ನವದೆಹಲಿ,ಜೂನ್,28,2021(www.justkannada.in): ದೇಶದಲ್ಲಿ ಕೊರೋನಾ 2ನೇ ಅಲೆ ತಗ್ಗಿದ್ದು ಇದೀಗ 3ನೇ ಅಲೆಯ ಭೀತಿ ಎದುರಾಗಿದೆ. ಈ ಮಧ್ಯೆ ಲಸಿಕಾ ಅಭಿಯಾನದಲ್ಲಿ ಭಾರತ ಅಮೇರಿಕಾವನ್ನ ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದೆ.ವಿಶ್ವದಲ್ಲೇ ಹೆಚ್ಚು ಲಸಿಕೆ ನೀಡಿದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೇಶದಲ್ಲಿ ನೀಡಲಾದ ಒಟ್ಟು ಲಸಿಕೆ ಡೋಸ್ ಗಳಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿದ್ದು ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ದೇಶಾದ್ಯಂತ ಲಸಿಕೆ ಅಭಿಯಾನ ಅಡಿಯಲ್ಲಿ ಇಲ್ಲಿಯವರೆಗೆ 32.36 ಕೋಟಿ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಅಮೆರಿಕಾ ಈವರೆಗೆ 32.33 ಕೋಟಿ, ಬ್ರಿಟನ್‌ನಲ್ಲಿ 7.67 ಕೋಟಿ, ಇಟಲಿಯಲ್ಲಿ 4.96 ಕೋಟಿ, ಜರ್ಮನಿಯಲ್ಲಿ 7.14 ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಭಾರತವು ವಿಶ್ವದಲ್ಲೇ ಹೆಚ್ಚು ಲಸಿಕೆ ಹಾಕಿದ ದೇಶವಾಗಿದೆ.
ಕಳೆದ 24 ಗಂಟೆಗಳಲ್ಲಿ 17,21,268 ಡೋಸ್ ಗಳನ್ನು ನೀಡಿದ ನಂತರ, ಭಾರತವು ಕೋವಿಡ್-19 ಲಸಿಕೆಗಳ ಒಟ್ಟು ಸಂಖ್ಯೆ ಅಮೇರಿಕಾದ ಸಂಖ್ಯೆಯನ್ನು ಮೀರಿದೆ. ಭಾರತದಲ್ಲಿ ಆನ್‌ಲೈನ್ ಮತ್ತು ಆನ್‌ಸೈಟ್ ನೋಂದಣಿ ವ್ಯವಸ್ಥೆಯಿದೆ. ಲಸಿಕೆ ಪಡೆಯುವ ನಾಗರಿಕರು ಕೋ-ವಿನ್ ಪೋರ್ಟಲ್, ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿ ಮಾಡಬಹುದು.
Key words: Vaccination –campaign- India – first – overtake – USA.