ಮೈಸೂರು,ಜನವರಿ,9,2025 (www.justkannada.in): ಮೈಸೂರು ಜಿಲ್ಲೆ ಟಿ. ನರಸೀಪುರ ಪಟ್ಟಣದ ಗುಂಜಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ 9ನೇ ವರ್ಷದ ವೈಕುಂಠ ಏಕಾದಶಿ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಶ್ರೀ ವಿಷ್ಣು ಸಹಸ್ರನಾಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿವಿಧ ಪುಷ್ಪಾಲಂಕಾರ ಮತ್ತು ವಿದ್ಯುತ್ ದೀಪಾಲಂಕಾರಗಳಿಂದ ಶ್ರೀ ಮಹಾಲಕ್ಷ್ಮಿ ಸಮೇತ ಗುಂಜಾನರಸಿಂಹಸ್ವಾಮಿ ದೇವಾಲಯ ಸಜ್ಜಾಗಿದೆ.
ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಗುಂಜಾನರಸಿಂಹಸ್ವಾಮಿ ದೇವಸ್ಥಾನದ ಅರ್ಚಕ ಶ್ರೀಧರ್, ವಿಷ್ಣು ಸಹಸ್ರನಾಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಒಂಬತ್ತು ವರ್ಷಗಳಿಂದ ಭಕ್ತಿ ಭಾವದೊಂದಿಗೆ ಏಕಾದಶಿ ನಡೆಯುತ್ತಿದೆ. ಏಕಾದಶಿಗೂ ಮುನ್ನ 48 ದಿನಗಳ ಕಾಲ ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸಿ ವಿವಿಧ ಪೂಜಾ ಕೈಂಕರ್ಯ ನಡೆಯುತ್ತಿದೆ. ಮಂಡಲದ ಪೂಜೆ ಮುಗಿಸಿ ನಾಳೆ ವೈಕುಂಠ ಏಕಾದಶಿಗೆ ಸಪ್ತ ದ್ವಾರಗಳನ್ನು ತೆರೆಯಲಾಗುವುದು. ಈ ವೇಳೆ ವೈಕುಂಠವೇ ಬಾಸವಾದ ರೀತಿಯಲ್ಲಿ ಕಾಣುತ್ತದೆ. ಬೆಳಗ್ಗೆ ಐದು ಗಂಟೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಸಪ್ತ ದ್ವಾರಗಳನ್ನು ಸ್ವಾಮಿಯ ದರ್ಶನವನ್ನು ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಕ್ತಿ ಭಾವ ಮೆರೆದು ಪುನೀತರಾಗಬೇಕು. ಬರುವ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಇರುತ್ತದೆ ಎಂದು ತಿಳಿಸಿದರು.
Key words: Tomorrow, 9th annual, Vaikuntha Ekadashi, Gunja Narasimhaswamy Temple.