ನವದೆಹಲಿ,ಜನವರಿ,8,2025 (www.justkannada.in): ಕೇಂದ್ರ ಸರ್ಕಾರವು ವಿ.ನಾರಾಯಣನ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ನೂತನ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ.
ದೇಶದ ಹಿರಿಯ ಗಗನಯಾತ್ರಿ ಮತ್ತು ಕ್ರಯೋಜೆನಿಕ್ ಎಂಜಿನ್ ತಜ್ಞ ವಿ.ನಾರಾಯಣನ್ ಅವರು ಜನವರಿ 14 ರಂದು ಪ್ರಸ್ತುತ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎಸ್.ಸೋಮನಾಥ್ ಅವರು ಎರಡು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಿದ ನಂತರ ಜನವರಿ 14ರಂದು ನಿವೃತ್ತರಾಗಲಿದ್ದಾರೆ.
ವಿ ನಾರಾಯಣನ್ ಅವರ ನೇಮಕವು ಎರಡು ವರ್ಷಗಳ ಅವಧಿಗೆ ಇರುತ್ತದೆ ಎಂದು ಹೇಳಲಾಗಿದೆ. ವಿ ನಾರಾಯಣನ್ ಅವರಿಗೆ ಸುಮಾರು ನಾಲ್ಕು ದಶಕಗಳ ಅನುಭವವಿದೆ.
ನಾರಾಯಣನ್ ಪ್ರಸ್ತುತ ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋದ ಎಲ್‌ಪಿಎಸ್‌ಸಿಯ ನಿರ್ದೇಶಕರಾಗಿದ್ದಾರೆ. ವಲಿಯಮಲದಲ್ಲಿರುವ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ (LPSC) ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ನಾರಾಯಣನ್ ಅವರು 1984 ರಲ್ಲಿ ಇಸ್ರೋಗೆ ಸೇರ್ಪಡೆಗೊಂಡರು. ನಾರಾಯಣನ್ ಅವರು ಆದಿತ್ಯ ಬಾಹ್ಯಾಕಾಶ ನೌಕೆ ಮತ್ತು GSLV MK-III ಮಿಷನ್‌ನಂತಹ ಪ್ರಮುಖ ಯೋಜನೆಗಳಿಗೆ ಗಮನಾರ್ಹ ಕೊಡುಗೆ ನೀಡಿದವರು. ಇವರ ಪರಿಣತಿ ಮತ್ತು ಸಾಧನೆಗಳನ್ನು ಗುರುತಿಸಿ ಹಲವು ಪ್ರಶಸ್ತಿಗಳು ಬಂದಿವೆ. ಭಾರತದ ಆಸ್ಟ್ರೋನಾಟಿಕಲ್ ಸೊಸೈಟಿಯಿಂದ ‘ಶ್ರೀ ಪ್ರಶಸ್ತಿ’ ಮತ್ತು IIT ಖರಗ್‌ಪುರದಿಂದ ‘ಡಿಸ್ಟಿಂಗ್ವಿಶ್ಡ್ ಅಲುಮ್ನಸ್ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು.
Key words: V. Narayanan, appointed ,new Chairman, ISRO