ಮಂಗಳೂರು,ಜುಲೈ,13,2021(www.justkannada.in): ಹಾಲಿ ಲಭ್ಯವಿರುವ ಕೊರೊನಾ ವೈರಸ್ ಲಸಿಕೆಗಳಿಂದ ಡೆಲ್ಟಾ ಪ್ಲಸ್ ಕೊರೊನಾ ವೈರಾಣುವಿನಿಂದಲೂ ರಕ್ಷಣೆ ಸಿಗಲಿದೆ ಎಂದು ಅಮೆರಿಕದ ಇಲ್ಲಿನಾಯ್ಸ್ ವಿಶ್ವವಿದ್ಯಾನಿಲಯದ ತಾಂತ್ರಿಕ ಆವಿಷ್ಕಾರ ಮತ್ತು ತರಬೇತಿ ವಿಭಾಗದ ಹಿರಿಯ ಸಹ ಡೀನ್ ಡಾ.ಬೆಳ್ಳೂರು ಎಸ್.ಪ್ರಭಾಕರ್ ಅಭಿಪ್ರಾಯಪಟ್ಟರು.
ನಿಟ್ಟೆ ವಿಶ್ವವಿದ್ಯಾನಿಲಯದ ಸಾಂಸ್ಥಿಕ ಆವಿಷ್ಕಾರ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪರಿಣಾಮ ಉಪನ್ಯಾಸ ಸರಣಿ ಕಾರ್ಯಕ್ರಮದ ಭಾಗವಾಗಿ, ಕೋವಿಡ್–19 ನಂತರದ ಕ್ಲಿನಿಕಲ್ ಹಾಗೂ ಸಂಶೋಧನಾ ಅವಕಾಶಗಳು ವಿಚಾರ ಕುರಿತು ಅವರು ಉಪನ್ಯಾಸ ನೀಡಿದರು.
ಈಗಾಗಲೇ ಚಾಲ್ತಿಯಲ್ಲಿರುವ ಲಸಿಕೆಗಳು ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಲಸಿಕೆ ಪಡೆದವರಿಗೆ ಕೊರೊನಾ ವೈರಸ್ ಸೋಂಕು ಉಂಟಾದರೂ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವುದಿಲ್ಲ. ಸೋಂಕಿನ ತೀವ್ರ ಲಕ್ಷಣಗಳೂ ಇರುವುದಿಲ್ಲ. ಹಾಗಾಗಿ, ಲಸಿಕೆ ಪಡೆಯುವುದು ಅತಿ ಮುಖ್ಯವಾದುದು. ಇದೀಗ ಕೊರೊನಾ ವೈರಸ್ ನ ಅನೇಕ ಇತರ ಅವತರಣಿಕೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸುತ್ತಿರುವುದು ಸಹಜ. ಆದರೆ, ಲಸಿಕೆ ಪಡೆದವರು ಹೊಸ ವೈರಸ್ ಗಳ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ರಕ್ಷಣೆ ಖಂಡಿತವಾಗಿಯೂ ಸಿಗುವುದು ಎಂದು ಭರವಸೆ ನೀಡಿದರು.
ಇನ್‌ವರ್‌ಮೆಟ್ಸಿನ್, ರೆಮ್‌ಡಿಸಿವಿರ್, 2 ಡಿಜಿ ಮಾದರಿಯ ಔಷಧಗಳನ್ನು ಕೋವಿಡ್–19 ರೋಗಿಗಳಿಗೆ ನೀಡುವುದರಲ್ಲಿ ಯಾವ ಪ್ರಯೋಜನವೂ ಇಲ್ಲ. ಈ ಔಷಧಗಳನ್ನು ಪಡೆಯುವುದರಿಂದ ಕಾಯಿಲೆ ವಾಸಿಯಾಗುವುದು ಎಂಬ ಯಾವುದೇ ವೈಜ್ಞಾನಿಕ ಪುರಾವೆಗಳು ಸಿಕ್ಕಿಲ್ಲ. ರಾಜಕಾರಣಿಗಳು ಜನಸಾಮಾನ್ಯರನ್ನು ನಂಬಿಸುವ ಅಥವಾ ದಾರಿ ತಪ್ಪಿಸುವ ಕೆಲಸ ಮಾಡದೇ, ರೋಗದ ವಿರುದ್ಧದ ಸಂಶೋಧನೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪೋಸ್ಟ್ ಕೋವಿಡ್ ಆರೈಕೆ ಅಗತ್ಯ: ಕೋವಿಡ್ ನಂತರದ ಆರೈಕೆ ಅತ್ಯಗತ್ಯ. ಕೋವಿಡ್ ನಂತರದ ಆರೈಕೆ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಶುರು ಮಾಡಬೇಕು. ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್.ಹೆಗ್ಡೆ ಚಾರಿಟಬಲ್ ಆಸ್ಪತ್ರೆಯಲ್ಲಿ ಈ ರೀತಿಯ ಆರೈಕೆ ಕೇಂದ್ರ ತೆರೆದಿರುವುದು ಸಂತಸದ ಸಂಗತಿ. ನಮ್ಮ ವತಿಯಿಂದ ಎಲ್ಲ ರೀತಿಯ ವೈದ್ಯಕೀಯ ಸಲಹೆ, ಬೆಂಬಲವನ್ನು ಖಂಡಿತವಾಗಿಯೂ ನೀಡಲಾಗುವುದು ಎಂದು ಭರವಸೆ ನೀಡಿದರು.
