ದೇಶ ಕಂಡ ದುರ್ಬಲ ಪ್ರಧಾನಿ ಮೋದಿ: ಅವರನ್ನ ಪಿಎಂ ಹುದ್ದೆಯಿಂದ ಕೆಳಗಿಳಿಸಲು RSS ಯತ್ನ- ವಿ.ಎಸ್ ಉಗ್ರಪ್ಪ

ಮೈಸೂರು,ಏಪ್ರಿಲ್,19,2025 (www.justkannada.in): ಈ ದೇಶ ಕಂಡಂತಹ ದುರ್ಬಲ ಪ್ರಧಾನ ಮಂತ್ರಿ ಅಂದ್ರೆ ಅದು ನರೇಂದ್ರ ಮೋದಿ. ದೇಶದಲ್ಲಿ ಮೋದಿ ಪಾಪ್ಯುಲರಿಟಿ ಕಡಿಮೆಯಾಗಿದೆ. ಹೀಗಾಗಿ ಅವರನ್ನ ಹುದ್ದೆಯಿಂದ ಕೆಳಗಿಳಿಸಲು ಆರ್ ಎಸ್ ಎಸ್ ನವರು ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್  ಉಗ್ರಪ್ಪ ಅಚ್ಚರಿ ಹೇಳಿಕೆ ನೀಡಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ  ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಮಾಜಿ ಶಾಸಕ ಜಿ.ಎನ್ ನಂಜುಂಡಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ವಿ.ಎಸ್ ಉಗ್ರಪ್ಪ, ಆರ್ ಎಸ್ ಎಸ್ ನವರು ಮೋದಿಯನ್ನ ತೆಗೆಯಬೇಕು ಎಂದುಕೊಂಡೊದ್ದಾರೆ. ದೇಶದಲ್ಲಿ ಮೋದಿ ಪಾಪ್ಯುಲರಿಟಿ ಕಡಿಮೆಯಾಗಿದೆ. ದೇಶದಲ್ಲಿ ಬೆಲೆ ಏರಿಕೆ, ಕೋಮುವಾದದ ಮೂಲಕ ದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಮೋದಿ ಹೀಗೆ ಬಿಟ್ಟರೆ ಪಕ್ಷಕ್ಕೆ ಕಳಂಕ ಬರುತ್ತದೆ ಎಂದು ಮೋದಿಯನ್ನ ಪ್ರಧಾನಿ ಹುದ್ದಯಿಂದ ಕೆಳಗಿಳಿಸುವ ಯತ್ಮ ಮಾಡುತ್ತಿದ್ದಾರೆ ಎಂದು ಹೇಳಿದರು.

ತಾಕತ್ತಿದ್ದರೆ ಬಿಜೆಪಿಯವರು ಸಾರ್ವಜನಿಕ ಚರ್ಚೆಗೆ ಬನ್ನಿ

ಜನ ವಿರೋಧಿ ಪ್ರವೃತ್ತಿ ಅಭಿವೃದ್ಧಿ ವಿರೋಧಿ, ಸಮಾಜವನ್ನ ಒಡೆದು ಆಳುವ ಪ್ರವೃತ್ತಿಯನ್ನು  ಮೈಗೂಡಿಸಿಕೊಂಡಿರುವ ವ್ಯಕ್ತಿ ನರೇಂದ್ರ ಮೋದಿ. ಕಳೆದ ಹತ್ತು ಹನ್ನೊಂದು ವರ್ಷಗಳಲ್ಲಿ ಈ ದೇಶದ ಸಾಲ ಸುಮಾರು 175 ಲಕ್ಷ ಕೋಟಿಗೆ ಹೋಗಿದೆ. ಮೋದಿ ಆಡಳಿತ ಅವಧಿಯಲ್ಲಿ ಯಾವುದೇ ದೊಡ್ಡ ದೊಡ್ಡ ಯೋಜನೆಗಳನ್ನು ಕೊಟ್ಟಿಲ್ಲ. ದೇಶವನ್ನು ಸಾಲದ ಸುಳಿಗೆ ಸಿಕ್ಕಿಸಿದ್ದಾರೆ ದೇಶದ ಜನರ ಮಧ್ಯ ಕಂದಕವನ್ನು ಸೃಷ್ಟಿ ಮಾಡಿ, ಇನ್ನೊಂದು ಕಡೆ ಜನರ ಬದುಕಿನ ಮೇಲೆ ಚಪ್ಪಡಿ ಕಲ್ಲು ಎಳೆಯುವ ಕೆಲಸ ಮಾಡುತ್ತಿದ್ದಾರೆ. ದೇಶದ ಉದ್ದಗಲಕ್ಕೂ ಬೆಲೆ ಏರಿಕೆಯಾಗಿದೆ. ಬಿಜೆಪಿಯವರು ಮೈಸೂರಿನಿಂದ ಜನಾಕ್ರೋಶ ಯಾತ್ರೆ ಮಾಡಿದ್ದಾರೆ. ಜನಾಕ್ರೋಶ ನಿಜವಾಗಿ ಇರೋದು ಕೇಂದ್ರ ಸರ್ಕಾರದ ಮೇಲೆ. ತಾಕತ್ತಿದ್ದರೆ ಬಿಜೆಪಿಯವರು ಸಾರ್ವಜನಿಕ ಚರ್ಚೆಗೆ ಬನ್ನಿ. ಬೆಲೆ ಏರಿಕೆಗೆ ಯಾರು ಕಾರಣ ಎಂದು ಸಾರ್ವಜನಿಕ ಚರ್ಚೆ ಮಾಡೋಣ ಬನ್ನಿ ಎಂದು ವಿ.ಎಸ್ ಉಗ್ರಪ್ಪ ಸವಾಲು ಹಾಕಿದರು.

ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಅಗತ್ಯ ವಸ್ತುಗಳ ಮೇಲಿನ ಬೆಲೆ ಕಡಿಮೆ ಇದೆ. ನಮ್ಮ ಸರ್ಕಾರದ ಮೇಲೆ ಆರೋಪ ಮಾಡುವುದಕ್ಕಿಂತ ನಿಮ್ಮ ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಮಾಡಿ. ಗ್ಯಾಸ್ ಮೇಲೆ ದಿಢೀರನೇ 50 ರೂ ಹೆಚ್ಚಳ ಮಾಡಿರುವುದು ಈ ಕೂಡಲೇ ವಾಪಸ್ ಪಡೆಯಬೇಕು. ವಿಜಯೇಂದ್ರ ಇನ್ನೂ ಎಳಸು ಇನ್ನೂ ಬಲಿತಿಲ್ಲ. ನಮ್ಮ ವಿರುದ್ಧ ಜನಾಕ್ರೋಶ ಮಾಡುವ ಬದಲು ಕೇಂದ್ರ ಸರ್ಕಾರದ ವಿರುದ್ಧ ಮಾಡಿ ಮಿಸ್ಟರ್ ಅಶೋಕ್, ಮಿಸ್ಟರ್ ವಿಜಯೇಂದ್ರ ಎಂದು ಏಕವಚನ  ವಾಗ್ದಾಳಿ ನಡೆಸಿದರು.

ಅಂದಾನಿ,ಅದಾನಿಗಳ ಸಾಲ ಮನ್ನಾ ಮಾಡ್ತಾರೆ. ನಮ್ಮ ರೈತರ ಸಾಲ ಯಾಕೆ ಮನ್ನಾ ಮಾಡುತ್ತಿಲ್ಲ. ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಪಕ್ಷ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ವಿಎಸ್ ಉಗ್ರಪ್ಪ ನುಡಿದರು.

ಜಾತಿ ಗಣತಿ ವರದಿ ಅವೈಜ್ಞಾನಿಕ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿ.ಎಸ್ ಉಗ್ರಪ್ಪ, ಹಿಂದುಳಿದ ವರ್ಗಗಳ ಕಮಿಷನ್ ಪ್ರಕಾರ, ಸೆಕ್ಷನ್ 9 ಸಬ್ ಕ್ಲಾಸ್ 2 ರ ಪ್ರಕಾರ ಜಾತಿಗಣತಿ ನಡೆಸುವಾಗೆಯೇ ಇಲ್ಲ. ಯಾರನ್ನ ಸೇರಿಸಬೇಕು ಯಾರನ್ನ ತೆಗೆಯಬೇಕು ಎಂದು ಒಂದು ಸಮೀಕ್ಷೆ ಮಾತ್ರ ಮಾಡಿದ್ದಾರೆ. ಇದೊಂದು ಸಮೀಕ್ಷೆ ಜಾತಿ ಜನಗಣತಿ ಅಲ್ಲ. ಅವಶ್ಯಕತೆ ಬಿದ್ದರೆ ಮೀಸಲಾತಿ ಪ್ರಮಾಣವನ್ನ ಹೆಚ್ಚಳ ಮಾಡುವ ದೃಷ್ಟಿಯಿಂದ ಗಣತಿ ಅವಶ್ಯಕತೆ ಇದೆ. ನಾನೇ ಇದುವರೆಗೆ ಸಂಪೂರ್ಣವಾಗಿ ಜಾತಿ ಗಣತಿ ವರದಿ ಓದಿಲ್ಲ. ಮೊದಲು ಈ ವಿಚಾರಕ್ಕೆ ಕೈ ಹಾಕಿದವರು ಸಿದ್ದರಾಮಯ್ಯನವರು ಬಳಿಕ ಬಿಹಾರ್ ನಲ್ಲಿ ಶುರು ಮಾಡಿದರು. ದೇಶವಾರು ಜಾತಿ ಗಣತಿ ಆಗಬೇಕು ಎಂಬ ಒತ್ತಾಯ ಕೂಡ ಇದೆ. ಇದು ವೈಜ್ಞಾನಿಕವಾಗಿ ಚರ್ಚೆ ನಡೆಯುತ್ತಿದೆ. ರಾಜ್ಯದ ಹಿತ ದೃಷ್ಟಿಯಿಂದ ಏನು ಮಾಡಬೇಕೆಂದು ಎಂದು ಸಿದ್ದರಾಮಯ್ಯ, ಶಿವಕುಮಾರ್ ಸೂಕ್ತ ನಿರ್ಧಾರ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ 95% ಸಮೀಕ್ಷೆ ಆಗಿದೆ ಎಂದು ಹೇಳುತ್ತಾರೆ.

ಕೋಣನ‌ ನೀರಿಗೆ ತಳ್ಳಿ ಕೊಂಬನ್ನ ನೋಡಿ ವ್ಯಾಪಾರ ಮಾಡಿದಂತಾಗುತ್ತದೆ ಎಂದು ಗಾದೆ ಮಾತಿನ ಮೂಲಕ ಜಾತಿ ಗಣತಿ ವರದಿ ಅಧ್ಯಯನ ಮಾಡದೇ ವಿರೋಧ ಮಾಡೋದು ಸರಿಯಲ್ಲ ಎಂದು ವಿಎಸ್ ಉಗ್ರಪ್ಪ ಟಾಂಗ್ ಕೊಟ್ಟರು .

Key words: Modi, weakest, PM, V.S. Ugrappa, Mysore