ವಿಪಕ್ಷಗಳು ನಮ್ಮ ಬಗ್ಗೆ ಮಾಡಿರುವ ಆರೋಪ ಸತ್ಯಕ್ಕೆ ದೂರ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,27,2024 (www.justkannada.in):  ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ನಮ್ಮ ಬಗ್ಗೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದು ವಿಧಾನ ಪರಿಷತ್ ನಲ್ಲಿ  ನಿಯಮ 68ರ ಮೇಲಿನ ಚರ್ಚಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದರು. ಈ ವೇಳೆ  ಯಾಕೆ ತನಿಖೆಗೆ ಮೊದಲೇ ನೀಡಲಿಲ್ಲ ಎಂದು  ಬಿಜೆಪಿ ಸದಸ್ಯ ಎನ್. ರವಿಕುಮಾರ್  ಪ್ರಶ್ನಿಸಿದರು . ಬಿಜೆಪಿ ಒಂದೇ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದಾರಿ ತಪ್ಪಿಸಬೇಕು ಅಂತಾ ಪದೇ ಪದೇ ಎದ್ದೇಳುತ್ತಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ ತಪ್ಪಿತಸ್ಥರು ಯಾರು ಎಂಬುದು ಗೊತ್ತಾಗುತ್ತೆ. ಯಾರು ಅಕ್ರಮ ಮಾಡಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ತಿಳಿಯುತ್ತೆ.  ಯಾರೇ ತಪ್ಪು ಮಾಡಿದರೂ ಶಿಕ್ಷೆ ಕೊಡಿಸಲು ಪ್ರಯತ್ನ ಮಾಡುತ್ತೇವೆ ಎಂದರು.

ವಿಪಕ್ಷಗಳು ನಮ್ಮ ಬಗ್ಗೆ ಮಾಡಿರುವ ಆರೋಪ ಸತ್ಯಕ್ಕೆ ದೂರ.  ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆ ಆಗಿ ತೀರುತ್ತೆ.  ಸುಳ್ಳನೇ ನೂರು ಸಾರಿ ಹೇಳುವುದರಲ್ಲಿ ಬಿಜೆಪಿಯವರು ನಿಸ್ಸಿಮರುಎಂದು ಸಿಎಂ ಸಿದ್ದರಾಮಯ್ಯ ಕಾಲೆಳೆದರು. ಈ ವೇಳೆ ಭ್ರಷ್ಟಾಚಾರದಲ್ಲಿ ನೀ ವುನಿಸ್ಸೀಮರು ಎಂದು ರವಿ ಕುಮಾರ್ ಟಾಂಗ್ ಕೊಟ್ಟರು. ಈ  ಮಾತು ಕೇಳಿದ ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್ ಅವರು ಬಿಜೆಪಿಯವರನ್ನ ಆಚೆ ಹಾಕಿ ಎಂದರು. ಇದರಿಂದ ಕೋಪಗೊಂಡ ಬಿಜೆಪಿ ಸದಸ್ಯರು ಆಚೆ ಹಾಕಿ ಎನ್ನಲು ಅವರು ಯಾರು..? ಎಂದು ಕಿಡಿಕಾರಿದರು.

Key words: Valmiki corporation, scam, CM Siddaramaiah, session