ಅಮೆರಿಕ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್ ಜಯಭೇರಿ

ನವದೆಹಲಿ,ನವೆಂಬರ್,6,2024 (www.justkannada.in): ಅಮೆರಿಕ ಅಧ್ಯಕ್ಷೀಯ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಡೊನಾಲ್ಡ್ ಟ್ರಂಪ್ ಜಯ ಗಳಿಸಿದ್ದು ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದೆ.

ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ  277 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಬಹುಮತ ಪಡೆದಿದೆ. ಬಹುಮತಕ್ಕೆ 270 ಸ್ಥಾನಗಳು ಅವಶ್ಯಕ. ಇನ್ನು ಹಾಲಿ ಉಪಾಧ್ಯಕ್ಷೆ ಡೆಮಾಕ್ರೆಟಿಕ್ ಪಕ್ಷದ ಹಾಗೂ ಭಾರತೀಯ ಮೂಲದ ಕಮಲಾ ಹ್ಯಾರಿಸ್  ಸೋಲನುಭವಿಸಿದ್ದಾರೆ

ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ 538 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ  277, ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ 226 ಸ್ಥಾನಗಳಲ್ಲಿ  ಗೆಲುವು ಸಾಧಿಸಿದ್ದಾರೆ.

ಭರ್ಜರಿ ಗೆಲುವಿನ ಬಳಿಕ ಮಾತನಾಡಿರುವ ಡೊನಾಲ್ಡ್  ಟ್ರಂಪ್ ಇತಿಹಾಸ ಮರುಸೃಷ್ಠಿಸಿದ್ದೇವೆ ಎಂದಿದ್ದಾರೆ. ಡೊನಾಲ್ಡ್ ಟ್ರಂಪ್ ಮುಂದಿನ ಅಧ್ಯಕ್ಷ ಎಂದು ಶ್ವೇತಭವನ ಘೋಷಣೆ ಮಾಡಿದೆ ಎನ್ನಲಾಗಿದೆ.   2025 ಜನವರಿ 20 ರಂದು ಹೊಸ ಅಧ್ಯಕ್ಷರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ 2ನೇ ಬಾರಿಗೆ ಅಮೇರಿಕ ಅಧ್ಯಕ್ಷ ಗದ್ದುಗೆಗೇರಲು ಟ್ರಂಪ್ ರೆಡಿಯಾಗಿದ್ದಾರೆ.

Key words: US, presidential election, Donald Trump, wins