ಆಂಧ್ರ ಪ್ರದೇಶ,ಸೆಪ್ಟಂಬರ್,20,2024 (www.justkannada.in): ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಕಳಪೆ ಎಣ್ಣೆ ಬಳಸಲಾಗಿದೆ ಎಂದು ಆಂಧ್ರ ಸರ್ಕಾರ, ಸಿಎಂ ಚಂದ್ರಬಾಬು ನಾಯ್ಡು ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ವೈಎಸ್ ಜಗನ್, ಸಿಎಂ ನಾಯ್ಡು ದೇವರನ್ನೂ ರಾಜಕೀಯಕ್ಕೆ ಬಳಸಿಕೊಳ್ಳೂತ್ತಿದ್ದಾರೆ. ತಮ್ಮ ಆಡಳಿತ ವೈಪಲ್ಯ ಮರೆಮಾಚಲು ಈ ರೀತಿ ಮಾಡುತ್ತಿದ್ದಾರೆ. ತಿರುಪತಿ ಲಡ್ಡು ವಿಚಾರದಲ್ಲಿ ಸುಳ್ಳು ಹೇಳುತ್ತಿರುವುದು ಧರ್ಮವೇ? ಎಂದು ಪ್ರಶ್ನಿಸಿದ್ದಾರೆ.
ಸಿಎಂ ನಾಯ್ಡು ಸುಳ್ಳು ಹೇಳಿಕೆಯಿಂದ ಭಕ್ತರ ನಂಬಿಕೆಗೆ ಧಕ್ಕೆಯಾಗಿದೆ. ತುಪ್ಪ ಪೂರೈಕೆ ಟೆಂಡರ್ ಕರೆಯುವುದು ಹೊಸದೇನಲ್ಲ ಪ್ರತಿ 6 ತಿಂಗಳಿಗೊಮ್ಮೆ ತುಪ್ಪ ಪೂರೈಕೆಗೆ ಟೆಂಡರ್ ಕರೆಯಲಾಗುತ್ತದೆ. ಯಾರಿಗೆ ಎಲ್ 1 ಬರುತ್ತದೇ ಅವರಿಗೆ ಟೆಂಡರ್ ನೀಡಲಾಗುತ್ತದೆ ಎಂದು ಆಂಧ್ರ ಮಾಜಿ ಸಿಎಂ ವೈಎಸ್ ಜಗನ್ ಸ್ಪಷ್ಟನೆ ನೀಡಿದರು.
Key words: use, animal fat, Tirupati Laddu, Andhra CM, Naidu, YS Jagan