ಕನ್ನಡ ಗೊತ್ತಿಲ್ಲದವರಿಗೆ ಹಂಪ ನಾಗರಾಜಯ್ಯ ಅವರ ಕೃತಿಯಿಂದ ಉಪಯುಕ್ತ ಮಾಹಿತಿ-ಪ್ರೊ.ಜಿ. ಹೇಮಂತ್ ಕುಮಾರ್.

ಮೈಸೂರು,ಜುಲೈ,23,2022(www.justkannada.in):  ಇಂದು ಬಿಡುಗಡೆಯಾದ ನಾಡೋಜ ಹಂಪ ನಾಗರಾಜಯ್ಯ ಅವರ ಕೃತಿಗಳು ಕನ್ನಡ ಗೊತ್ತಿಲ್ಲದ ಅನ್ಯದೇಶದ ಆಸಕ್ತರಿಗೆ ಅತ್ಯಂತ ಉಪಯುಕ್ತ ಮಾಹಿತಿಯನ್ನು ಒದಗಿಸುವ ಆಕರಗಳಾಗಿವೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗ,‌ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಸಪ್ನ ಬುಕ್ ಹೌಸ್ ವತಿಯಿಂದ ಮಾನಸಗಂಗೋತ್ರಿ ಬಿಎಂಶ್ರೀ ಸಭಾಂಗಣದಲ್ಲಿ ಹಂಪ ನಾಗರಾಜಯ್ಯ ಅವರ ಐದು ಪುಸ್ತಕದ ಕುರಿತು ನಡೆದ ಒಂದು ಅನುಸಂಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡದ ಈ ಶ್ರೇಷ್ಠ ಸಾಹಿತ್ಯವನ್ನು ಬಹುದೊಡ್ಡ ಪ್ರಮಾಣದಲ್ಲಿ ಇಂಗ್ಲಿಷ್‌ ಮೂಲಕ ಜಾಗತಿಕ ವೇದಿಕೆಯಲ್ಲಿ ನಿಲ್ಲಿಸಿದವರು ಹಂಪನಾ, ಜಗತ್ತಿನ ಬೇರೆ ಬೇರೆ ಸಾಹಿತ್ಯದ ಜತೆಗೆ ಕನ್ನಡ ಸಾಹಿತ್ಯವನ್ನು ಹೋಲಿಸಿ ಇದರ ಮಹತ್ವವನ್ನು ತಿಳಿಸುವ ಕಾರ್ಯ ಪ್ರಶಂಸನೀಯ.

ಈ ಐದು ಕೃತಿಗಳು ಪಂಪ ಪೂರ್ವಯುಗ ಪಂಪ ಉತ್ತರಯುಗದ ಎರಡು ಸಂಪಟಗಳು, ಸಂಸ್ಕೃತ ಪ್ರಾಕೃತ ಅಪಭ್ರಂಶ ಸಾಹಿತ್ಯ ಕುರಿತ ನಾಲ್ಕನೇ ಸಂಪುಟ ಶಾಸನಗಳ ಕುರಿತ ಐದನೆಯ ಸಂಪುಟ. ಹೀಗೆ ಐದು ಕೃತಿಗಳಲ್ಲಿ ಕರ್ನಾಟಕದ ಸಾಹಿತ್ಯ ಕುರಿತ ವಿಷಯವನ್ನು ಒಳಗೊಂಡಿದೆ ಎಂದರು.

