ರಾಮನಗರ,ಏಪ್ರಿಲ್,22,2024 (www.justkannada.in): ದೇಶದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಖಾಲಿ ಹುದ್ದೆಗಳನ್ನ ಭರ್ತಿ ಮಾಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು.
ಚನ್ನಪಟ್ಟಣದಲ್ಲಿ ಇಂದು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನರೇಂದ್ರ ಮೋದಿ ಕೊಟ್ಟಿರುವ ಯಾವುದೇ ಭರವಸೆ ಈಡೇರಿಸಿಲ್ಲ ಉದ್ಯೋಗ ಕೊಡುತ್ತೇನೆ, ಕಪ್ಪು ಹಣ ತರುತ್ತೇನೆ ಎಂದರು. ಆದರೆ ಇದನ್ನ ಮಾಡಲಿಲ್ಲ. ರೈತರ ವಿರೋಧಿ ಕೃಷಿ ನೀತಿ ಜಾರಿಗೆ ತಂದರು . ಪೆಟ್ರೋಲ್ ಡೀಸೆಲ್ ಬೆಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಸಾಮಾನ್ಯ ಜನರು ಸಂಕಷ್ಟದಲ್ಲಿದ್ದಾರೆ ಎಂದು ಗುಡುಗಿದರು.
ದೇಶದಲ್ಲಿ 30 ಲಕ್ಷ ಹುದ್ದೆ ಖಾಲಿ ಇದ್ದರೂ ಭರ್ತಿಯಾಗಿಲ್ಲ. ಇದರಿಂದ ಯುವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹುದ್ದೆ ತುಂಬಿದರೇ ಎಸ್. ಸಿ, ಎಸ್ ಟಿಗೆ 50 % ಮೀಸಲಿಡಬೇಕು ಎಂದು ತುಂಬುತ್ತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಾಲಿ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದರು.
Key words: Vacancies, Congress, power, Mallikarjuna Kharge