ಬೆಂಗಳೂರು,ಫೆಬ್ರವರಿ,07,2021(www.justkannada.in) : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದ್ದು, ಹೈ-ಅಲರ್ಟ್ ಘೋಷಿಸಲಾಗಿದೆ.
ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದ ರೈನಿ ಗ್ರಾಮದಲ್ಲಿ ಹಿಮನದಿ ಉಕ್ಕಿ ಹರಿದಿದ್ದು, ಋಷಿ ಗಂಗಾ ವಿದ್ಯುತ್ ಯೋಜನೆಗೆ ಹಾನಿಯುಂಟಾಗಿದೆ.
ಹಿಮಪ್ರವಾಹದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಸೇರಿದಂತೆ ಜಿಲ್ಲಾಡಳಿತವು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.
ಜನರಲ್ಲಿ ಗಂಗಾ ನದಿಯ ಕಡೆಗೆ ಹೋಗದಂತೆ ಹಾಗೂ ಅಲಕಾನಂದ ನದಿಯ ದಂಡದಲ್ಲಿ ವಾಸಿಸುವ ಜನರಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಎನ್ಡಿಆರ್ಎಫ್ನ ಮೂರು ತಂಡಗಳು ಡೆಹ್ರಾಡೂನ್ನಿಂದ ಧಾವಿಸಲಾಗುತ್ತಿದೆ. ಹೆಚ್ಚುವರಿ ಮೂರು ತಂಡಗಳು ವಾಯುಪಡೆಯ ಹೆಲಿಕಾಪ್ಟರ್ನೊಂದಿಗೆ ಸಂಜೆಯ ವೇಳೆಗೆ ತಲುಪಲಿದೆ. ಎಸ್ಡಿಆರ್ಎಫ್ ಹಾಗೂ ಸ್ಥಳೀಯ ಆಡಳಿತ ಈಗಾಗಲೇ ಪ್ರದೇಶದಲ್ಲಿದೆ ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ.
ತಕ್ಷಣ ಪರಿಹಾರ ಕಾರ್ಯಾಚರಣೆಗೆ ನೆರವಾಗುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ. ವಾಯುಪಡೆ ಹಾಗೂ ಎನ್ಡಿಆರ್ಎಫ್ ಪಡೆಗಳನ್ನು ರವಾನಿಸಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
key words : Uttarakhand-Chamoli District-Snow flow-Hi-Alert-Declaration