ಹಂಪನಾ ಅವರು ಕನ್ನಡದ ಹಿರಿಯ ವಿದ್ವಾಂಸರು, ಅಭಿಜಾತ ಕನ್ನಡ ಸಾಹಿತ್ಯದ ಆಳ ಅಗಲಗಳನ್ನು ಅರಿತವರು. ಜೈನ‌ಕವಿಗಳು ಬರೆದ ಸಾಹಿತ್ಯದಲ್ಲಿ ಅಗಾದ ಪರಿಶ್ರಮವಿರುವವರು. ಅವರ ಈ ಐದು ಕೃತಿಗಳು ಇದನ್ನು ಸಾಬೀತುಪಡಿಸುತ್ತವೆ. ಈ ಕುರಿಯ ವಿಚಾರ ಸಂಕಿರಣಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಸಾಕ್ಷಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಸಾಹಿತ್ಯ ಸಂಸ್ಕೃತಿ, ಚರಿತ್ರ ಜಾನಪದ ಮುಂತಾದ ಕ್ಷೇತ್ರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿರುವ ಹಂಪನಾ, ಇದೀಗ ಕನ್ನಡ ಸಾಹಿತ್ಯದ ಆರಂಭದಿಂದ 13ನೇ ಶತಮಾನದವರೆಗಿನ ಕಾಲದಲ್ಲಿ ರಚನೆಯಾದ ಸಾಹಿತ್ಯದ ತಿರುಳನ್ನು ಈ ಸಂಪುಟಗಳಲ್ಲಿ ತಂದಿದ್ದಾರೆ. ಅವರು ಸಾಹಿತ್ಯದಲ್ಲಿ ಪರಿಣತಿ ಪಡೆದದ್ದರ ಜತೆಗೆ ರಾಷ್ಟ್ರಕೂಟ ಸಾಮ್ರಾಜ್ಯದ ಬಗೆಗೂ ಸಾಕಷ್ಟು ಅಧಿಕಾರಯುತವಾಗಿ ಮಾತನಾಡಬಲ್ಲರು. ರಾಷ್ಟ್ರಕೂಟ ಸಾಮ್ರಾಜ್ಯದಲ್ಲಿ ಜೈನ ಧರ್ಮ ಉತ್ತುಂಗಕ್ಕೇರಿತ್ತು ಎಂದರು.

ನಾಡೋಜ ಹಂಪ ನಾಗರಾಜಯ್ಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ವಿಜಯ ಕುಮಾರಿ ಎಸ್. ಕರಿಕಲ್, ವಿಶ್ರಾಂತ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ಸೇರಿದಂತೆ ಇತರರು ಇದ್ದರು. ಪ್ರೊ.ವನಮಾಲಾ ವಿಶ್ವನಾಥ್, ಪ್ರತಿಭಾ ನಂದಕುಮಾರ್,  ಡಾ.ಪದ್ಮಿನಿ ನಾಗರಾಜು, ಡಾ.ಎನ್.ಆರ್.ಲಲಿತಾಂಬ, ಪ್ರೊ.ಎಸ್‌.ಶಶಿಕಲಾ ಸಂಪುಟದ ಕೃತಿಗಳ ಕುರಿತು ಮಾತನಾಡಿದರು.

Key words: Useful- information -Hampa Nagarajaiah’s- work – Kannada-Prof. G. Hemanth Kumar.

ENGLISH SUMMARY…

Hampa Nagarajaiah’s book will be helpful for those who don’t know Kannada: UoM VC
Mysuru, July 23, 2022 (www.justkannada.in): “The books penned by Nadoja Hampa Nagarajaiah will provide useful information for foreigners who are interested to know about Kannada language,” observed Prof. G. Hemanth Kumar, Vice-Chancellor, University of Mysore.
He participated in a program on introduction of five books authored by renowned litterateur Hampa Nagarajaiah, organized by the Department of Jainology and Nature Studies, Kuvempu Research Center, in association with the Sapna Book House, held at the BMShri Auditorium in Mysuru today.
“The credit of presenting several kannada literary works to the English readers at the global level goes to Hampana. His works of educating the people about the signficance of Kannada literature comparing it with the literature of other countries is appreciable,” he said.
Nadoja Hampa Nagarajaiah, Kuvempu Research Center Director Dr. Vijayakumar S. Karikal, former VC Prof. Mallika Ghanti and others were present. Prof. Vanamala Vishwanath, Pratibha Nandakumar, Dr. Padmini Nagaraju, Dr. N.R. Lalitamba and Prof. S. Shashikala spoke about the books.
Keywords: Hampa Nagarajaiah/ 5 books/ introduction