ಮೈಸೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕುವ ಕಾರ್ಯ ತಾತ್ಕಾಲಿಕ ಸ್ಥಗಿತ.

ಮೈಸೂರು,ಜೂನ್,28,2021(www.justkannada.in):  ಮೈಸೂರು ಜಿಲ್ಲೆಯಲ್ಲಿ ಲಸಿಕೆ ಖಾಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಿಟ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.jk

ನಿರೀಕ್ಷಿತ ಪ್ರಮಾಣದಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಡೋಸ್‌ ಗಳು ಉತ್ಪಾದನೆಯಾಗದ ಹಿನ್ನೆಲೆಯಲ್ಲಿ ಲಸಿಕೆ ಪೂರೈಕೆಯಾಗದಂತಾಗಿ ಭಾನುವಾರ ಶೂನ್ಯ ಡೋಸ್ ಗಳಿಗೆ ಬಂದಿದ್ದು, ಹೀಗಾಗಿ ಮೈಸೂರು ಜಿಲ್ಲೆಯಲ್ಲಿ  ತಾತ್ಕಾಲಿಕವಾಗಿ ಲಸಿಕೆ ಹಾಕುವ ಕಾರ್ಯ ಸ್ಥಗಿತಗೊಳಿಸಲಾಗಿದೆ.

ಇನ್ನು ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಕಾಲೇಜಿನ ಸಿಬ್ಬಂದಿ, ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಬೇಕಾಗಿರುವ ಹಿನ್ನೆಲೆಯಲ್ಲಿ ಮುಂಚೂಣಿ ಕಾರ್ಯಕರ್ತರು, ಆದ್ಯತಾ ವಲಯದ ಕಾರ್ಯಕರ್ತರಿಗೂ ಹಾಕಲಾಗುತ್ತಿದ್ದ ಲಸಿಕೆ ಕಾರ್ಯವನ್ನು ನಿಲ್ಲಿಸುವಂತೆ  ಸೂಚಿಸಲಾಗಿದೆ ಎನ್ನಲಾಗಿದ್ದು, ಹೀಗಾಗಿ ಪ್ರಾಥಮಿಕ, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆ ಹಾಕುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಮೈಸೂರು ಜಿಲ್ಲೆಯಲ್ಲಿ 51 ಲಕ್ಷ ಮಂದಿಗೆ ಲಸಿಕೆ ಹಾಕಬೇಕಿದೆ. ಆದರೆ ಇದುವರೆಗೆ 12 ಲಕ್ಷದಷ್ಟು ಮಂದಿಗೆ ಮಾತ್ರ ವ್ಯಾಕ್ಸಿನ್ ಹಾಕಲಾಗಿದ್ದು, ಉಳಿದ 39 ಲಕ್ಷ ಜನರಿಗೆ ಲಸಿಕೆ ಹಾಕಬೇಕಾಗಿದೆ. ಆದರೆ ಲಸಿಕೆ ಪೂರೈಕೆಯಾಗದೆ ಲಸಿಕೆ ಹಾಕುವ ಕಾರ್ಯ ತಾತ್ಕಾಲಿಕ ಸ್ಥಗಿತವಾಗಿದೆ. ಜತೆಗೆ ಪದವಿ ವಿದ್ಯಾರ್ಥಿಗಳಿಗೆ ಲಸಿಕಾ ಕೊಡುವ ಕೆಲಸ ಪ್ರಾರಂಭಿಸಲು ಡೋಸ್‌ಗಳನ್ನು ದಾಸ್ತಾನು ಮಾಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಇನ್ನು ಚಾಮರಾಜನಗರದಲ್ಲಿ 350 ಡೋಸ್ , ಮಂಡ್ಯ ಜಿಲ್ಲೆಯಲ್ಲಿ 11,100 ಡೋಸ್, ಕೊಡಗು ಜಿಲ್ಲೆಯಲ್ಲಿ 1,920 ಡೊಸ್ ಲಸಿಕೆ ಲಭ್ಯವಿದೆ. ಮೈಸೂರಿನಲ್ಲಿ ಸರ್ಕಾರಿ ಲಸಿಕಾ  ಕೇಂದ್ರಗಳು  ತಾತ್ಕಾಲಿಕ ಬಂದ್ ಆಗಿರುವ ಹಿನ್ನೆಲೆ ಹಣ ಕೊಟ್ಟರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿರಲಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಜೂನ್ 29 ರಂದು ಕಾಲೇಜು ವಿದ್ಯಾರ್ಥಿಗಳ ಲಸಿಕೆ ಮೆಗಾ  ಕ್ಯಾಂಪ್ ಆಯೋಜನೆ ಮಾಡಲಾಗಿದೆ.  4,500 ಡೋಸ್ ಲಸಿಕೆ ಬರಲಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ವಿಶ್ವೇಶ್ವರಯ್ಯ ತಿಳಿಸಿದ್ದಾರೆ. ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಶನಿವಾರದಿಂದಲೇ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ 11,100 ಲಸಿಕೆಗಳ ದಾಸ್ತಾನು ಇದೆ.

ENGLISH SUMMARY….

COVID-19 vaccination campaign in Mysuru Dist. Govt. Hospitals temporarily halted
Mysuru, June 28, 2021 (www.justkannada.in): The COVID-19 Vaccination process in government hospitals in Mysuru District, except private hospitals, has been temporarily halted as the vaccine stocks are over.
As Covishield and Covaxin doses are not being produced as per the expected numbers supply has been hit. As a result, no doses came to Mysuru resulting in the halting of the vaccination process temporarily.
It is was also planned to provide vaccination to all the staff of Colleges that come under the University of Mysore and PG students on a preferential basis, which also has been halted. Thus, the vaccination process in primary, taluk, and district hospitals has been postponed temporarily.
According to the available health department information vaccine has to be given to 51 lakh people in Mysuru District. As of now, vaccination has been provided to 12 lakh people in Mysuru District and the remaining 39 lakh people have to be provided vaccine.
While 350 doses are available in Chamarajanagara, 11,110 doses were available in Mandya and 1,920 doses are available in Kodagu. Those who can afford to spend money can still avail the doses in private hospitals based on availability.
Keywords: Mysuru District/ COVID-19 / Vaccination/ halted temporarily

Key words: Vaccination – government –hospital- Mysore district- Temporary –bandh