ಮೈಸೂರು,ಜೂ,24,2019(www.justkannada.in): ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸುವಂತೆ ಕಾಂಗ್ರೆಸ್ ಮಹಿಳಾ ಘಟಕದಿಂದ ಪೋಸ್ಟ್ ಕಾರ್ಡ್ ಚಳುವಳಿ ಆರಂಭಿಸಿದ್ದೇವೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್ ಹೇಳಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪುಷ್ಪಾ ಅಮರನಾಥ್ ಅವರು, ಚುನಾವಣೆಗಳಲ್ಲಿ ಇವಿಎಂ ಬಗ್ಗೆ ಅನುಮಾನ ಮೂಡುತ್ತಿದ್ದು, ಪಾರದರ್ಶಕ ಚುನಾವಣೆ ನಡೆಯಬೇಕಿದೆ. ಅದಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಚಳುವಳಿ ಮಾಡುತ್ತಿದ್ದೇವೆ. ಒಂದು ಲಕ್ಷ ಪೋಸ್ಟ್ ಕಾರ್ಡ್ ಚಳುವಳಿ ಮೂಲಕ ರಾಷ್ಟಪತಿಗಳಿಗೆ ಪತ್ರ ಬರೆಯಲಿದ್ದೇವೆ. ಮಹಿಳಾ ಘಟಕದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಹಾಗೆಯೇ ಡಿಜಟಲೀಕರಣಿದಿಂದ ಅನುಕೂಲಗಳ ಜೊತೆಗೆ ಅನಾನುಕೂಲವ ಆಗಿದೆ. ಜನರ ಬ್ಯಾಂಕ್ ಖಾತೆಗಳು ಕೂಡ ಹ್ಯಾಕ್ ಆಗುತ್ತಿದೆ. ಅದರಂತೆ ಇವಿಎಂಗಳ ಹ್ಯಾಕ್ ಆಗುವ ಸಾದ್ಯತೆ ಇದೆ. ಇಂತಹ ಅನುಮಾನ ಮೂಡಿಸುವ ಇವಿಎಂಗಳಿಂದ ಪಾರದರ್ಶಕ ಚುನಾವಣೆ ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತಿದೆ. ಗೊಂದಲಗಳ ನಡುವೆ ಚುನಾವಣೆ ನಡೆಸೋದು ಎಷ್ಟು ಸರಿ. ಹೀಗಾಗಿ ಪ್ರಜಾಪ್ರಭುತ್ವ ಉಳಿವಿಗೆ ಈ ಕಾರ್ಯ ಕೈಗೊಂಡಿದ್ದೇವೆ. ರಾಷ್ಟ್ರಪತಿಗಳಿಗೆ ಪ್ರಜಾಪ್ರಭುತ್ವ ಉಳಿಸಿ ಎಂದು ಮನವಿ ಮಾಡುತ್ತಿದ್ದೇವೆ ಎಂದು ಪುಷ್ಪ ಅಮರನಾಥ್ ಹೇಳಿದರು.
ರಾಷ್ಟ್ರದ ಬಹುತೇಕ ರಾಜಕೀಯ ಪಕ್ಷಗಳು ಇವಿಎಂ ಬೇಡ ಎಂದರೆ ಬಿಜೆಪಿ ಅದೇಕೆ ಹಠ ಮಾಡುತ್ತಿದೆಯೋ ತಿಳಿಯದು. ನಮಗಿಂತಲೂ ತಾಂತ್ರಕವಾಗಿ ಒಂದು ಹೆಜ್ಜೆ ಮುಂದಿರುವ ಅಮೇರಿಕ, ಜರ್ಮನಿ ಮುಂತಾದ ರಾಷ್ಟ್ರಗಳಲ್ಲಿ ಮತಪತ್ರವೇ ಇದೆ. ನಾವೇಕೆ ಇವಿಎಂ ಎಂಬ ಮಹಾಮಾರಿ ಬೆನ್ನಿಗೆ ಕಟ್ಟಿಕೊಳ್ಳುವುದು ಎಂಬುದು ನಮ್ಮ ಪ್ರಶ್ನೆ ಎಂದು ಪುಷ್ಪ ಅಮರನಾಥ್ ತಿಳಿಸಿದರು.
Key words: use -ballot paper – elections-Postcard Movement – Congress Women Unit