, ವೆಬ್ ಪೋರ್ಟಲ್ ಯೋಜನಾಧಿಕಾರಿ ಸತೀಶ್,  ಇ-ಆಡಳಿತದ ಯೋಜನಾ ವ್ಯವಸ್ಥಾಪಕರಾದ ಪುಷ್ಪ, ಹಲ್ಮಿಡಿ ಕನ್ನಡ ಕೂಟದ ಜ್ಞಾನೇಶ್ವರ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ತಜ್ಞರಾದ ಡಾ.ಯು.ಬಿ.ಪವನಜ, ಶಂಕರ್ ಪ್ರಸಾದ್ ಮತ್ತಿತರರು ಉಪಸ್ಥತರಿದ್ದರು.

Key words: URL – E-mail – Kannada – Chairman – Kannada Development Authority- TS Nagabharana