ಗುಜರಾತ್,ಫೆ,24,2020(www.justkannada.in): ಭಾರತಕ್ಕೆ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡು ಇಂದು ಅಹಮದಾಬಾದ್ ಗೆ ಬಂದಿಳಿದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನ ಪ್ರಧಾನಿ ಮೋದಿ ಸ್ವಾಗತಿಸಿದರು.
ಟ್ರಂಪ್ ಅವರ ಜತೆ ಪತ್ನಿ ಮೆಲಾನಿಯಾ ಆಗಮಿಸಿದ್ದು ಇದೀಗ ಟ್ರಂಪ್ ದಂಪತಿ ಜತೆ ಪ್ರಧಾನಿ ಮೋದಿ ಅಹಮದಾಬಾದ್ ನ ಶಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಶಬರಮತಿ ಆಶ್ರಮಕ್ಕೆ ಆಗಮಿಸಿದ ಡೊನಾಲ್ಡ್ ಟ್ರಂಪ್ ಅವರಿಗೆ ಖಾದಿ ಶಾಲು ಹೊದಿಸಿ ಪ್ರಧಾನಿ ಮೋದಿ ಸ್ವಾಗತ ಕೋರಿದರು.
ನಂತರ ಮಹಾತ್ಮಾಗಾಂಧಿ ಭಾವಚಿತ್ರಕ್ಕೆ ಟ್ರಂಪ್ ದಂಪತಿ ಹಾರ ಹಾಕಿ ನಮನ ಸಲ್ಲಿಸಿದರು. ಈ ವೇಳೆ ಪ್ರಧಾನಿ ಮೋದಿ ಶಬರಮತಿ ಆಶ್ರಮದ ಬಗ್ಗೆ ಡೊನಾಲ್ಡ್ ಟ್ರಂಪ್ ಅವರಿಗೆ ವಿವರಣೆ ನೀಡಿದರು. ಇದೇ ವೇಳೆ ಡೊನಾಲ್ಡ್ ಟ್ರಂಪ್ ದಂಪತಿ ಚರಕದೆದುರು ಕುಳಿತು ಬಟ್ಟೆ ನೆಯ್ಗೆ ಅನುಭವ ಪಡೆದರು.
Key words: US President -Donald Trump -Prime Minister Modi- visits-shabaramathi ashrama