ಮೈಸೂರು,ಜುಲೈ,11,2023(www.justkannada.in): ಮೈಸೂರಿನಲ್ಲಿ ಮುರ್ರಾ ತಳಿಯ ಎಮ್ಮೆಯೊಂದು ಕರು ಹಾಕಿದ ನಂತರ ಗರ್ಭಕೋಶ ಹೊರಬಂದಿದ್ದು ಈ ವೇಳೆ ಪಶುವೈದ್ಯೆಯೊಬ್ಬರು ಕ್ಲಿಷ್ಟಕರವಾದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮುರ್ರಾ ತಳಿಯ ಎಮ್ಮೆಯೊಂದು ಕರು ಹಾಕಿದೆ. ನಂತರ ಅದರ ಗರ್ಭಕೋಶ ಹೊರಬಂದಿದೆ ಎಮ್ಮೆಗಳಲ್ಲಿ ಈ ರೀತಿಯ ಪರಿಸ್ಥಿತಿಯನ್ನು ನಿಭಾಯಿಸುವುದು ಮತ್ತು ಗರ್ಭಕೋಶನವನ್ನು ಯಥಾ ಸ್ಥಿತಿಯಲ್ಲಿ ಇರಿಸುವುದು ಸ್ವಲ್ಪ ದುಸ್ತರವಾದ ಕೆಲಸ ಸಾಕಷ್ಟು ಪರಿಶ್ರಮ ಮತ್ತು ಸಾಮರ್ಥ್ಯ ಬೇಕಾಗುತ್ತದೆ. ಪುರುಷ ಪಶು ವೈದ್ಯರಿಗೂ ಇದು ಅನೇಕ ಬಾರಿ ಸವಾಲಿನ ಸಂಗತಿಯೇ ಸರಿ. ಅದರಲ್ಲೂ ನಡು ರಸ್ತೆಯಲ್ಲಿ ಎಲ್ಲೆರೆದುರು ನಿರ್ಲಿಪ್ತವಾಗಿ ಕಾರ್ಯನಿರ್ವಹಿಸುವುದು ದುಸ್ತರವೇ ಸರಿ.
ಇಂತಹ ಪರಿಸ್ಥಿತಿಯಲ್ಲಿ ಮೈಸೂರು ಹಿನಕಲ್ ನ ಪಶುವೈದ್ಯೆ ಡಾ. ವರಲಕ್ಷ್ಮಿ ಅವರು ಎಮ್ಮೆಯ ಗರ್ಭಕೋಶನವನ್ನು ಯಥಾ ಸ್ಥಿತಿಯಲ್ಲಿ ಇರಿಸುವುದರ ಮೂಲಕ ಚಿಕಿತ್ಸೆ ನೀಡಿ ಅತ್ಯಂತ ಸವಾಲಿನ ಕ್ಲಿಷ್ಟಕರವಾದ ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಮಹಿಳಾ ಪಶುವೈದ್ಯರ ಸಾರ್ಥಕ ಕರ್ತವ್ಯಕ್ಕೆ ಎಲ್ಲಾ ಪಶು ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಪಶು ವೈದ್ಯಕೀಯ ಕ್ಷೇತ್ರದಲ್ಲೂ ಮಹಿಳೆ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಇವರು ನಿದರ್ಶನರಾಗಿದ್ದಾರೆ. ಮಹಿಳೆ ಯಾವ ಕ್ಷೇತ್ರದಲ್ಲಾದರೂ ಎಂಥಾ ಕಷ್ಟಕರವಾದ ಸಂದರ್ಭ ದಲ್ಲಾದರೂ ಸಮರ್ಥರಾಗಿ ನಿಭಾಯಿಸುತ್ತಾರೆ ಎಂಬುದಕ್ಕೆ ಇದು ಜ್ವಲಂತ ಸಾಕ್ಷಿಯಾಗಿದೆ.
Key words: Uterus -buffalo – calving-Appreciation – duty – veterinarian.