ಉಕ್ರೇನ್ ಮೇಲೆ ರಷ್ಯಾ ದಾಳಿ ಖಂಡಿಸಿದ ಅಮೇರಿಕಾ ಅಧ್ಯಕ್ಷ  ಜೋ ಬೈಡನ್.

ವಾಷಿಂಗ್ಟನ್,ಫೆಬ್ರವರಿ,24,2022(www.justkannada.in): ಉಕ್ರೇನ್ ಮೇಲೆ ಯುದ‍್ಧ ಘೋಷಿಸಿರುವ ರಷ್ಯಾದ ನಡೆಗೆ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಷ್ಯಾ ದೊಡ್ಡ ಅಪರಾಧ ಮಾಡುತ್ತಿದೆ. ಅಮೇರಿಕಾ ಮತ್ತು ಮಿತ್ರ ರಾಷ್ಟ್ರಗಳು ಪ್ರತ್ಯುತ್ತರ ನೀಡುತ್ತವೆ. ಸಾವು ನೋವು ಆಸ್ತಿಪಾಸ್ತಿ ಹಾನಿಗೆ ರಷ್ಯಾ ಜವಾಬ್ದಾರಿಯಾಗಬೇಕಾಗುತ್ತದೆ ಎಂದು ಜೋಬೈಡನ್ ತಿಳಿಸಿದ್ದಾರೆ.

ಯುಎಸ್​ ಮತ್ತು ಅದರ ಮಿತ್ರ ರಾಷ್ಟ್ರಗಳು ಸಂಘಟಿತ ಮತ್ತು ನಿರ್ಣಾಯಕ ಮಾರ್ಗದಲ್ಲಿ ಪ್ರತಿಕ್ರಿಯಿಸಲಿವೆ. ಇಡೀ ಜಗತ್ತು ರಷ್ಯಾವನ್ನು ಹೊಣೆಗಾರನನ್ನಾಗಿ ಮಾಡುತ್ತದೆ. ರಷ್ಯಾದ ಮಿಲಿಟರಿ ಪಡೆಯಿಂದ ಅನ್ಯಾಯಯುತವಾದ ಮತ್ತು ಅಪ್ರಚೋದಿತ ದಾಳಿಗೆ ಯೂಕ್ರೇನ್​ ಮಂದಿ ಬಳಲಬೇಕಾಗಿದ್ದು, ಇಡೀ ಜಗತ್ತಿನ ಪ್ರಾರ್ಥನೆ ಯೂಕ್ರೇನ್​ ಜನರೊಂದಿಗೆ ಇದೆ. ರಷ್ಯಾ ಅಧ್ಯಕ್ಷ ಪುಟಿನ್ ಅವರು ಪೂರ್ವಯೋಜಿತ ಯುದ್ಧವನ್ನು ಆರಿಸಿದ್ದು, ಅದು ದುರಂತದ ಜೀವಹಾನಿ ಮತ್ತು ಮಾನವ ಸಂಕಟವನ್ನು ತರುತ್ತದೆ ಎಂದು ಜೋಬೈಡನ್ ಹೇಳಿದ್ದಾರೆ.

ಉಕ್ರೇನ್ ಪರ ಅಮೇರಿಕಾ ನಿಂತಿದ್ದು, ಉಕ್ರೇನ್ ನತ್ತ ಅಮೆರಿಕಾ ಯುದ್ಧ ವಿಮಾನಗಳು ತೆರಳುತ್ತಿದ್ದು, ಪೋಲೆಂಡ್ ನಲ್ಲಿ ಪೋಲೆಂಡ್ ನಲ್ಲಿ ಅಮೇರಿಕಾ ಸೇನೆ ಬೀಡುಬಿಟ್ಟಿದೆ ಎನ್ನಲಾಗಿದೆ.

Key words: US-President-Joe Biden- condemns- Russia- attack