ಎಂಬಾಯಿಟಿಕ್ ಲ್ಯಾಬರೋಟರೀಸ್ ಸಂಸ್ಥೆಯ ನಿರ್ದೇಶಕ ಹರೀಶ್ ಕೆ.ಜೈನ್ ಅವರು, ‘ಉದ್ಯಮಶೀಲತೆಯ ಆಯಾಮಗಳು’ಕುರಿತು ಉಪನ್ಯಾಸ ನೀಡಿದರು. ಈಗಿನದು ಸೂಪರ್ ಜೆನರಿಕ್ ಔಷಧಗಳ ಕಾಲ. ಈ ಔಷಧಗಳ ಸಂಶೋಧನಾ ವೆಚ್ಚ, ತಗುಲುವ ಸಮಯ ಕಡಿಮೆ. ಆದರೆ, ಪರಿಣಾಮ ಅತಿ ಹೆಚ್ಚು. ಹಾಗಾಗಿ, ಔಷಧ ಉದ್ಯಮಗಳು ಹೊಸ ಸಂಶೋಧನೆಗಳಿಗೆ ಅಳವಡಿಸಿಕೊಂಡು ಕಾರ್ಯನಿರ್ವಹಿಸಿದರೆ ಅನುಕೂಲ ಹೆಚ್ಚು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳಿಗೆ ಆದ್ಯತೆ ನೀಡಬೇಕು. ಇದರಿಂದ ರೋಗಿಗಳಿಗೆ ಅನುಕೂಲವಾಗುತ್ತದೆ. ಅಲ್ಲದೇ, ಸಮಾಜವು ಸುಸ್ಥಿತಿಯಲ್ಲಿ ಇರಲು ಸಹಾಯವಾಗುತ್ತದೆ. ಅಲ್ಲದೇ, ನಮ್ಮ ಕೆ.ಎಸ್.ಹೆಗ್ಡೆ ಚಾರಿಟಬಲ್ ಆಸ್ಪತ್ರೆಯಲ್ಲಿ ಪೋಸ್ಟ್ ಕೋವಿಡ್–19 ಆರೈಕೆ ಕೇಂದ್ರವನ್ನು ಬಹು ದಿನಗಳ ಹಿಂದೆಯೇ ಸ್ಥಾಪಿಸಲಾಗಿದೆ. ಕೇಂದ್ರದಲ್ಲಿ ಅತ್ಯುತ್ತಮ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಸಾಂಸ್ಥಿಕ ಆವಿಷ್ಕಾರ ಸಮಿತಿಯ ನಿರ್ದೇಶಕ ಪ್ರೊ.ಜಿ.ಶ್ರೀನಿಕೇತನ್ ಅವರು ಸ್ವಾಗತ ಭಾಷಣ ಮಾಡಿದರು. ಪರಿಣಾಮ ಉಪನ್ಯಾಸ ಸರಣಿ ಕಾರ್ಯಕ್ರಮದ ಸಂಯೋಜಕ ಡಾ.ಎಂ.ವಿಜಯ್ ಕುಮಾರ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ENGLISH SUMMARY….
Vaccines protects from Delta Plus virus – Researcher Dr. Belluru S. Prabhakar
Mangaluru, July 13, 2021 (ww.justkannada.in): The COVID vaccines that are available now are capable of protecting us from even the Delta Plus virus according to Dr. Belluru S. Prabhakar, Senior Co-Dean, Technical Innovation and Training Division, Illinois University, USA.
He participated in a lecture program on the topic, “Post COVID-19 Clinical and Research Opportunities,” organized as part of the lecture series, by the Institutional Innovation Committee, Nitte University.
In his lecture, he opined, “the vaccines that are given presently have been proven effective. Even though people who have taken the vaccine get infected with the Coronavirus chances of developing a serious illness are very less. Hence, everyone needs to take the vaccination. Variants of coronavirus creating panic among the people is quite natural. But, there is no need to worry for those who have already taken the vaccination. It will give protection.”
Further, he said giving Invermetcin, Remdesivir, 2 DG medicines to COVID-19 patients won’t help as there is no scientific evidence to prove that these medicines will cure the infection. Instead of misleading the people about COVID-19 and vaccination, the politicians should cooperate with the research against COVID-19, he added.
On the occasion, he also informed that post COVID care is essential and suggested the government take measures to open more post COVID care centers. “It is very good to know that the K.S. Hegde Charitable Hospital of Nitte University has opened a post COVID care center and assured of providing all kinds of medical advice and required support.
Earlier the program commenced with a welcome address by Prof. G. Sriniketan, Director, Institutional Innovation Committee, and Dr. M. Vijaykumar, Lecture Series program coordinator anchored the program.
Keywords: Nitte University/ COVID-19 Pandemic/ Coronavirus/ vaccine/ provides protection/ Delta Plus virus/ Post COVID care centre
Key words: vaccines -Protection- against- Delta Plus virus-Researcher -Dr. Bellur S Prabhakar