ನವದೆಹಲಿ,11,2021(www.justkannada.in): ಕೊರೋನಾ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಹಂತದಲ್ಲಿದ್ದು, ಜನವರಿ 16 ರಿಂದ ಕೊರೋನಾ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಲಿದೆ. ಮೊದಲ ಹಂತದಲ್ಲಿ ಉಚಿತ ಲಸಿಕೆ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜತೆ ಕೋವಿಡ್ ಲಸಿಕೆ ಹಂಚಿಕೆ ಕುರಿತು ಚರ್ಚೆ ನಡೆಸಿದರು. ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಜನವರಿ 16ರಿಂದ ದೇಶದಲ್ಲಿ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಲಿದೆ. ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಅಮೇಲೆ ಫ್ರಂಟ್ ಲೈನ್ ವಾರಿಯರ್ಸ್ ಗೆ ಲಸಿಕೆ ನೀಡಲಾಗುತ್ತದೆ. ಈ ಮೂಲಕ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನ ನಡೆಯಲಿದೆ. ಲಸಿಕೆ ಅಭಿಯಾನ ಬೇರೆ ದೇಶಗಳಿಗೆ ಮಾದರಿಯಾಗಬೇಕು ಎಂದರು.
ವಿದೇಶಿ ಲಸಿಕೆ ನಂಬಿದ್ದರೇ ಬಹಳ ಕಷ್ಟವಾಗುತ್ತಿತ್ತು. 8,9 ತಿಂಗಳ ಹಿಂದೆ ಇದ್ದ ಭಯ ಈಗ ಇಲ್ಲ. ಜನ ಹೊರಗಡೆ ಬಂದು ಓಡಾಡುತ್ತಿದ್ದಾರೆ. ಚುನಾವಣೆ ಮಾದರಿಯಲ್ಲಿ ಕೊರೋನಾ ಲಸಿಕೆ ಹಂಚಿಕೆ ಅಭಿಯಾನ ಮಾಡುತ್ತೇವೆ ಬೂತ್ ಮಟ್ಟದ ಕಾರ್ಯತಂತ್ರ ಅನುಸರಿಸುತ್ತೇವೆ. ವಿಶ್ವದಲ್ಲಿ ಎರಡುವರೆ ಕೋಟಿ ಜನ ವ್ಯಾಕ್ಸಿನ್ ಪಡೆದಿದ್ದಾರೆ. ಲಸಿಕಾ ವೆಚ್ಚವನ್ನ ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ದೇಶೀಯವಾಗಿ ಉತ್ಪಾದಿಸಲಾದ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಬಳಕೆಗೆ ಅನುಮತಿ ದೊರಕಿದೆ. ಮೂರು ಕೋಟಿ ಜನರಿಗೆ ಲಸಿಕೆ ನೀಡಿದ ನಂತರ ನಾವು ಮತ್ತೊಮ್ಮೆ ಮಾತುಕತೆಗೆ ಕುಳಿತುಕೊಳ್ಳೋಣ ಎಂದು ಪ್ರಧಾನಿ ಹೇಳಿದರು.
ಕೊವಿಶೀಲ್ಡ್ ಪ್ರತಿ ಡೋಸ್ ನ ಬೆಲೆ 220 ರೂಪಾಯಿ. ರಿಯಲ್ ಟೈಮ್ ಲಸಿಕೆ ಅಂಕಿಅಂಶದ ಬಗ್ಗೆ ಕೋವಿನ್ ಆಯಪ್ ನಲ್ಲಿ ಮಾಹಿತಿ ಅಪ್ ಡೇಟ್ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದರು.
Key words: Vaccination- campaign-jan. 16- Prime Minister -Narendra Modi.