ಕರ್ನಾಟಕ ಬಂದ್ ಗೆ ಫಿಲಂ ಚೇಂಬರ್ ನ ನೈತಿಕ ಬೆಂಬಲ ತಿರಸ್ಕರಿಸಿದ ವಾಟಾಳ್ ನಾಗರಾಜ್.

ಬೆಂಗಳೂರು,ಡಿಸೆಂಬರ್,24,2021(www.justkannada.in): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿ ಪುಂಡಾಡ ಮೆರೆದ ಎಂಇಎಸ್ ನಿಷೇಧಿಸಬೇಕೆಂದು ಆಗ್ರಹಿಸಿ ಡಿಸೆಂಬರ್ 31ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ನೈತಿಕ ಬೆಂಬಲ ನೀಡಿದೆ.

ಆದರೆ ಫಿಲಂ ಚೇಂಬರ್ ನೀಡಿರುವ ನೈತಿಕ ಬೆಂಬಲವನ್ನ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿರಸ್ಕರಿಸಿದ್ದಾರೆ. ಫಿಲಂ ನೈತಿಕ ಬೆಂಬಲ ನಮಗೆ ಬೇಡ. ಅದನ್ನ ನಾನು ತಿರಸ್ಕರಿಸುತ್ತೇನೆ. ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿದ್ದಾರೆ. ಕನ್ನಡ ಬಾವುಟ ಸುಟ್ಟಿದ್ದಾರೆ. ಆದರೂ ಸಹ ನೀವು ನೈತಿಕ ಬೆಂಬಲ ನೀಡುತ್ತೀರಾ..?  ಎಲ್ಲರೂ ಬೀದಿಗಿಳಿದು ಬಂದ್ ಗೆ ಬೆಂಬಲ ನೀಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

panchamasali- reservation-  Vatal Nagaraj –outrage-against- swamiji’s

ಇನ್ನೊಂದೆಡೆ ಫಿಲಂ ಚೇಂಬರ್ ನ  ನೈತಿಕ ಬೆಂಬಲಕ್ಕೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಕಿಡಿಕಾರಿದ್ದಾರೆ.  ನೈತಿಕ ಬೆಂಬಲ ಬೇಡ. ಚಿತ್ರೋದ್ಯಮ ಬಂದ್ ಮಾಡಬೇಕು.  ನೀವು ಕನ್ನಡಿಗರಲ್ವಾ, ನಾಚಿಕೆ ಆಗಲ್ವಾ ದಬ್ಬಾಳಿಕೆ ಮಾಡುತ್ತಿದ್ದರೂ ನೈತಿಕ ಬೆಂಬಲ ಕೊಡ್ತೀರಾ. ಸ್ವಾಭಿಮಾನ ಇದ್ರೆ ಬೆಂಬಲ ಕೊಡಿ ಎಂದು ಸಾ.ರಾ ಗೋವಿಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Key words: Vatal Nagaraj-rejected -Film Chamber’s -moral support – Karnataka bandh.