ಬೆಂಗಳೂರು,ಜನವರಿ,11,2021(www.justkannada.in): ಜನವರಿ 16ರಿಂದ ಕೊರೋನಾ ಲಸಿಕೆ ವಿತರಣೆ ದೇಶದಲ್ಲಿ ಆರಂಭಗೊಳ್ಳಲಿದೆ. ರಾಜ್ಯದ 16 ಲಕ್ಷ ಕೊರೋನಾ ವಾರಿಯರ್ಸ್ ಗಳಿಗೆ ಲಸಿಕೆ ಹಂಚಿಕೆ ಮಾಡಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಕೊರೋನಾ ಲಸಿಕೆ ಹಂಚಿಕೆ ಮತ್ತ ನೀಡಿಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಜತೆ ವೀಡಿಯೋ ಕಾನ್ಫೆರೆನ್ಸ್ ಪಾಲ್ಗೊಂಡ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಕೊರೊನಾ ಲಸಿಕೆ ವಿತರಣೆಗೆ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರದಿಂದ ಲಸಿಕೆ ಬಂದ ನಂತರ ಹಂಚಿಕೆ ಮಾಡಲಾಗುತ್ತದೆ ಎಂದರು.
ಒಂದು ಕೋವ್ಯಾಕ್ಸಿನ್, ಮತ್ತೊಂದು ಕೋವಿಶೀಲ್ಡ್ ಲಸಿಕೆ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ಡೋಸ್ ನ ಪಡೆದ ನಂತ್ರ 28 ದಿನಗಳಿದೆ ಎರಡನೇ ಡೋಸ್ ನೀಡಲಾಗುತ್ತದೆ. ಇದಕ್ಕಾಗಿ ರಾಜ್ಯದಲ್ಲಿ 235 ಲಸಿಕಾ ಕೇಂದ್ರಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿರುವಂತ ಮೊದಲ ಹಂತದಲ್ಲಿ 16 ಲಕ್ಷ ಕೊರೋನಾ ವಾರಿಯರ್ಸ್ ಗಳಿಗೆ ಕೊರೋನಾ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.
Key words: Vaccine -Distribution – 16 lakh- Corona Warriors – State-CM BS Yeddyurappa.